ಕರ್ನಾಟಕ

karnataka

ETV Bharat / sitara

'ಸಾಹೋ' ನಿರ್ದೇಶಕ ಸುಜೀತ್ ಜೊತೆ ಸಿನಿಮಾ ಮಾಡಲಿದ್ದಾರಾ ಸುದೀಪ್​...? - Sudeep and Sujit meeting

'ಸಾಹೋ' ನಿರ್ದೇಶಕ ಸುಜೀತ್ ಹಾಗೂ ಕಿಚ್ಚ ಸುದೀಪ್ ಭೇಟಿ ಆಗಿದ್ದು ಸುಜೀತ್ ನಿರ್ದೇಶನದ ಚಿತ್ರದಲ್ಲಿ ಸುದೀಪ್ ನಟಿಸುತ್ತಿರಬಹುದು ಎನ್ನಲಾಗುತ್ತಿದೆ. ಸುದೀಪ್, ಉಪೇಂದ್ರ ಅಭಿನಯದ 'ಕಬ್ಜ' ಚಿತ್ರದಲ್ಲಿ ಅತಿಥಿ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.

Sudeep
ಸುದೀಪ್

By

Published : Mar 3, 2021, 11:49 AM IST

ಕಿಚ್ಚ ಸುದೀಪ್ ಸದ್ಯಕ್ಕೆ 'ವಿಕ್ರಾಂತ್ ರೋಣ' , 'ಕೋಟಿಗೊಬ್ಬ -3' ಚಿತ್ರದ ಬಿಡುಗಡೆ ನಿರೀಕ್ಷಿಯಲ್ಲಿದ್ದಾರೆ. ಜೊತೆಗೆ ಉಪೇಂದ್ರ ಅಭಿನಯದ 'ಕಬ್ಜ' ಚಿತ್ರದಲ್ಲೊಂದು ಅತಿಥಿ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರೀಕರಣ ಬೆಂಗಳೂರಿನ ಮಿನರ್ವ ಮಿಲ್​​​ನಲ್ಲಿ ನಡೆಯಲಿದ್ದು ಸುದೀಪ್, ತಮ್ಮ ಭಾಗದ ಚಿತ್ರೀಕರಣವನ್ನು ಮುಂದಿನ ಇನ್ನೊಂದು ತಿಂಗಳಲ್ಲಿ ಮುಗಿಸಲಿದ್ದಾರಂತೆ.

ಈ ಸಿನಿಮಾಗಳ ನಂತರ ಏನು ಎಂಬ ಪ್ರಶ್ನೆ ಮೂಡುವುದು ಸಹಜವೇ. ಏಕೆಂದರೆ ಸುದೀಪ್ ಅಭಿನಯದ ಯಾವುದೇ ಹೊಸ ಸಿನಿಮಾ ಘೋಷಣೆ ಆಗಿಲ್ಲ. ಸುದೀಪ್ ಮುಂದೆ ಯಾವ ಚಿತ್ರವನ್ನು ಒಪ್ಪಿಕೊಳ್ಳಬಹುದೆಂಬ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ. ಹೀಗಿರುವಾಗಲೇ ಸುದೀಪ್ ಅವರನ್ನು ನಿರ್ದೇಶಕ ಸುಜೀತ್​​​​​​ ಭೇಟಿಯಾಗಿದ್ದು ಅವರೊಂದಿಗೆ ಸುದೀಪ್ ಸಿನಿಮಾ ಮಾಡುತ್ತಿದ್ದಾರಾ ಎಂಬ ಅನುಮಾನ ಎಲ್ಲರಿಗೂ ಕಾಡುತ್ತಿದೆ. ಈ ಸುಜೀತ್​​​​​​​, ಪ್ರಭಾಸ್ ಅಭಿನಯದ 'ಸಾಹೋ' ಚಿತ್ರವನ್ನು ನಿರ್ದೇಶನ ಮಾಡಿದ್ದರು. ಚಿತ್ರ ಯಶಸ್ಸು ಗಳಿಸದಿದ್ದರೂ ಸುಜೀತ್ ಕೆಲಸದ ಬಗ್ಗೆ ಎಲ್ಲರಲ್ಲೂ ಮೆಚ್ಚುಗೆ ವ್ಯಕ್ತವಾಗಿತ್ತು.

ಇದನ್ನೂ ಓದಿ:ಕಮರ್ಷಿಯಲ್ ಚಿತ್ರ ಬಿಟ್ಟು ಸಂದೇಶ ಸಾರುವ ಚಿತ್ರದೊಂದಿಗೆ ಬಂದ್ರು ಓಂಸಾಯಿ ಪ್ರಕಾಶ್

'ಸಾಹೋ' ನಂತರ ಸುಜೀತ್ ಚಿರಂಜೀವಿ ಅಭಿನಯದ ಚಿತ್ರವೊಂದನ್ನು ನಿರ್ದೇಶಿಸುತ್ತಾರೆ ಎಂದು ಸಾಕಷ್ಟು ಸುದ್ದಿಯಾಗಿತ್ತು. ಮಲಯಾಳಂನ 'ಲೂಸಿಫರ್' ಚಿತ್ರವನ್ನು ತೆಲುಗಿಗೆ ತರುತ್ತಾರೆ ಎನ್ನುವಷ್ಟರಲ್ಲೇ, ಆ ಚಿತ್ರದಿಂದ ಸುಜೀತ್ ಹೊರಬಂದಿದ್ದಾರೆ ಎನ್ನಲಾಗಿದೆ. ಇದೀಗ ಅವರು ಹೊಸ ಚಿತ್ರಕಥೆಯೊಂದನ್ನು ಬರೆಯುತ್ತಿದ್ದಾರಂತೆ. ಸುದೀಪ್ ಮತ್ತು ಸುಜೀತ್​​​​​​​​​​​​​ ಭೇಟಿ ಸುದ್ದಿಯಾಗುತ್ತಿರುವುದು ಇದೇ ಕಾರಣಕ್ಕೆ. ಸುಜೀತ್ ನಿರ್ದೇಶನದ ಹೊಸ ಚಿತ್ರದಲ್ಲಿ ಸುದೀಪ್ ಅಭಿನಯಿಸುತ್ತಿದ್ದಾರಾ..? ಅದೇ ಕಾರಣಕ್ಕೆ ಸುದೀಪ್ ಅವರನ್ನು ಸುಜೀತ್ ಭೇಟಿ ಮಾಡಿದ್ದರಾ..? ಎಂಬೆಲ್ಲಾ ಪ್ರಶ್ನೆಗಳಿದ್ದು, ಆ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ. ಸದ್ಯಕ್ಕೆ, 'ಕಬ್ಜ' ಚಿತ್ರೀಕರಣ ಮುಗಿಸಿ, ಆ ನಂತರ ಕಿಚ್ಚ ತಮ್ಮ ಮುಂದಿನ ಚಿತ್ರದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.

ABOUT THE AUTHOR

...view details