ಕರ್ನಾಟಕ

karnataka

ETV Bharat / sitara

ನಿರ್ದೇಶಕರಾದ ಪದ್ಮಶ್ರೀ ಪುರಸ್ಕೃತ ಡಾ ದೊಡ್ಡರಂಗೇಗೌಡ - ದೊಡ್ಡರಂಗೇಗೌಡ ನಿರ್ದೇಶನ ಮೊದಲ ಚಿತ್ರ

ನಾ ಬರೆದ ನಾಟಕ ನೋಡಿದ ನನ್ನ ಸ್ನೇಹಿತ ವಾಸುಪ್ರಸಾದ್ ಅವರು ಈ ನಾಟಕವನ್ನು ಚಲನಚಿತ್ರ ಮಾಡೋಣ ಎಂದರು. ಅಷ್ಟೇ ಅಲ್ಲ, ನೀವೇ ನಿರ್ದೇಶನವನ್ನೂ ಮಾಡಬೇಕು ಎಂದರು. ಅವರೆಲ್ಲರ ಒತ್ತಾಯಕ್ಕೆ ಮಣಿದು ನಾನು 75ನೇ ವಯಸ್ಸಿಗೆ ನಿರ್ದೇಶನಕ್ಕೆ ಮುಂದಾದೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಎರಡು ಹಾಡುಗಳನ್ನು ನಾನೇ ಬರೆದಿದ್ದೇನೆ. ದುಂಡಿರಾಜ್ ಅವರ ಒಂದು ಹಾಡನ್ನು ಸಹ ಈ ಚಿತ್ರದಲ್ಲಿ ಬಳಸಿಕೊಂಡಿದ್ದೇವೆ..

ದೊಡ್ಡರಂಗೇಗೌಡ ನಿರ್ದೇಶನದ ಮೊದಲ ಚಿತ್ರ
Haruva Hamsagalu film team

By

Published : Aug 7, 2021, 10:28 PM IST

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಗೀತರಚನೆಯಿಂದ ತನ್ನತನ ಉಳಿಕೊಂಡಿರುವ ಖ್ಯಾತ ಸಾಹಿತಿ, ಪದ್ಮಶ್ರೀ ಪುರಸ್ಕೃತ ಡಾ.ದೊಡ್ಡರಂಗೇಗೌಡ ಹಲವು ಹಿಟ್​​ ಸಿನಿಮಾಗಳನ್ನು ಕೊಟ್ಟಿದ್ದಾರೆ. ಹಾರುವ ಹಂಸಗಳು ಎಂಬ ಹೊಸ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಇದು ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗುತ್ತಿದೆ.

ಸಿನಿಮಾ ನಿರ್ದೇಶಿಸುವ ಆಲೋಚನೆ ಬಂದ ಕುರಿತು ಮಾತನಾಡಿದ ಡಾ. ದೊಡ್ಡರಂಗೇಗೌಡರು, ನಾನು ಒಂದು ದಿನ ಬೆಳಗ್ಗೆ ವಾಯುವಿಹಾರಕ್ಕೆ ಹೊರಟಾಗ ಚಿಕ್ಕಚಿಕ್ಕ ಮಕ್ಕಳ ಕೈಯಲ್ಲಿ ಮೊಬೈಲ್ ಇದ್ದದ್ದನ್ನು ನೋಡಿ ಏನಿದು? ಚಿಕ್ಕ ಮಕ್ಕಳು ಸಹ ಬೆಳಗ್ಗೆ, ಸಂಜೆ ಅನ್ನದೇ ಸದಾ ಮೊಬೈಲ್ ಹಿಡಿದಿರುತ್ತಾರೆ.

ಇದರಿಂದ ಮಕ್ಕಳಿಗಾಗುವ ಉಪಯೋಗ, ದುರುಪಯೋಗ ಏನು? ಎಂದು ತಮ್ಮ ಸ್ನೇಹಿತರ ತಂಡದ ಮುಂದೆ ಹೇಳಿಕೊಂಡಾಗ ಅವರೆಲ್ಲ ನೀವೇ ಇದರ ಬಗ್ಗೆ ಬರೆಯಿರಿ ಎಂದರು. ಆಗ ಒಂದು ನಾಟಕ ಬರೆದೆ ಎಂದರು.

ಹಾರುವ ಹಂಸಗಳು ಚಿತ್ರತಂಡ

ಈ ನಾಟಕ ನೋಡಿದ ನನ್ನ ಸ್ನೇಹಿತ ವಾಸುಪ್ರಸಾದ್ ಅವರು ಈ ನಾಟಕವನ್ನು ಚಲನಚಿತ್ರ ಮಾಡೋಣ ಎಂದರು. ಅಷ್ಟೇ ಅಲ್ಲದೇ, ನೀವೇ ನಿರ್ದೇಶನವನ್ನೂ ಮಾಡಬೇಕು ಎಂದರು. ಅವರೆಲ್ಲರ ಒತ್ತಾಯಕ್ಕೆ ಮಣಿದು ನಾನು 75ನೇ ವಯಸ್ಸಿಗೆ ನಿರ್ದೇಶನಕ್ಕೆ ಮುಂದಾದೆ.

ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಎರಡು ಹಾಡುಗಳನ್ನು ನಾನೇ ಬರೆದಿದ್ದೇನೆ. ದುಂಡಿರಾಜ್ ಅವರ ಒಂದು ಹಾಡನ್ನು ಸಹ ಈ ಚಿತ್ರದಲ್ಲಿ ಬಳಸಿಕೊಂಡಿದ್ದೇವೆ ಎಂದು ದೊಡ್ಡರಂಗೇಗೌಡರು ಮಾಹಿತಿ ನೀಡಿದರು.

ಹಾರುವ ಹಂಸಗಳು ಚಿತ್ರತಂಡ

ಮಕ್ಕಳ ಬಗ್ಗೆ ವಿಶೇಷ ಕಾಳಜಿಯಿಂದ ಪ್ಲೇ ಸ್ಟೋರ್ ಗಮಿನಿಸಿದಾಗ ಅದರಲ್ಲಿ ಮಕ್ಕಳ ಮೇಲೆ ದುಷ್ಪರಿಣಾಮ ಬೀಳುವ ಇಪ್ಪತ್ತೆಂಟು ಆ್ಯಪ್​ಗಳು ಕಂಡವು. ಈ ವಿಷಯವನ್ನು ನನ್ನ ಮಿತ್ರ ಬಿಜೆಪಿ ಮುಖಂಡ ಬಿ ಎಲ್ ಸಂತೋಷ್ ಅವರಿಗೆ ತಿಳಿಸಿದೆ.

ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಇದನ್ನು ಪ್ರಸ್ತಾಪಿಸಿ, ಆ ಎಲ್ಲಾ ಆ್ಯಪ್​​​ಗಳನ್ನು ಡಿಲೀಟ್ ಮಾಡಿಸಿದ್ದಾರೆ. ಅದಕ್ಕಾಗಿ ಸಂತೋಷ್ ಅವರಿಗೆ ಹಾಗೂ ಪ್ರಧಾನಿಗಳಿಗೆ ದೊಡ್ಡರಂಗೇಗೌಡರು ವಿಶೇಷ ಧನ್ಯವಾದ ತಿಳಿಸಿದರು.

ಮಾಸ್ಟರ್ ಓಜಸ್ ದೀಪ್, ಮಾಸ್ಟರ್ ಚಿನ್ಮಯ್ ಅಭಿನಯಿಸಿರೋ ಹಾರುವ ಹಂಸಗಳು ಚಿತ್ರದಲ್ಲಿ ದೊಡ್ಡರಂಗೇಗೌಡ ನಿರ್ದೇಶನದ ಜೊತೆಗೆ ಅಭಿನಯಿಸಿದ್ದಾರೆ. ಇದರ ಜೊತೆಗೆ ಕುಮಾರಿ ರೂಪ, ಪ್ರಣವಮೂರ್ತಿ, ಶಿವಾನಂದ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ನಿರ್ಮಾಪಕ ವಾಸುಪ್ರಸಾದ್ ಅವರು ಚಿತ್ರ ಉತ್ತಮವಾಗಿ ಮೂಡಿ ಬಂದಿರುವುದಕ್ಕೆ ಸಂತಸಪಟ್ಟರು.

ಸೆನ್ಸಾರ್ ಮಂಡಳಿ ಸದಸ್ಯರು ಈ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು. ವಿವಿಧ ಕಡೆ ಅಧ್ಯಾಪನ ವೃತ್ತಿಯಲ್ಲಿರುವ ಸುಮಾರು ಎಪ್ತತ್ತಕ್ಕು ಹೆಚ್ಚು ಜನರಿಗೆ ಈ ಚಿತ್ರ ತೋರಿಸಿದಾಗ ಅವರು ನೀಡಿದ ಪ್ರತಿಕ್ರಿಯೆ ನಮ್ಮ ಆನಂದವನ್ನು ಇಮ್ಮಡಿಗೊಳಿಸಿತ್ತು ಎಂದರು ನಿರ್ಮಾಪಕರು. ನಮ್ಮ ಫ್ಲಿಕ್ಸ್ ನಲ್ಲಿ ಈಗಾಗಲೇ ಸಾವಿರ ಟಿಕೆಟ್ ಬುಕ್ ಆಗಿದೆ ಎಂದು ತಿಳಿಸಿದ ವಿಜಯ ಪ್ರಕಾಶ್ ಅವರು, ಇದೊಂದು ಉತ್ತಮ ಸಂದೇಶವಿರುವ ಚಿತ್ರ.

ಹಾಗಾಗಿ, ನಾವು ಯಾವ ಕಮಿಷನ್ ಪಡೆಯದೆ, ಇಡೀ ಹಣವನ್ನು ನಿರ್ಮಾಪಕರಿಗೆ ನೀಡುತ್ತೇವೆ. ಅದನ್ನು ಅವರು ಕೊರೊನಾ ಬಂದ ಮೇಲೆ ಸಾಕಷ್ಟು ಶಿಕ್ಷಕರು ಹೊಟ್ಟೆ ಪಾಡಿಗಾಗಿ ಬೇರೆ ಬೇರೆ ವೃತ್ತಿ ಹಿಡಿದಿದ್ದಾರೆ. ಅಂತಹವರಿಗೆ ಈ ಹಣದಿಂದ ಸಹಾಯ ಮಾಡಲಿ ಎಂದರು.

ಚಿತ್ರದ ಒಂದು ಹಾಡಿಗೆ ಉಪಾಸನ ಮೋಹನ್ ಸಂಗೀತ ನೀಡಿದ್ದರೆ, ಮಿಕ್ಕ ಹಾಡುಗಳಿಗೆ ಶ್ರೀಸುರೇಶ್ ಸಂಗೀತ ನೀಡಿದ್ದಾರೆ. ಪಿ‌ವಿಆರ್ ಸ್ವಾಮಿ ಈ ಚಿತ್ರದ ಛಾಯಾಗ್ರಹಕರು. ದೊಡ್ಡರಂಗೇಗೌಡ ಅವರ ಪ್ರಥಮ ನಿರ್ದೇಶನದ ಹಾರುವ ಹಂಸಗಳು ಚಿತ್ರ ನಮ್ಮ ಫ್ಲಿಕ್ಸ್ ಮೂಲಕ ಆಗಸ್ಟ್ 12 ರಂದು ಬಿಡುಗಡೆಯಾಗಲಿದೆ.

ABOUT THE AUTHOR

...view details