ಕಳೆದ ವರ್ಷ ನವೆಂಬರ್ 26 ರಂದು ಹೈದರಾಬಾದ್ನಲ್ಲಿ ಪಶುವೈದ್ಯೆ ಹತ್ಯಾಚಾರ ಪ್ರಕರಣ ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿ ಮಾಡಿತ್ತು. ನಾಲ್ವರು ಆರೋಪಿಗಳ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದಲ್ಲದೆ ಅವರಿಗೆ ಶಿಕ್ಷೆ ನೀಡಬೇಕೆಂಬ ಒತ್ತಾಯ ಕೇಳಿಬಂದಿತ್ತು.
ಪಶುವೈದ್ಯೆ ಹತ್ಯೆ ಪ್ರಕರಣ ಈಗ ತೆರೆ ಮೇಲೆ..'ದಿಶಾ ಎನ್ಕೌಂಟರ್' ಟ್ರೇಲರ್ ರಿಲೀಸ್ - Disha encounter release on November 26
ಹೈದರಾಬಾದ್ ಪಶುವೈದ್ಯೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮ್ಗೋಪಾಲ್ ವರ್ಮಾ ಸಾರಥ್ಯದಲ್ಲಿ 'ದಿಶಾ ಎನ್ಕೌಂಟರ್' ಎಂಬ ಸಿನಿಮಾ ತಯಾರಾಗುತ್ತಿದೆ. ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ.
ದಿಶಾ ಪ್ರಕರಣದ ತನಿಖೆ ನಡೆಸುತ್ತಿದ್ದ ಹೈದರಾಬಾದ್ ಪೊಲೀಸರು ಪ್ರಕರಣದ ಮರುಸೃಷ್ಟಿ ಮಾಡುವ ವೇಳೆ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಎನ್ಕೌಂಟರ್ಗೆ ಬಲಿಯಾಗಿದ್ದರು. ಇದೀಗ ದಿಶಾ ಪ್ರಕರಣಕ್ಕೆ ಸಂಬಂಧಿಸಿದಂತೆ 'ದಿಶಾ ಎನ್ಕೌಂಟರ್' ಎಂಬ ಹೆಸರಿನ ಸಿನಿಮಾ ತಯಾರಾಗುತ್ತಿದೆ. ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ರಾಮ್ಗೋಪಾಲ್ ವರ್ಮಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಈ ಟ್ರೇಲರ್ ಷೇರ್ ಮಾಡಿಕೊಂಡಿದ್ದಾರೆ. ರಾಮ್ ಗೋಪಾಲ್ ವರ್ಮಾ ಸಾರಥ್ಯದಲ್ಲಿ ಈ ಚಿತ್ರವನ್ನು ಆನಂದ್ ಚಂದ್ರ ನಿರ್ದೇಶಿಸಿದ್ದಾರೆ.
ಅನುರಾಗ್ ಕಂಚರಾಲ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಸಿನಿಮಾ ತಯಾರಾಗಿದೆ. 2.44 ನಿಮಿಷದ ಟ್ರೇಲರ್ ನಿಜಕ್ಕೂ ಕಣ್ಣಿಗೆ ಕಟ್ಟುವಂತಿದೆ. ಇಡೀ ಘಟನೆಯನ್ನು ನಿರ್ದೇಶಕರು ಕಣ್ಣಾರೆ ಕಂಡಿದ್ದರೇನೋ ಎನ್ನುವಂತೆ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ಶ್ರೀಕಾಂತ್ ಅಯ್ಯಂಗಾರ್, ಸೋನಿಯ ಅಕುಲ, ಪ್ರವೀಣ್ ರಾಜ್ ಹಾಗೂ ಇನ್ನಿತರರು ನಟಿಸಿದ್ದಾರೆ. ಚಿತ್ರ ನವೆಂಬರ್ 26 ರಂದು ಬಿಡುಗಡೆಯಾಗಲಿದೆ.