ಹೊಸಬರ ತಂಡ ತಯಾರಿಸಿರುವ ‘ಆನೆಬಲ’ ಸಿನಿಮಾ ಪಕ್ಕಾ ಮಂಡ್ಯ ಸೊಗಡಿನ ಸಿನಿಮಾ. ನಾಳೆ ಮಂಡ್ಯದ ಡಾ. ಅಂಬೇಡ್ಕರ್ ಭವನದಲ್ಲಿ ಅದ್ದೂರಿ ಧ್ವನಿಸುರಳಿ ಬಿಡುಗಡೆಯಾಗುತ್ತಿದೆ. ರಾಗಿಮುದ್ದೆ ತಿನ್ನುವ ಸ್ಪರ್ಧೆಯೊಂದಿಗೆ ಜೀವನದ ಮೌಲ್ಯಗಳನ್ನು ಕೂಡಾ ಸಿನಿಮಾದಲ್ಲಿ ತೋರಿಸಲಾಗಿದೆ.
ನಾಳೆ ‘ಆನೆಬಲ’ ಧ್ವನಿಸುರಳಿ ಬಿಡುಗಡೆ...ಭಟ್ಟರಿಂದ 2 ಕ್ವಿಂಟಾಲ್ ತೂಕದ ರಾಗಿಮುದ್ದೆ ಅನಾವರಣ - ಜಾನಪದ ಕಲಾವಿದ ಕಂದೆಗಾಲ ಪುಟ್ಟಪ್ಪ
ಸೂನಗಹಳ್ಳಿ ರಾಜು ನಿರ್ದೇಶನದ ಮಂಡ್ಯ ಶೈಲಿಯ ಸಿನಿಮಾ ‘ಆನೆಬಲ’ ಧ್ವನಿಸುರಳಿ ಸಮಾರಂಭ ನಾಳೆ ಸಂಜೆ ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಜರುಗಲಿದೆ. ನಿರ್ದೇಶಕ ಯೋಗರಾಜ್ ಭಟ್ 2 ಕ್ವಿಂಟಾಲ್ ತೂಕದ ಬೃಹದಾಕಾರದ ರಾಗಿಮುದ್ದೆಯನ್ನು ನಾಳೆ ಅನಾವರಣಗೊಳಿಸಿದ್ದಾರೆ.
2 ಕ್ವಿಂಟಾಲ್ ತೂಗುವ ಬೃಹದಾಕಾರದ ರಾಗಿಮುದ್ದೆಯನ್ನು ನಾಳಿನ ಧ್ವನಿಸುರಳಿ ಸಮಾರಂಭದಲ್ಲಿ ನಿರ್ದೇಶಕ ಯೋಗರಾಜ್ ಭಟ್ ಅನಾವರಣಗೊಳಿಸಲಿದ್ದಾರೆ. ಸೂನಗಹಳ್ಳಿ ರಾಜು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರೀಕರಣ ಬಹುತೇಕ ಮುಗಿದಿದ್ದು ಸಿನಿಮಾ ಶೀಘ್ರವೇ ಬಿಡುಗಡೆಯಾಗಲಿದೆ. ಗ್ರಾಮೀಣ ಪರಿಸರ ಕಥೆ, ಯುವಕರ ತುಂಟತನ, ರಾಗಿಯ ಮಹತ್ವ, ಜಾನಪದ ಸಂಸ್ಕೃತಿ, ಸೋಬಾನೆ ಪದಗಳ ಬಳಕೆ ಎಲ್ಲವನ್ನೂ ಈ ಚಿತ್ರದಲ್ಲಿ ತೋರಿಸಲಾಗಿದೆ. ಎ.ವಿ. ವೇಣುಗೋಪಾಲ್ ಅಡಕಮಾರನಹಳ್ಳಿ ಮತ್ತು ಎಂ.ಎಸ್. ರಘುನಂದನ್ ಈ ಚಿತ್ರದ ನಿರ್ಮಾಪಕರು. ಸಾಗರ್ ಹಾಗೂ ರಕ್ಷಿತ ಎಂಬ ಹೊಸ ಪ್ರತಿಭೆಗಳು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶೇ.90 ರಷ್ಟು ಹೊಸ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.
ರಾಜ್ಯ ಪ್ರಶಸ್ತಿ ವಿಜೇತ ಪೂರ್ಣಚಂದ್ರ ತೇಜಸ್ವಿ ಚಿತ್ರದ ನಾಲ್ಕು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಜಾನಪದ ಕಲಾವಿದ ಕಂದೆಗಾಲ ಪುಟ್ಟಪ್ಪ ಜಾನಪದ ಹಾಡು ಹೇಳುವುದರ ಜೊತೆ ಚಿತ್ರದಲ್ಲಿ ಅಭಿನಯ ಕೂಡಾ ಮಾಡಿದ್ದಾರೆ. ಜೆ.ಸಿ. ಬೆಟ್ಟೇಗೌಡ ಈ ಚಿತ್ರದ ಛಾಯಾಗ್ರಾಹಕರು. ನಾಳೆ ಸಂಜೆ 5.30 ಕ್ಕೆ ಚಿತ್ರದ ಹಾಡುಗಳನ್ನು ಮುಂಗಾರು ಮಳೆ ನಿರ್ಮಾಪಕ ಇ. ಕೃಷ್ಣಪ್ಪ ಅನಾವರಣಗೊಳಿಸಲಿದ್ದಾರೆ. ಡಾ.ವಿ. ನಾಗೇಂದ್ರ ಪ್ರಸಾದ್, ಎಸ್ಪಿ ಡಾ ಎ.ಎನ್. ಪ್ರಕಾಶ್ ಗೌಡ, ಮಾಜಿ ಶಾಸಕ ಎ. ರಾಜು, ಡಿ.ಎಂ. ವಿಶ್ವನಾಥ್ ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.