ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಿನಿಮಾಗಳಲ್ಲಿ ಗಾಳಿಪಟ ಕೂಡಾ ಒಳ್ಳೆ ಹೆಸರು ಮಾಡಿದಂತಹ ಸಿನಿಮಾ. ಯೋಗರಾಜ್ ಭಟ್ ಗಾಳಿಪಟ-2 ಭರ್ಜರಿ ಸಿದ್ಧತೆಯಲ್ಲಿ ಇರುವುದು ಕೂಡಾ ಹಳೆಯ ವಿಷಯ. ಮುಂಬೈ ಸ್ಟುಡಿಯೋವೊಂದರಲ್ಲಿ ಭಟ್ಟರು ಈಗಾಗಲೇ ಹಾಡುಗಳ ರೆಕಾರ್ಡಿಂಗ್ ಕೆಲಸ ಕೂಡಾ ಆರಂಭಿಸಿದ್ದಾರೆ.
ಗಾಳಿಪಟ-2 ನಟರ ಬದಲಾವಣೆಗೆ ಕಾರಣ ಬಿಚ್ಚಿಟ್ಟ ನಿರ್ದೇಶಕ ಯೋಗರಾಜ್ ಭಟ್! - ಅಧ್ಯಕ್ಷ ಇನ್ ಅಮೆರಿಕ
ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಸ್ಕ್ರಿಪ್ಟಿಂಗ್ ಕೆಲಸ ನಡೆಯುತ್ತಿದ್ದು, ಮುಂದಿನ ತಿಂಗಳಿಂದ ಶೂಟಿಂಗ್ ಆರಂಭವಾಗಲಿದೆ. ಇನ್ನು ಈ ಮುನ್ನ ಸಿನಿಮಾದಲ್ಲಿ ಶರಣ್, ಕವಲು ದಾರಿ ಖ್ಯಾತಿಯ ರಿಷಿ ಅಭಿನಯಿಸುತ್ತಾರೆ ಎನ್ನಲಾಗಿತ್ತಾದರೂ ಈಗ ನಟರು ಬದಲಾಗಿದ್ದು, ಇದಕ್ಕೆ ಏನು ಕಾರಣ ಎಂದು ಭಟ್ಟರು ತಿಳಿಸಿದ್ದಾರೆ.
ಇನ್ನು ಈ ಚಿತ್ರಕ್ಕೆ ಮೊದಲು ಶರಣ್, ರಿಷಿ ಹಾಗೂ ಪವನ್ ಕುಮಾರ್ ಮೂವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಇದೀಗ ಶರಣ್ ಹಾಗೂ ರಿಷಿ ಜಾಗಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ದಿಗಂತ್ ಬಂದಿದ್ದಾರೆ. ಈ ನಟರ ಬದಲಾವಣೆಗೆ ಕಾರಣ ಏನು ಎಂಬುದನ್ನು ಭಟ್ಟರು ಹೇಳಿದ್ದಾರೆ. ಶರಣ್ 'ಅಧ್ಯಕ್ಷ ಇನ್ ಅಮೆರಿಕ' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಡೇಟ್ಸ್ ಹೊಂದಾಣಿಕೆಯಿಂದ ಈ ಸಿನಿಮಾದಿಂದ ಅವರು ಹೊರ ಉಳಿದಿದ್ದಾರೆ. ಇನ್ನು ರಿಷಿಗೆ ಕೂಡಾ ಡೇಟ್ಸ್ ಹೊಂದಾಣಿಸಲು ಸಾಧ್ಯವಾಗುತ್ತಿಲ್ಲವಂತೆ. ಆದರೆ ರಿಷಿ ಜೊತೆ ಭಟ್ಟರು ಮತ್ತೊಂದು ಸಿನಿಮಾ ಮಾಡಲಿದ್ದು, ಶಶಾಂಕ್ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಶರಣ್ ಜೊತೆ ಕೂಡಾ ನಾನು ಸಿನಿಮಾ ಮಾಡಲಿದ್ದು, ಟೈಟಲ್ ಹುಡುಕಾಟದಲ್ಲಿದ್ದೇನೆ ಎಂದು ಭಟ್ಟರು ಹೇಳಿದ್ದಾರೆ. ಸ್ಕ್ರಿಪ್ಟ್ ಕೆಲಸ ಫೈನಲ್ ಹಂತದಲ್ಲಿದ್ದು, ಸದ್ಯದಲ್ಲೇ ಶೂಟಿಂಗ್ ಆರಂಭವಾಗಲಿದೆ ಎಂದು ನಿರ್ದೇಶಕ ಯೋಗರಾಜ್ ಭಟ್ ಹೇಳಿದ್ದಾರೆ. ಈ ಚಿತ್ರವನ್ನು ಮಹೇಶ್ ದಾನನ್ನವರ್ ನಿರ್ಮಿಸುತ್ತಿದ್ದು, ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.