ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾಗಿರುವ ಟೇಶಿ ವೆಂಕಟೇಶ್ ಹಾಗೂ ಮಾಜಿ ಅಧ್ಯಕ್ಷರಾಗಿದ್ದ ವಿ.ನಾಗೇಂದ್ರ ಪ್ರಸಾದ್ ವಿರುದ್ಧ ನಿರ್ದೇಶಕರು, ನಿರ್ಮಾಪಕರು ಹಣ ದುರುಪಯೋಗದ ಬಗ್ಗೆ ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಸಂಘದ ಉಪಾಧ್ಯಕ್ಷೆ ಹಾಗೂ ನಿರ್ದೇಶಕಿ ರೂಪ ಐಯ್ಯರ್ ಒಂದು ಹೆಜ್ಜೆ ಮುಂದೆ ಹೋಗಿ ಮಾಜಿ ಅಧ್ಯಕ್ಷ ವಿ.ನಾಗೇಂದ್ರ ಪ್ರಸಾದ್ ಹಾಗೂ ಈಗಿನ ಅಧ್ಯಕ್ಷ ಟೇಶಿ ವೆಂಕಟೇಶ್ ಮಾಡಿರುವ ಅವ್ಯವಹಾರದ ಬಗ್ಗೆ ತನಿಖೆ ಆಗಬೇಕೆಂದು ಕೋರ್ಟ್ ಮೂಲಕ ನೋಟಿಸ್ ತಂದಿದ್ದಾರೆ.
ನಿರ್ದೇಶಕರ ಸಂಘದಲ್ಲಿ ನಡೆದಿರುವ ಅವ್ಯವಹಾರದ ಕುರಿತಂತೆ ರೂಪ ಐಯ್ಯರ್ ಸುದ್ದಿಗೊಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಮಾಜಿ ಅಧ್ಯಕ್ಷರಾಗಿದ್ದ ವಿ.ನಾಗೇಂದ್ರ ಪ್ರಸಾದ್ ಅವರು ಎರಡು ವರ್ಷಗಳ ಕಾಲ ಅಧ್ಯಕ್ಷರಾಗಿದ್ದಾಗ ಅಭಿವೃದ್ಧಿ ಕೆಲಸ ಮಾಡದೆ ಸಂಘದಲ್ಲಿದ್ದ ಹಣವನ್ನು ಪದಾಧಿಕಾರಿಗಳ ಅನುಮತಿ ಪಡೆಯದೆ ದುರುಪಯೋಗ ಮಾಡಿಕೊಂಡರು.
ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ನಿಮಗೆ ಹೇಳುವ ಅಗತ್ಯ ಇಲ್ಲ ಎಂದಿದ್ದರು. ಇನ್ನು ಹಾಲಿ ಅಧ್ಯಕ್ಷನಾಗಿರೋ ಟೇಶಿ ವೆಂಕಟೇಶ್ ಕೂಡ ನಿರ್ದೇಶಕರ ಸಂಘದಲ್ಲಿರುವ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ನನ್ನ ಮೇಲೆ ವೈಯಕ್ತಿಕವಾಗಿ ತೇಜೋವಧೆ ಮಾಡಿದ್ದಾರೆ. ಹೀಗಾಗಿ ಟೇಶಿ ವೆಂಕಟೇಶ್ ವಿರುದ್ಧ 1 ಕೋಟಿ ಮಾನನಷ್ಠ ಮೊಕದ್ದಮೆ ಕೇಸ್ ಹಾಕಿದ್ದೇನೆ ಎಂದರು.