ಬೆಂಗಳೂರು :ನಿರ್ದೇಶಕ, ನಟ ಎಸ್.ನಾರಾಯಣ್ ಹೆಸರಲ್ಲಿ ವಂಚನೆ ನಡೆದಿದೆ. ಈ ಹಿನ್ನೆಲೆಯಲ್ಲಿ ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಿಡಿಗೇಡಿಗಳು ಫೇಸ್‌ಬುಕ್ ಅಕೌಂಟ್ ಹ್ಯಾಕ್ ಮಾಡಿ ಸ್ನೇಹಿತರಿಗೆ ಸಂದೇಶ ರವಾನಿಸಿ ದುಡ್ಡು ಕಸಿಯಲು ಹೊಂಚು ಹಾಕಿದ್ದಾರೆ. ಈಗಾಗಲೇ ಕೆಲವರು ಮೋಸ ಹೋಗಿದ್ದಾರೆ. ನಾನು ನಿರ್ದೇಶಿಸಿರುವ 5ಡಿ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಈ ಹಿನ್ನೆಲೆ ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಹ್ಯಾಕರ್ಸ್ ವಂಚನೆ ಮಾಡುತ್ತಿದ್ದಾರೆ ಎಂದು ಎಸ್.ನಾರಾಯಣ್ ಆರೋಪಿಸಿದ್ದಾರೆ.