ಕರ್ನಾಟಕ

karnataka

ETV Bharat / sitara

ಅತ್ತೆ ಮಗಳ ಕೈಹಿಡಿದ ಬಹದ್ದೂರ್​ ನಿರ್ದೇಶಕ ಚೇತನ್​ ಕುಮಾರ್​​ - chethan kumar

ಸ್ಯಾಂಡಲ್​ವುಡ್​ನಲ್ಲಿ ಬಹುಬೇಡಿಕೆಯ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಚೇತನ್​ ಕುಮಾರ್​ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಲಾಕ್​ಡೌನ್​ ಕಾರಣಕ್ಕೆ ಸಿಂಪಲ್​ ಆಗಿ ಮದುವೆ ಸಮಾರಂಭ ನಡೆಸಲಾಗಿದ್ದು, ಪುನೀತ್​ ರಾಜ್​ಕುಮಾರ್​, ಧ್ರುವ ಸರ್ಜಾ, ಶ್ರೀಮುರಳಿ ಮುಂತಾದವರು ಮದುವೆಗೆ ಆಗಮಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ.

chethan
chethan

By

Published : Jun 13, 2021, 6:44 PM IST

Updated : Jun 13, 2021, 7:41 PM IST

ಲಾಕ್​ಡೌನ್​ನಲ್ಲಿ ಅನೇಕ ಸೆಲೆಬ್ರಿಟಿಗಳು ಸಿಂಪಲ್​ ಆಗಿ ಮದುವೆ ಆಗುತ್ತಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಚೇತನ್​ ಕುಮಾರ್​ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭರ್ಜರಿ, ಬಹದ್ದೂರ್​ನಂತ ಹಿಟ್​ ಸಿನಿಮಾಗಳನ್ನು ಕೊಟ್ಟಿರುವ ಚೇತನ್​ ಅವರ ಮದುವೆ ಮೈಸೂರಿನ ಕಲ್ಪವೃಕ್ಷ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಾನುವಾರ ಬೆಳಗ್ಗೆ ಸಿಂಪಲ್​ ಆಗಿ ನೆರವೇರಿದೆ.

ಕೆಲವೇ ಕೆಲವು ಮಂದಿ ಮಾತ್ರ ಈ ಶುಭ ಸಮಾರಂಭಕ್ಕೆ ಸಾಕ್ಷಿಯಾದರು. ಚಿತ್ರರಂಗದ ಕೆಲವು ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು. ಪುನೀತ್​ ರಾಜ್​ಕುಮಾರ್​, ಧ್ರುವ ಸರ್ಜಾ, ಶ್ರೀಮುರಳಿ, ಮುಂತಾದವರು ಮದುವೆಗೆ ಆಗಮಿಸಿ ನವಜೋಡಿಗೆ ಆಶೀರ್ವಾದ ಮಾಡಿದರು. ಲಾಕ್​ಡೌನ್​ ಕಾರಣದಿಂದ ಅಭಿಮಾನಿಗಳಿಗೆ ಆಹ್ವಾನ ಇರಲಿಲ್ಲ.

ಚೇತನ್​ - ಮಾನಸ ಕಲ್ಯಾಣ

ಸ್ಯಾಂಡಲ್​ವುಡ್​ನಲ್ಲಿ ಬಹುಬೇಡಿಕೆಯ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಚೇತನ್​ ಕುಮಾರ್​ ಅವರನ್ನು ಕೈ ಹಿಡಿದಿರುವ ಹುಡುಗಿ ಯಾರು ಎಂಬ ಕುತೂಹಲ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡುವುದು ಸಹಜ. ಚೇತನ್​ ಕೈ ಹಿಡಿದಿರುವ ಹುಡುಗಿ ಹೆಸರು ಮಾನಸ. ಇವರು ಚೇತನ್​ಗೆ ಸ್ವಂತ ಅತ್ತೆಯ ಮಗಳು ಎಂಬುದು ವಿಶೇಷ. ಬಹಳ ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಉಭಯ ಕುಟುಂಬದವರ ಒಪ್ಪಿಗೆ ಮೇರೆಗೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮಾನಸ ಅವರು ಇಂಜಿನಿಯರಿಂಗ್​ ಓದಿದ್ದಾರೆ. ಪ್ರಸ್ತುತ ಅವರು ಇನ್ಫೋಸಿಸ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಮದುವೆ ಫೋಟೋಗಳು ಕೂಡ ಲಭ್ಯವಾಗಿದ್ದು ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ಚೇತನ್​-ಮಾನಸ ದಂಪತಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಲಾಕ್​ಡೌನ್​ ಇರುವುದರಿಂದ ಮೈಸೂರಿನಲ್ಲಿ ಸರಳವಾಗಿ ವಿವಾಹ ಸಮಾರಂಭ ನೆರವೇರಿದೆ.

Last Updated : Jun 13, 2021, 7:41 PM IST

ABOUT THE AUTHOR

...view details