ಕರ್ನಾಟಕ

karnataka

ETV Bharat / sitara

ನಾಯಕನಾಗಿರುವ ಆನಂದ್ ​​ಡಿಸೆಂಬರ್​​ 6ರಿಂದ 'ಹಗಲು ಕನಸು'​.. - ಮಾಸ್ಟರ್ ಆನಂದ್

ನಿರ್ದೇಶಕನಾಗಿ, ಛಾಯಾಗ್ರಾಹಕನಾಗಿ ಸುಮಾರು 100 ಸಿನಿಮಾ ಮಾಡಿರುವ ದಿನೇಶ್​​ ಬಾಬು ಇದೀಗ ಹೊಸ ಚಿತ್ರವನ್ನ ಸ್ಯಾಂಡಲ್​ವುಡ್​​ಗೆ ನೀಡುತ್ತಿದ್ದಾರೆ. ಈ ಸಿನಿಮಾಕ್ಕೆ ‘ಹಗಲು ಕನಸು’ ಎಂದು ಹೆಸರಿಟ್ಟಾರೆ. ಸ್ಯಾಂಡಲ್‌ವುಡ್‌ನಲ್ಲಿ ಮಾಸ್ಟರ್​​ ಆನಂದ್​ ಆಗಿ ಮಿಂಚು ಹರಿಸಿರುವ ಆನಂದ್‌ ಈ ಚಿತ್ರದ ನಾಯಕ.

dinesh babu ready with another film
ಮಾಸ್ಟರ್​​ ಆನಂದ್​​

By

Published : Dec 4, 2019, 1:06 PM IST

ನಿರ್ದೇಶಕನಾಗಿ, ಛಾಯಾಗ್ರಾಹಕನಾಗಿ ಸುಮಾರು 100 ಸಿನಿಮಾ ಮಾಡಿರುವ ದಿನೇಶ್​​ ಬಾಬು ಇದೀಗ ಹೊಸ ಚಿತ್ರವನ್ನ ಸ್ಯಾಂಡಲ್​ವುಡ್​​ಗೆ ನೀಡುತ್ತಿದ್ದಾರೆ. ಈ ಸಿನಿಮಾಕ್ಕೆ ‘ಹಗಲು ಕನಸು’ ಎಂದು ಹೆಸರಿಟ್ಟಾರೆ. ಸ್ಯಾಂಡಲ್‌ವುಡ್‌ನಲ್ಲಿ ಮಾಸ್ಟರ್​​ ಆನಂದ್​ ಆಗಿ ಮಿಂಚು ಹರಿಸಿರುವ ಆನಂದ್‌ ಈ ಚಿತ್ರದ ನಾಯಕ.

ದಿನೇಶ್​​ ಬಾಬು

ಈ ಸಿನಿಮಾದ ಜೊತೆ ‘ಅಭ್ಯಂಜನ’ ಎಂಬ ಮತ್ತೊಂದು ಸಿನಿಮಾಕ್ಕೆ ಕೈ ಹಾಕಿದ್ದಾರೆ. ಅಲ್ಲದೆ ಈ ಸಿನಿಮಾದ ಪ್ರೀಮಿಯರ್ ಶೋ ನಡೆಸಲು ಸಿದ್ದತೆಯನ್ನೂ ಮಾಡಿಕೊಂಡಿದ್ದಾರೆ. ಈ ಸಿನಿಮಾವನ್ನು ಇದೇ ಡಿಸೆಂಬರ್ 6ಕ್ಕೆ ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿದೆ.

ದಿನೇಶ್ ಬಾಬು ಅವರ ಮುಂದಿನ ಸಿನಿಮಾ ‘ಅಭ್ಯಂಜನ’ ನಿಜ ಜೀವನದ ಕಥೆ ಆಧಾರಿತ ಚಿತ್ರ. ಕರ್ನಾಟಕ ಹಾಗೂ ತಮಿಳು ನಾಡು ಗಡಿಯಲ್ಲಿ ನಡೆದ ಕಥೆ ಆಧಾರವಾಗಿರಿಸಿ ಈ ಸಿನಿಮಾ ಮಾಡಲಾಗುತ್ತಿದೆ. ರಂಗಭೂಮಿ, ಚಲನ ಚಿತ್ರ ಹಾಗೂ ಕಿರುತೆರೆ ನಟ ಬಾಲಾಜಿ, ಡಿಜಿಟಲ್ ಸ್ಟುಡಿಯೋ ಮಾಲೀಕ ಕರಿಸುಬ್ಬು ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮಾಸ್ಟರ್​​ ಆನಂದ್​​ ನಾಯಕನಾಗಿ ಕಾಣಿಸಿಕೊಂಡಿರುವ ಈ ಸಿನಿಮಾ ಡಿಸೆಂಬರ್​​ 6ಕ್ಕೆ ರಿಲೀಸ್​

ಅಭ್ಯಂಜನ ಸಿನಿಮಾಕ್ಕೆ ದಿನೇಶ್ ಬಾಬು, ನಾಗೇಶ್ವರ ರಾವ್​, ಮಂಜುನಾಥ್ ಹಾಗೂ ನಾಗರಾಜ್ ಶಾಂಡಿಲ್ಯ ಬಂಡವಾಳ ಹೂಡಿದ್ದು, ಡಿಸೆಂಬರ್ 9ಕ್ಕೆ ಪ್ರದರ್ಶನ ಕಾಣಲಿದೆ.

ABOUT THE AUTHOR

...view details