ಸ್ಯಾಂಡಲ್ವುಡ್ನಲ್ಲಿ ನಿರ್ದೇಶನ ಹಾಗೂ ಛಾಯಾಗ್ರಹಣ ಜನಪ್ರಿಯತೆ ಪಡೆದು 100ಕ್ಕೂ ಹೆಚ್ಚು ಸಿನಿಮಾಗಳಿಗೆ ಕೆಲಸ ಮಾಡಿರುವ ದಿನೇಶ್ ಬಾಬು ಇದೀಗ ಅವ್ರ ನಿರ್ದೇಶನದ "ಹಗಲು ಕನಸು" ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ.
‘ಹಗಲು ಕನಸಿಗೆ" ಡೇಟ್ ಫಿಕ್ಸ್ ಮಾಡಿದ ದಿನೇಶ್ ಬಾಬು - hagalu kanasu
ನಿರ್ದೇಶಕ ಹಾಗೂ ಛಾಯಾಗ್ರಹಕ ದಿನೇಶ್ ಬಾಬು ನಿರ್ದೇಶನದ ಹಗಲು ಕನಸು ಚಿತ್ರ ಸೆಪ್ಟಂಬರ್ 6ರಂದು ಬಿಡುಗಡೆಗೆ ಸಿದ್ಧವಾಗಿದೆ.
ದಿನೇಶ್ ಬಾಬು ಅವರ ಫನ್ ಆ್ಯಂಡ್ ಫ್ಯಾಮಿಲಿ ಮನರಂಜನೆ ಚಿತ್ರದಲ್ಲಿ ಮಾಸ್ಟರ್ ಆನಂದ್ ಅಭಿನಯಿಸಿದ್ದು, ಕಾರ್ತಿಕ್ ವೆಂಕಟೇಶ್ ಸಂಗೀತ ನೀಡಿದ್ದಾರೆ. ವಿ ಜಿ ಅಚ್ಯುತ್ ರಾಜು, ಎಂ. ಪದ್ಮನಾಭ, ರಹಮತ್ ಹಣ ಹೂಡಿದ್ದು, ಚಿತ್ರ ರಚನೆ, ಛಾಯಾಗ್ರಹಣ ಮತ್ತು ನಿರ್ದೇಶನವನ್ನು ದಿನೇಶ್ ಬಾಬು ಅವರೇ ಮಾಡಿದ್ದಾರೆ. ಇದೀಗ ಚಿತ್ರ ಸೆಪ್ಟಂಬರ್ 6 ರಂದು ಬಿಡಗಡೆಯಾಗಲಿದೆ ಎಂದು ಚಿತ್ರ ತಂಡ ತಿಳಿಸಿದೆ.
‘ಹಗಲು ಕನಸು’ ಬಿಡುಗಡೆ ಆಗುವ ಹೊತ್ತಿನಲ್ಲೇ ದಿನೇಶ್ ಬಾಬೂ ‘ಅಭ್ಯಂಜನ’ ಸಿನಿಮಾ ಚಾಮರಾಜನಗರದಲ್ಲಿ ಪ್ರಾರಂಭಿಸಿ ಅಲ್ಲಿಯೇ ಸಂಪೂರ್ಣ ಚಿತ್ರೀಕರಣ ಮುಗಿಸಲಿದ್ದಾರೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿಯಾಗಿ ಕರಿ ಸುಬ್ಬು ಹಾಗೂ ಅಪೂರ್ವ ಭಾರದ್ವಾಜ್ (ಉಪ್ಪಿನ ಕಾಗದ ಕನ್ನಡ ಸಿನಿಮಾ ನಾಯಕಿ) ನಟಿಸುತ್ತಿದ್ದಾರೆ.