ಕರ್ನಾಟಕ

karnataka

ETV Bharat / sitara

ಅಭಿಮಾನಿ ದೇವರುಗಳೇ ನನಗೆ ವಿಐಪಿ... ಮದುವೆಗೆ ಬಂದು ಆಶೀರ್ವದಿಸಿ ಎಂದ ಧ್ರುವ ಸರ್ಜಾ

ಸರ್ಜಾ ಕುಟುಂಬ ರಾಜ್ಯದ ವಿಐಪಿಗಳಿಗೆ ತುಂಬಾ ಆತ್ಮೀಯವಾಗಿ ಆಕ್ಷನ್ ಪ್ರಿನ್ಸ್ ಮದುವೆಗೆ ಆಹ್ವಾನಿಸಿದೆ. ಅವರು ಮತ್ಯಾರು ಅಲ್ಲ, ಅಭಿಮಾನಿ ದೇವರುಗಳು.

Dhruvasraja invite to the Fans for marriage

By

Published : Nov 18, 2019, 5:54 AM IST

ಸ್ಯಾಂಡಲ್​​ವುಡ್​ ಆ್ಯಕ್ಷನ್ ಪ್ರಿನ್ಸ್ ಧ್ರುವಸರ್ಜಾ ಇದೇ ತಿಂಗಳ 23, 24ರಂದು ದೀರ್ಘಕಾಲದ ಗೆಳತಿ ಪ್ರೇರಣಾ ಶಂಕರ್ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಸ್ವತಃ ಧ್ರುವಸರ್ಜಾ ಅವರೇ ಚಂದನವನದ ನಟ, ನಟಿ ಸೇರಿದಂತೆ ಎಲ್ಲಾ ಕಲಾವಿದರಿಗೂ ಆಮಂತ್ರಣ ಪತ್ರಿಕೆ ನೀಡಿ ಮದುವೆಗೆ ಆಹ್ವಾನಿಸುತ್ತಿದ್ದಾರೆ.

ಸರ್ಜಾ ಕುಟುಂಬ ರಾಜ್ಯದ ವಿಐಪಿಗಳಿಗೆ ತುಂಬಾ ಆತ್ಮೀಯವಾಗಿ ಆಕ್ಷನ್ ಪ್ರಿನ್ಸ್ ಮದುವೆಗೆ ಆಹ್ವಾನಿಸಿದೆ. ಅವರು ಮತ್ಯಾರು ಅಲ್ಲ, ಅಭಿಮಾನಿ ದೇವರುಗಳು.

ಮದುವೆ ಮನೆಯಲ್ಲಿ ಯಾರಿಗೂ ತೊಂದರೆಯಾಗಬಾರದು ಎಂಬ ಉದ್ದೇಶಕ್ಕೆ 23, 24ರಂದು ಕುಟುಂಬದವರು ಹಾಗೂ ಚಿತ್ರರಂಗದ ಸೆಲೆಬ್ರಿಟಿಗಳಿಗೆ ಮೀಸಲಿಟ್ಟಿದ್ದೇನೆ. ನವಂಬರ್ 25ಕ್ಕೆ ವಿಐಪಿಗಳಾದ ಅಭಿಮಾನಿ ದೇವರುಗಳಿಗಾಗಿ ಆರತಕ್ಷತೆ ಕಾರ್ಯಕ್ರಮ ಮಾಡಲಿದ್ದೇವೆ ಎಂದು ಧ್ರುವಸರ್ಜಾ ಹೇಳಿದ್ದಾರೆ.

ಮದುವೆಗೆ ಆಹ್ವಾನಿಸಿದ ಧ್ರುವ ಸರ್ಜಾ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧ್ರುವಸರ್ಜಾಗೆ ಅಭಿಮಾನಿಗಳೆಂದರೆ ಪಂಚಪ್ರಾಣ. ಅವರಿಗಾಗಿಯೇ ನವೆಂಬರ್​​ 25ರಂದು ಮೀಸಲಿಟ್ಟಿದ್ದಾನೆ. ಅಲ್ಲದೆ, ಚಿತ್ರರಂಗದಲ್ಲಿ ಯಾವುದೇ ಮನಸ್ತಾಪ, ನಮ್ಮಿಂದ ಏನೇ ತಪ್ಪಾಗಿದ್ದರೂ ಎಲ್ಲವನ್ನು ಮರೆತು ಮದುವೆಗೆ ಆಗಮಿಸಿ ನಮ್ಮ ಹುಡುಗನಿಗೆ ಹಾರೈಸಿ ಎಂದು ಮನವಿ ಮಾಡಿಕೊಂಡರು.

ಧ್ರುವ ಸರ್ಜಾ ಮಾತನಾಡಿ, ಅಣ್ಣಾವ್ರು ಹೇಳಿದಂತೆ ಅಭಿಮಾನಿಗಳೇ ದೇವರು. ನಿಮಗಾಗಿ ಅಂದು ವಿಭಿನ್ನವಾಗಿ ಸಮಾರಂಭ ನಡಸಲಾಗುತ್ತದೆ. ಎಲ್ಲರೂ ತಪ್ಪದೇ ಹಾಜರಾಗಬೇಕು. ಬೇರೆ ಭಾಷೆಯ ಕಲಾವಿದರಿಗೂ ಆಹ್ವಾನ ನೀಡಿದ್ದೇವೆ ಎಂದ ಅವರು,ಪೊಗರು ಚಿತ್ರದಲ್ಲಿ 4 ಹಾಡುಗಳ ಚಿತ್ರೀಕರಣ ಇನ್ನೂ ಬಾಕಿಯಿರುವ ಕಾರಣ ಗಡ್ಡ ಹಾಗೂ ಉದ್ದ ಕೂದಲಿಗೆ ಸದ್ಯಕ್ಕೆ ಮುಕ್ತಿ ಇಲ್ಲ. ಮದುವೆ ಮುಗಿಸಿ ಪೊಗರು ಶೂಟಿಂಗ್​​​ಗೆ ಹಾಜರಾಗುತ್ತೇನೆ ಎಂದು ಹೇಳಿದರು.

ABOUT THE AUTHOR

...view details