ಎಲ್ಲ ಕಡೆ ಕೇಳಿ ಬರುತ್ತಿರುವ ಒಂದೇ ಒಂದು ಮಾತು ಎಂದರೆ ಕೊರೊನಾ. ಕೊರೊನಾ ಬಗ್ಗೆ ಪೂರ್ತಿ ಮಾಹಿತಿ ಅರಿಯದ ಮಂದಿ ಭಯದಿಂದ ನಲುಗಿ ಹೋಗಿದ್ದಾರೆ. ಆದ್ರೆ ಈ ಬಗ್ಗೆ ಯಾರು ಕೂಡ ಹೆದರಬೇಕಾಗಿಲ್ಲ. ಬದಲಿಗೆ ಇದು ಬಾರದಂತೆ ತಡೆಯಲು ಕೆಲವೊಂದು ಮುಂಜಾಗ್ರತೆಯನ್ನು ಮಾಡಬೇಕು ಎಂದು ಕಿರುತೆರೆ ನಟಿ ದೀಪಿಕದಾಸ್ ಹೇಳಿದ್ದಾರೆ.
ಇತರರನ್ನು ಸ್ವಾಗತಿಸಲು ನಮಸ್ಕರಿಸಿ ಅಂತಿದ್ದಾರೆ ದೀಪಿಕಾ ದಾಸ್!
ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಕೋವಿಡ್ 19(ಕೊರೊನಾ ವೈರೆಸ್) ತಡೆಗಟ್ಟುವ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಇತರರನ್ನು ಸ್ವಾಗತಿಸಲು ನಮಸ್ಕರಿಸಿ ಅಂತಿದ್ದಾರೆ ದೀಪಿಕಾ ದಾಸ್!
ಬಿಗ್ ಬಾಸ್ ಬೆಡಗಿ ದೀಪಿಕಾ ದಾಸ್ ಕೊರೊನಾದ ಬಗ್ಗೆ ಮಾತನಾಡಿದ್ದು, ಎಚ್ಚರವಿರಲಿ ಭಯಬೇಡ. ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ. ಕೆಲಸದ ಸ್ಥಳವನ್ನು ಸ್ವಚ್ಛವಾಗಿಡಿ. ಸೋಂಕು ಪೀಡಿತರ ಸಂಪರ್ಕದಿಂದ ದೂರವಿರಿ. ಸರ್ಕಾದ ಆದೇಶಗಳನ್ನು ಪಾಲಿಸಿ ಎಂದು ಇನ್ಸ್ಟಾಗ್ರಾಮ್ನಲ್ಲಿ ಮನವಿ ಮಾಡಿದ್ದಾರೆ.