ಕರ್ನಾಟಕ

karnataka

ETV Bharat / sitara

ಭೂಮಿ-ದೀಪಿಕಾ ಔಟ್​​​​... ಈ ಬಾರಿ ಇವರಾಗ್ತಾರಂತೆ ಬಿಗ್ ಬಾಸ್​​​​! - deepika anmd vasuki eliminate

ಬಿಗ್​​ ಬಾಸ್​​​​ ಫಿನಾಲೆ ತಲುಪಿದ್ದ ಭೂಮಿ ಶೆಟ್ಟಿ ಹಾಗೂ ದೀಪಿಕಾ ದಾಸ್ ಎಲಿಮಿನೇಟ್ ಆಗಿದ್ದಾರೆ. ಫಿನಾಲೆಯಲ್ಲಿ ಇಂದು ವಾಸುಕಿ ವೈಭವ್​, ಕುರಿ ಪ್ರತಾಪ್ ಹಾಗೂ ಶೈನ್ ಶೆಟ್ಟಿ ಉಳಿದಿದ್ದಾರೆ. ಆದರೆ ಅಂತಿಮವಾಗಿ ವಾಸುಕಿ ಕೂಡಾ ಔಟ್​ ಆಗಲಿದ್ದು, ಶೈನ್​ ಶೆಟ್ಟಿ ಹಾಗೂ ಕುರಿ ಪ್ರತಾಪ್​ ಉಳಿಯುತ್ತಾರೆ ಎನ್ನಲಾಗುತ್ತಿದೆ.

deepika anmd vasuki eliminate
ಅಂತೂ ಬಿಗ್​ ಬಾಸ್​ಗೆ ಬಿತ್ತು ತೆರೆ : ಫಿನಾಲೆಗೆ ಎಂಟ್ರಿ ಕೊಟ್ಟವರು ಇವರೇ ನೋಡಿ!

By

Published : Feb 1, 2020, 11:05 PM IST

ಕುರಿ ಪ್ರತಾಪ್ ಹಾಗೂ ಶೈನ್ ಶೆಟ್ಟಿ ಬಿಗ್ ಬಾಸ್ ಸೀಸನ್ 7ರ ಗ್ರಾಂಡ್ ಫಿನಾಲೆಯ ಅಂತಿಮ ಹಂತಕ್ಕೆ ತಲುಪುತ್ತಾರೆ ಎನ್ನಲಾಗುತ್ತಿದೆ. ಫಿನಾಲೆಯಲ್ಲಿ ಮೊದಲು ಭೂಮಿ ಶೆಟ್ಟಿ ಎಲಿಮಿನೇಟ್ ಆಗಿದ್ದಾರೆ. ಬಳಿಕ ದೀಪಿಕಾ ದಾಸ್ ಕೂಡಾ ಔಟ್​ ಆಗಿದ್ದು, ವಾಸುಕಿ ವೈಭವ್​ ಸೇಫ್​ ಆಗಿದ್ದಾರೆ. ಈಗಾಗಲೇ ಗ್ರಾಂಡ್​ ಫಿನಾಲೆ ಟಿವಿಯಲ್ಲಿ ಪ್ರಸಾರವಾಗುತ್ತಿದ್ದು, ವೀಕ್ಷಕರ ಕುತೂಹಲ ಇನ್ನಷ್ಟು ಇಮ್ಮಡಿಗೊಳಿಸಿದೆ.

ಭೂಮಿ ಮತ್ತು ವಾಸುಕಿ
ದೀಪಿಕಾ

ಫಿನಾಲೆ ತಲುಪಿದ್ದ ವಾಸುಕಿ ವೈಭವ್ ಸದ್ಯಕ್ಕೆ ಸೇಫ್​ ಆಗಿದ್ದಾರೆ. ಆದರೆ ವಾಸುಕಿ ಕೂಡಾ ಎಲಿಮಿನೇಟ್​ ಆಗಲಿದ್ದಾರೆ ಎನ್ನಲಾಗುತ್ತಿದ್ದು, ಕುರಿ ಪ್ರತಾಪ್ ಹಾಗೂ ಶೈನ್ ಶೆಟ್ಟಿ ಇಬ್ಬರೇ ಉಳಿಯುತ್ತಾರೆ ಎಂದು ಹೇಳಲಾಗುತ್ತಿದೆ.

ಶೈನ್​​​
ಸುದೀಪ್​​​

ಇನ್ನು ಅಂತಿಮವಾಗಿ ಶೈನ್​ ಶೆಟ್ಟಿ ಬಿಗ್​ ಬಾಸ್​ ವಿನ್ನರ್​ ಮತ್ತು ಕುರಿ ಪ್ರತಾಪ್​ ರನ್ನರ್​ ಅಪ್​ ಆಗಲಿದ್ದಾರಂತೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ನಾಳೆ ಬಿಗ್​ ಬಾಸ್​ ಸೀಸನ್​ 7ರ ಕೊನೇ ದಿನದ ಎಪಿಸೋಡ್​ ಪ್ರಸಾರವಾಗಲಿದ್ದು, ಅಲ್ಲದಕ್ಕೂ ಖಚಿತ ಉತ್ತರ ಸಿಗಲಿದೆ.

ABOUT THE AUTHOR

...view details