ಕರ್ನಾಟಕ

karnataka

ETV Bharat / sitara

ಮಹದಾಸೆ! ಈ ಕನ್ನಡ ನಿರ್ದೇಶಕನಿಗೆ ಪ್ರತಿಷ್ಟಿತ ಪ್ರಶಸ್ತಿ ಗೆಲ್ಲುವ ಕನಸು

ಈ ಹಿಂದೆ ಹಗ್ಗದ ಕೊನೆ, ಆ್ಯಕ್ಟರ್, ಆ ಕರಾಳ ರಾತ್ರಿ ಚಿತ್ರಗಳನ್ನು ಪನೋರಮಾಗೆ ಕಳುಹಿಸಲು ಯತ್ನಿಸಿ ವಿಫಲವಾದೆ ಎಂದ ನಿರ್ದೇಶಕ ದಯಾಳ್​ ಪದ್ಮನಾಭನ್​, ರಂಗನಾಯಕಿ ಚಿತ್ರದ ಮೂಲಕ ಆ ಆಸೆ ಸಫಲವಾಯಿತು ಎಂದರು. ಈ ವೇಳೆ ಮನದಾಸೆ ಬಿಚ್ಚಿಟ್ಟ ದಯಾಳ್​​, ತನ್ನ ಕನಸಿನ ಪ್ರಶಸ್ತಿ ಬಗ್ಗೆ ಹೇಳಿಕೊಂಡರು.

ದಯಾಳ್​ ಪದ್ಮನಾಭನ್​

By

Published : Oct 16, 2019, 11:44 AM IST

ಸ್ಯಾಂಡಲ್​​ವುಡ್​​​ನಲ್ಲಿ ಕಮರ್ಷಿಯಲ್ ಹಾಗು ಸೋಷಿಯಲ್ ಮೆಸೇಜ್ ಇರುವ ಸಿನಿಮಾಗಳನ್ನು ಕೊಡುತ್ತಿರುವ ಕ್ರಿಯೇಟಿವ್ ಡೈರೆಕ್ಟರ್ ದಯಾಳ್ ಪದ್ಮನಾಭನ್ ಸದ್ಯ 'ರಂಗನಾಯಕಿ'ಯ ಬಿಡುಗಡೆ ತಯಾರಿಯಲ್ಲಿದ್ದಾರೆ.

ರಂಗನಾಯಕಿ ಸಿನಿಮಾ ನಿರ್ದೇಶನ ಮಾಡಿರುವ ದಯಾಳ್ ಪದ್ಮನಾಭನ್, ಗೋವಾ ಫಿಲ್ಮ್​​ ಫೆಸ್ಟಿವಲ್​​​ನಲ್ಲಿ ರಂಗನಾಯಕಿಯನ್ನು ಪ್ರದರ್ಶನ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಈ ಖುಷಿಯ ಸಂದರ್ಭದಲ್ಲಿ ಅವರು ತನ್ನಲ್ಲಿರುವ ಬಹು ದೊಡ್ಡ ಆಸೆಯನ್ನು ಹೇಳಿಕೊಂಡರು.

ಆಸ್ಕರ್ ಪ್ರಶಸ್ತಿ ಪಡೆಯುವ ಆಸೆಯಂತೆ ಈ ಕನ್ನಡ ನಿರ್ದೇಶಕನಿಗೆ!

ರಂಗನಾಯಕಿ ಸಿನಿಮಾ ರಿಲೀಸ್ ಮತ್ತು ಗೋವಾ ಫಿಲಂ ಫೆಸ್ಟಿವಲ್​​ನಲ್ಲಿ ಸ್ಕ್ರೀನಿಂಗ್ ಬಗ್ಗೆ ಮಾತನಾಡುವ ವೇಳೆ ದಯಾಳ್ ತಮ್ಮ ಕನಸಿನ ಪ್ರಶಸ್ತಿ ಬಗ್ಗೆ ಹೇಳಿಕೊಂಡರು. ಕನಸಿನ ಪ್ರಶಸ್ತಿ ಪಡೆಯಲು ಈಗಾಗಲೇ ಒಂದು ವರ್ಷದಿಂದ ಕಥೆ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರಂತೆ. ನಾಲ್ಕು ದೇಶಗಳಲ್ಲಿ ಈ ಸಿನಿಮಾ ಕಥೆ ನಡೆಯಲಿದೆ. ಈ ಹಿಂದೆ ಹಗ್ಗದ ಕೊನೆ, ಆ್ಯಕ್ಟರ್, ಆ ಕರಾಳ ರಾತ್ರಿ ಚಿತ್ರಗಳನ್ನು ಪನೋರಮಾಗೆ ಕಳುಹಿಸಲು ಯತ್ನಿಸಿ ವಿಫಲವಾದೆ. ಆದರೆ ಈಗ ರಂಗನಾಯಕಿ ಚಿತ್ರದ ಮೂಲಕ ಶ್ರಮ ಸಫಲವಾಯಿತು ಎಂದರು. ಈ ವೇಳೆ ಮನದಾಸೆ ತಿಳಿಸಿದ ದಯಾಳ್​​, ನನ್ನ ಆಸ್ಕರ್ ಪ್ರಶಸ್ತಿ ಗೆಲ್ಲೋದು ನನ್ನ ಆಸೆ. ಈ ಆಸೆ ಈಡೇರುತ್ತಾ ಅನ್ನೋದನ್ನು ಕಾಲ‌‌ ನಿರ್ಧರಿಸಲಿದೆ ಎಂದರು.

ABOUT THE AUTHOR

...view details