ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ರಾಬರ್ಟ್'. ಈ ಸಿನಿಮಾ ಟೈಟಲ್ ಜೊತೆಗೆ ಟೀಸರ್ ಹಾಗೂ ಪೋಸ್ಟರ್ನಿಂದ ಸದ್ದು ಮಾಡುತ್ತಿದೆ. ವಿಶೇಷ ಎಂದರೆ ರಾಬರ್ಟ್ ಸಿನಿಮಾ, ಸ್ಯಾಂಡಲ್ವುಡ್ ಮಾತ್ರವಲ್ಲದೆ, ಬೇರೆ ಭಾಷೆಯಲ್ಲಿ ಕೂಡಾ ಸದ್ದು ಮಾಡುತ್ತಿದೆ.
ನಿರ್ಮಾಪಕ ಉಮಾಪತಿ ಬರ್ತಡೇ ವಿಶೇಷವಾಗಿ 'ರಾಬರ್ಟ್' ಹೊಸ ಪೋಸ್ಟರ್ ರಿಲೀಸ್ - Umapati production Robert
ತರುಣ್ ಸುಧೀರ್ ನಿರ್ದೇಶನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ 'ರಾಬರ್ಟ್' ಸಿನಿಮಾದ ಹೊಸ ಪೋಸ್ಟರನ್ನು ಚಿತ್ರತಂಡ ಇಂದು ಬಿಡುಗಡೆ ಮಾಡಿದೆ. ಇಂದು ಉಮಾಪತಿ ಹುಟ್ಟುಹಬ್ಬವಾಗಿದ್ದು ಈ ವಿಶೇಷ ದಿನದಂದು ಗಿಫ್ಟ್ ಆಗಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಬಹುತೇಕ ಚಿತ್ರೀಕರಣ ಮುಗಿಸಿ ಸೆನ್ಸಾರ್ ಟೇಬಲ್ ಮೇಲೆ ಇರುವ ರಾಬರ್ಟ್ ಚಿತ್ರ , ಈಗಾಗಲೇ ಬಿಡುಗಡೆ ಆಗಬೇಕಿತ್ತು. ಆದರೆ ಕೊರೊನಾ ಹಾವಳಿಯಿಂದಾಗಿ ಚಿತ್ರಮಂದಿರಗಳು ಸ್ಥಗಿತಗೊಂಡಿರುವ ಕಾರಣ ಚಿತ್ರ ಬಿಡುಗಡೆ ತಡವಾಗುತ್ತಿದೆ. ಈ ಸಿನಿಮಾ, ಅಭಿಮಾನಿಗಳಲ್ಲಿ ಬಹಳ ಕುತೂಹಲ ಮೂಡಿಸಿದೆ. ಆದರೆ ಚಿತ್ರತಂಡ ಅಭಿಮಾನಿಗಳಿಗೆ ನಿರಾಶೆ ಮಾಡಬಾರದು ಎಂಬ ಉದ್ದೇಶದಿಂದ ದರ್ಶನ್ ಅವರ ಹೊಸ ಲುಕ್ ಒಂದನ್ನು ಬಿಡುಗಡೆ ಮಾಡಿದೆ. ಈ ಪೋಸ್ಟರ್ನಲ್ಲಿ ದರ್ಶನ್ ಕೈಯ್ಯಲ್ಲಿ ಸಿಗಾರ್ ಹಿಡಿದು ಕುರ್ಚಿಯೊಂದರಲ್ಲಿ ಒರಗಿ ಕುಳಿತಿದ್ದಾರೆ. ದರ್ಶನ್ ಪಕ್ಕದಲ್ಲೇ ಗಿಟಾರ್ ಕೂಡಾ ಇದೆ. ಒಟ್ಟಿನಲ್ಲಿ ಈ ಪೋಸ್ಟರ್ ಬಹಳ ಚೆನ್ನಾಗಿದೆ.
ಚಿತ್ರದಲ್ಲಿ ದರ್ಶನ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದು ಗ್ಯಾಂಗ್ಸ್ಟರ್ ಪಾತ್ರ ಮಾಡುತ್ತಿದ್ದಾರೆ. 'ರಾಬರ್ಟ್' ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಈ ಹಿಂದೆ 'ಹೆಬ್ಬುಲಿ' ಸಿನಿಮಾ ಮಾಡಿದ್ದ, ಉಮಾಪತಿ 30ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸಿನಿಮಾ ಮಾಡಿದ್ದಾರೆ. ಇಂದು ಚಿತ್ರ ನಿರ್ಮಾಪಕ ಉಮಾಪತಿ ಹುಟ್ಟುಹಬ್ಬವಾಗಿದ್ದು ಈ ವಿಶೇಷ ದಿನದಂದು 'ರಾಬರ್ಟ್' ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರನ್ನು ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅನ್ನದಾತನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಈ ಚಿತ್ರದಲ್ಲಿ ದಾಸನಿಗೆ ಆಶಾ ಭಟ್ ಜೋಡಿಯಾಗಿದ್ದು, ನಿರ್ದೇಶಕ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಒಟ್ಟಿನಲ್ಲಿ ಈ ಹೊಸ ಪೋಸ್ಟರ್ ಅಭಿಮಾನಿಗಳಿಗಂತೂ ಬಹಳ ಇಷ್ಟ ಆಗಿದೆ.