ಕೊರೊನಾಗೆ ಇಡೀ ವಿಶ್ವವೇ ತತ್ತರಿಸಿದೆ. ಈ ಮಧ್ಯೆ 13ನೇ ಆವೃತ್ತಿಯ ಐಪಿಎಲ್ ಕ್ರಿಕೆಟ್ ಮ್ಯಾಚ್ ಇಂದು ಅಬುಧಾಬಿಯಲ್ಲಿ ಶುರುವಾಗುತ್ತಿದೆ. ಕೊರೊನಾದಿಂದಾಗಿ ಸ್ಟೇಡಿಯಂನಲ್ಲಿ ಲಕ್ಷಾಂತರ ಜನ ಇಲ್ಲದೆ, ಬರೀ ಕ್ರಿಕೆಟ್ ಆಟಗಾರರು ಮಾತ್ರ ಎಲ್ಲಾ ಸುರಕ್ಷತೆ ಅಳವಡಿಸಿಕೊಂಡು ಆಟವಾಡಬೇಕಿದೆ.
ಐಪಿಎಲ್ ಅಭಿಮಾನಿಗಳಿಗೆ ಚಾಲೆಂಜಿಂಗ್ಸ್ಟಾರ್ ಕಿವಿಮಾತು.. ಅವರು ಹೇಳಿದ್ದಿಷ್ಟೇ.. - ಐಪಿಎಲ್
ಈ ಐಪಿಎಲ್ ಬಂತು ಅಂದರೆ ಕೋಟಿ ಕೋಟಿ ಬೆಟ್ಟಿಂಗ್ ನಡೆಯುತ್ತೆ. ಯಾವಾಗ ಐಪಿಎಲ್ ಆರಂಭ ಆಗುತ್ತೆ ಅಂತಾ ಬೆಟ್ಟಿಂಗ್ ಕಿಂಗ್ ಪಿನ್ ಆಗಲು ತುದಿಗಾಲಲ್ಲಿ ನಿಂತಿರುತ್ತಾರೆ. ಈ ಬೆಟ್ಟಿಂಗ್ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದು ಕಿವಿ ಮಾತು ಹೇಳಿದ್ದಾರೆ..
ಐಪಿಎಲ್ ಅಭಿಮಾನಿಗಳಿಗೆ ಚಾಲೆಂಜಿಂಗ್ಸ್ಟಾರ್ ಕಿವಿಮಾತು
ಈ ಐಪಿಎಲ್ ಬಂತು ಅಂದರೆ ಕೋಟಿ ಕೋಟಿ ಬೆಟ್ಟಿಂಗ್ ನಡೆಯುತ್ತೆ. ಯಾವಾಗ ಐಪಿಎಲ್ ಆರಂಭ ಆಗುತ್ತೆ ಅಂತಾ ಬೆಟ್ಟಿಂಗ್ ಕಿಂಗ್ ಪಿನ್ ಆಗಲು ತುದಿಗಾಲಲ್ಲಿ ನಿಂತಿರುತ್ತಾರೆ. ಈ ಬೆಟ್ಟಿಂಗ್ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದು ಕಿವಿ ಮಾತು ಹೇಳಿದ್ದಾರೆ.
ಐಪಿಎಲ್ ಮ್ಯಾಚ್ ತರ ನೋಡ್ರಿ, ಬೆಟ್ಟಿಂಗ್ ಕಟ್ಟಿ ಜೀವನ ಹಾಳು ಮಾಡಿಕೊಳ್ಳಬೇಡಿ, ಬಡ್ಡಿಗೆ ದುಡ್ಡು ತಂದು ಬೆಟ್ಟಿಂಗ್ ಕಟ್ಟೋದು ತಪ್ಪು ಅಂತಾ ದರ್ಶನ್ ಅಭಿಮಾನಿಗಳಿಗೆ ಕಿವಿ ಮಾತು ಹೇಳಿದ್ದಾರೆ. ಇಂದಿನಿಂದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಟೀಂಗಳ ನಡುವೆ ಕ್ರಿಕೆಟ್ ಮ್ಯಾಚ್ ಶುರುವಾಗಲಿದೆ.