ಕರ್ನಾಟಕ

karnataka

By

Published : Jan 25, 2020, 12:14 PM IST

ETV Bharat / sitara

ಹುಟ್ಟುಹಬ್ಬಕ್ಕೂ ಮೊದಲೇ ಚಾಲೆಂಜಿಂಗ್ ಸ್ಟಾರ್​ಗೆ ಸಿಕ್ತು ಅಭಿಮಾನಿಯ ಸ್ಪೆಷಲ್ ಗಿಫ್ಟ್

ದರ್ಶನ್ ಅಭಿಮಾನಿ ಹಾರ್ಸ್ ರೈಡಿಂಗ್ ಹೆಲ್ಮೆಟ್​, ಜಾಕೆಟ್ ಹಾಗೂ ಸ್ಟಿಕ್ ಹಾಗೂ ಹಾರ್ಸ್ ರೈಡಿಂಗ್​​ಗೆ ಬೇಕಾದ ಸಾಮಗ್ರಿಗಳನ್ನು ದರ್ಶನ್​​ಗೆ ವಿಶೇಷ ಉಡುಗೊರೆಯನ್ನಾಗಿ ನೀಡಿದ್ದಾರೆ. ಅಭಿಮಾನಿಯ ವಿಶೇಷ ಉಡುಗೊರೆಗೆ ದರ್ಶನ್ ಕೂಡಾ ಖುಷಿಯಾಗಿದ್ದಾರೆ.

Darshan
ದರ್ಶನ್

ಚಾಲೆಂಜ್ ಸ್ಟಾರ್ ದರ್ಶನ್ ಪ್ರಾಣಿಪ್ರಿಯ ಅನ್ನೋದು ಎಲ್ಲರಿಗೂ ಗೊತ್ತು. ಅದರಲ್ಲೂ ಸ್ವಲ್ಪ ಬಿಡುವು ದೊರೆತರೆ ಸಾಕು ಮೈಸೂರಿನಲ್ಲಿರುವ ತಮ್ಮ ಫಾರ್ಮ್​ಹೌಸ್ ಸೇರಿ, ಕುದುರೆ ಸವಾರಿ ಮಾಡಿ, ತಮ್ಮ ಮುದ್ದಿನ ಪ್ರಾಣಿಗಳನ್ನು ನೋಡಿಕೊಂಡು ಎಂಜಾಯ್ ಮಾಡುತ್ತಾರೆ.

ಚಾಲೆಂಜಿಂಗ್ ಸ್ಟಾರ್​ಗೆ ಸಿಕ್ತು ಅಭಿಮಾನಿಯ ಸ್ಪೆಷಲ್ ಗಿಫ್ಟ್

ಫೆಬ್ರವರಿ 16 ದರ್ಶನ್ ಹುಟ್ಟುಹಬ್ಬ. ದಚ್ಚು ಬರ್ತಡೇಗೆ ಇನ್ನೂ 22 ದಿನಗಳಿರುವಾಗಲೇ ಅಭಿಮಾನಿಯೊಬ್ಬ ತನ್ನ ಮೆಚ್ಚಿನ ನಟನಿಗೆ ವಿಶೇಷ ಗಿಫ್ಟ್ ಒಂದನ್ನು ನೀಡಿದ್ದಾರೆ. ಕುದುರೆ ಸವಾರಿ ಎಂದರೆ ಕೂಡಾ ದರ್ಶನ್​ಗೆ ವಿಶೇಷ ಕ್ರೇಜ್​. ಆದ್ದರಿಂದ ದರ್ಶನ್ ಅಭಿಮಾನಿ ಹಾರ್ಸ್ ರೈಡಿಂಗ್ ಹೆಲ್ಮೆಟ್​, ಜಾಕೆಟ್ ಹಾಗೂ ಸ್ಟಿಕ್ ಹಾಗೂ ಹಾರ್ಸ್ ರೈಡಿಂಗ್​​ಗೆ ಬೇಕಾದ ಸಾಧನಗಳನ್ನು ದರ್ಶನ್​​ಗೆ ವಿಶೇಷ ಉಡುಗೊರೆಯನ್ನಾಗಿ ನೀಡಿದ್ದಾರೆ. ಅಭಿಮಾನಿಯ ವಿಶೇಷ ಉಡುಗೊರೆಗೆ ದರ್ಶನ್ ಕೂಡಾ ಖುಷಿಯಾಗಿದ್ದಾರೆ. ಇನ್ನು ದರ್ಶನ್ ಹುಟ್ಟುಹಬ್ಬ ಬಂತೆಂದರೆ ಸಾಕು ಅಭಿಮಾನಿಗಳು ವಿಶೇಷ ಕೇಕ್ , ಗಿಡಗಳು ಹಾಗೂ ಇನ್ನಿತರ ಉಡುಗೊರೆಗಳನ್ನು ತಂದು ನೀಡುವುದು ವಿಶೇಷ. ಆದರೆ ಕಳೆದ ವರ್ಷದಿಂದ ದರ್ಶನ್ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಬರ್ತಡೇಗೆ ಹಣ ಖರ್ಚು ಮಾಡುವ ಬದಲು ಆ ಹಣದಿಂದ ಅಕ್ಕಿ, ಬೇಳೆ, ಉಪಯುಕ್ತ ಸಾಮಗ್ರಿಗಳನ್ನು ತಂದು ನೀಡಿದರೆ ಅದನ್ನು ಅನಾಥಾಶ್ರಮಗಳಿಗೆ ನೀಡುವ ಮೂಲಕ ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡೋಣ ಎಂದು ದರ್ಶನ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

For All Latest Updates

ABOUT THE AUTHOR

...view details