ಅಭಿಮಾನಿಗಳ ಆರಾಧ್ಯ ದೈವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಾಕ್ಸ್ ಆಫೀಸ್ ಸುಲ್ತಾನನಾಗಿ ಅಬ್ಬರಿಸ್ತಿದ್ದಾರೆ. ಇವರ ಅಭಿಮಾನಿಗಳಿಗೆ ದಾಸ ಅಂದ್ರೆ ಎಲ್ಲಿಲ್ಲದ ಪ್ರೀತಿ. ಅಲ್ಲದೇ ಅಭಿಮಾನಿಗಳು ಅಂದರೆ ದಾಸನಿಗೂ ಅಷ್ಟೇ ಪ್ರೀತಿ.
ಸರಳತೆ ಮೆರೆದ ನಟ ದರ್ಶನ್ : ಪ್ರೊಡಕ್ಷನ್ ಹುಡುಗನ ಮದುವೆಯಲ್ಲಿ ಭಾಗಿ - ಪ್ರೊಡಕ್ಷನ್ ಹುಡುಗನ ಮದುವೆಯಲ್ಲಿ ಭಾಗಿಯಾದ ದರ್ಶನ್
ದರ್ಶನ್ ಪ್ರೊಡಕ್ಷನ್ನಲ್ಲಿ ಕೆಲಸ ಮಾಡುವ ಹುಡುಗನೊಬ್ಬನ ಮದುವೆಗೆ ನಟ ದರ್ಶನ್ ಭಾಗಿಯಾಗಿ ಸರಳತೆ ತೋರಿದ್ದಾರೆ. ಅಲ್ಲದೇ ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಹಳೆಯದನ್ನು ಮರೆಯಬಾರದು ಎಂಬುದನ್ನು ತೋರಿಸಿದ್ದಾರೆ.
ನಟ ದರ್ಶನ್
ಅಭಿಮಾನಿಗಳು ಮಾಡುವ ಯಾವುದೇ ಕೆಲಸಕ್ಕೂ ಸಾಥ್ ಕೊಡುವ ಸಾರಥಿ, ದರ್ಶನ್ ಪ್ರೊಡಕ್ಷನ್ನಲ್ಲಿ ಕೆಲಸ ಮಾಡುವ ಹುಡುಗನೊಬ್ಬನ ಮದುವೆಗೆ ಭಾಗಿಯಾಗಿ ಸರಳತೆ ತೋರಿದ್ದಾರೆ. ಅಲ್ಲದೇ ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಹಳೆಯದನ್ನು ಮರೆಯಬಾರದು ಎಂಬುದನ್ನು ತೋರಿಸಿದ್ದಾರೆ.
ಇನ್ನು ದರ್ಶನ್ ಪ್ರೊಡಕ್ಷನ್ ಬಾಯ್ ಮದುವೆಗೆ ಹೋಗಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.