ಕರ್ನಾಟಕ

karnataka

ಪಂಚ ಭಾಷೆಯಲ್ಲಿ 'ದಮಯಂತಿ' ಅವತಾರದಲ್ಲಿ ರಾಧಿಕಾ... ಕನ್ನಡದಿಂದ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ!

By

Published : Sep 22, 2019, 9:13 PM IST

ಸ್ಯಾಂಡಲ್​ವುಡ್​​ನ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡೋದ್ರಲ್ಲಿ ಬ್ಯೂಸಿಯಾಗಿರೋ ರಾಧಿಕಾ, ಈ ವರ್ಷ ದಮಯಂತಿಯಾಗಿ ಪ್ರೇಕ್ಷಕರೆದುರಿಗೆ ಬರೋದಕ್ಕೆ ಸಜ್ಜಾಗಿದ್ದಾರೆ.

ದಮಯಂತಿ ಟೀಸರ್

ಸ್ಯಾಂಡಲ್​ವುಡ್​​ಗೆ ಮತ್ತೆ ಎಂಟ್ರಿ ಕೊಟ್ಟಿರುವ ರಾಧಿಕಾ ಕುಮಾರಸ್ವಾಮಿ ಅಭಿನಯದ ದಮಯಂತಿ ಸಿನಿಮಾ ಮೇಕಿಂಗ್ ಹಂತದಲ್ಲೇ ಬಾರಿ ಸದ್ದು ಮಾಡಿತ್ತು. ಈ ಚಿತ್ರದ ಟೀಸರ್ ಮೊನ್ನೆಯಷ್ಟೇ ರಿಲೀಸ್ ಆಗಿದೆ.

ವಿಶೇಷ ಅಂದ್ರೆ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ 5 ಭಾಷೆಯಲ್ಲಿ ಏಕಕಾಲದಲ್ಲಿ ತಯಾರಾಗಿರೋ ದಮಯಂತಿ ಚಿತ್ರದ ಟೀಸರ್​​, ಏಕಕಾಲದಲ್ಲೇ ಪಂಚ ಭಾಷೆಯಲ್ಲಿ ರಿಲೀಸ್ ಆಗಿದೆ. ಐದು ಭಾಷೆಯಲ್ಲೂ ರಾಧಿಕಾ ದಮಯಂತಿ ಅವತಾರ ಸಖತ್ ಬೋಲ್ಡ್ ಆಗಿದೆ. ಎಲ್ಲ ರೀತಿಯಿಂದಲೂ ಈ ಬಾರಿ ರಾಧಿಕಾ ಕುಮಾರಸ್ವಾಮಿಯ ಘರ್ಜನೆ ಜೋರಾಗಿದೆ.

ದಮಯಂತಿ ಟೀಸರ್ ಬಿಡುಗಡೆ

ರಾಧಿಕಾ ಕುಮಾರಸ್ವಾಮಿ ಅವರಿಗೆ ಅರುಂಧತಿ ಸಿನಿಮಾದ ರೀತಿ ಪಾತ್ರ ಮಾಡಬೇಕು ಅನ್ನೋದು ಬಹುದಿನದ ಕನಸಾಗಿತ್ತು. ಈಗ ಅದು ದಮಯಂತಿ ಸಿನಿಮಾದ ಮೂಲಕ ಈಡೇರುತ್ತಿದೆ. ಟೀಸರ್​ನಲ್ಲಿ ದಯಮಂತಿ ಅವತಾರದ ರಾಧಿಕಾ ಡೈಲಾಗ್ ಡೆಲವರಿ, ಗೆಟಪ್​​, ಲುಕ್​​, ಆ್ಯಟಿಟ್ಯೂಡ್​​​​​ ಖಂಡಿತ ಈ ಸಿನಿಮಾವಗೆ ದೊಡ್ಡ ಮೈಲಿಗಲ್ಲನ್ನ ನೀಡಲಿದೆ ಅನ್ನೋ ಸೂಚನೆ ಕೊಡ್ತಿದೆ.

ಸ್ಯಾಂಡಲ್​​​ವುಡ್​​ನ ಬಹುಮುಖ ಪ್ರತಿಭೆ, ನಟ, ನಿರ್ದೇಶಕ, ನಿರ್ಮಾಪಕ, ವಿತರಕ ನವರಸನ್ ನಿರ್ದೇಶನದೊಂದಿಗೆ ನಿರ್ಮಾಣ ಮಾಡಿರೋ ಸಿನಿಮಾ ದಮಯಂತಿ. ಶ್ರೀ ಲಕ್ಷ್ಮೀ ವೃಶಾದ್ರಿ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ತಯಾರಾಗಿರೋ ಈ ಸಿನಿಮಾಗೆ ಆರ್.ಎಸ್. ಗಣೇಶ್ ನಾರಾಯಣ್ ಸಂಗೀತ ಸಂಯೋಜಿಸಿದ್ದಾರೆ. ಮಹೇಶ್ ರೆಡ್ಡಿ ಸಂಕಲನವಿರೋ ಈ ಸಿನಿಮಾಗೆ ಪಿಕೆಎಚ್ ದಾಸ್ ಕ್ಯಾಮೆರಾ ಕಣ್ಣಾಗಿದ್ದಾರೆ. ಸದ್ಯ ಟೀಸರ್ ಯೂ ಟ್ಯೂಬ್​​ನಲ್ಲಿ ಬಾರಿ ಸೌಂಡ್ ಮಾಡುತ್ತಿದೆ.

ABOUT THE AUTHOR

...view details