ಭಾರತೀಯ ಸಿನಿಮಾ ರಂಗದಲ್ಲಿ ಅತ್ಯುನ್ನತ ಸಾಧನೆಗೈದ ಕಲಾವಿದರಿಗೆ ನೀಡುವ ಪ್ರಶಸ್ತಿಯೇ ಈ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ. ಈ ಪ್ರಶಸ್ತಿಯನ್ನು ಭಾರತೀಯ ಸಿನಿಮಾ ರಂಗದ ಪಿತಾಮಹರೆಂದು ಕರೆಸಿಕೊಳ್ಳುವ ದುಂಡಿರಾಜ್ ಗೋವಿಂದ ಫಾಲ್ಕೆ(ದಾದಾ ಸಾಹೇಬ್)ರ ಜನ್ಮದಿನದ ನೆನಪಿಗಾಗಿ ಕೇಂದ್ರ ಸರ್ಕಾರ ಪ್ರದಾನ ಮಾಡುತ್ತದೆ.
ಡಾ. ರಾಜ್‌ಗೆ ಒಲಿದು ಬಂದಿದ್ದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಗ್ಗೆ ನಿಮಗಿದು ಗೊತ್ತೇ..?
ಭಾರತೀಯ ಸಿನಿಮಾ ರಂಗದಲ್ಲಿ ಅತ್ಯುನ್ನತ ಸಾಧನೆಗೈದ ಕಲಾವಿದರಿಗೆ ನೀಡುವ ಪ್ರಶಸ್ತಿಯೇ ಈ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ. ಈ ಪ್ರಶಸ್ತಿಯನ್ನು ಭಾರತೀಯ ಸಿನಿಮಾ ರಂಗದ ಪಿತಾಮಹರೆಂದು ಕರೆಸಿಕೊಳ್ಳುವ ದುಂಡಿರಾಜ್ ಗೋವಿಂದ ಫಾಲ್ಕೆ(ದಾದಾ ಸಾಹೇಬ್)ರ ಜನ್ಮದಿನದ ನೆನಪಿಗಾಗಿ ಕೇಂದ್ರ ಸರ್ಕಾರ ಪ್ರದಾನ ಮಾಡುತ್ತದೆ.
ದೇಶದಲ್ಲಿ ಪ್ರತೀ ವರ್ಷವೂ ಕೂಡ ಒಬ್ಬೊಬ್ಬ ಕಲಾವಿದರಿಗೆ ರಾಷ್ಟ್ರೀಯ ಚಲನ ಚಿತ್ರೋತ್ಸವ ನಡೆಯುವ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಯನ್ನು 1969ರಿಂದ ಪ್ರದಾನ ಮಾಡಲು ಪ್ರರಂಭಿಸಲಾಯಿತು. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲಿಗರೆಂದರೆ, ದೇವಿಕಾ ರಾಣಿ. ಇವರಿಗೆ 1969ರಲ್ಲಿ ಪ್ರದಾನ ಮಾಡಲಾಗಿತ್ತು. ನಂತರ 1970ರಲ್ಲಿ ಬಿಎನ್ ಸರ್ಕಾರ್, 1971ರಲ್ಲಿ ಪೃಥ್ವಿರಾಜ್ ಕಪೂರ್,1972ರಲ್ಲಿ ಪಂಕಜ್ ಮಲ್ಲಿಕ್ಗೆ ನೀಡಲಾಗಿತ್ತು. ಈ ದಾದಾ ಸಹೇಬ್ ಫಾಲ್ಕೆ ಪ್ರಶಸ್ತಿಯು ನಮ್ಮ ಹೆಮ್ಮೆಯ ಕನ್ನಡಿಗ, ಗಾನ ಗಂಧರ್ವ, ನಟಸಾರ್ವಭೌನೆಂದು ಕರೆಸಿಕೊಳ್ಳುವ ಡಾ. ರಾಜ್ ಕುಮಾರ್ ಅವರಿಗೆ 1995ರಲ್ಲೇ ಪ್ರದಾನ ಮಾಡಲಾಗಿತ್ತು.
ಸದ್ಯ ಈ ಬಾರಿಯ ಅಂದರೆ 66ನೇ ದಾದಾ ಸಾಹೇಬ್ ಫಾಲ್ಕೆ ಪ್ರಾಶಸ್ತಿಯನ್ನು ಬಾಲಿವುಡ್‌ನ ಬಿಗ್ ಬಿ ಅಮಿತಾಬ್ ಬಚ್ಚನ್ಗೆ ನೀಡಿ ಗೌರವಿಸಲಾಗುತ್ತಿದೆ.