ಕೊರೊನಾ ಕಾರಣದಿಂದಾಗಿ ಮೊದಲ ಬಾರಿಗೆ ಚಿತ್ರಸಂತೆಯನ್ನು ಆನ್‌ಲೈನ್ ಮೂಲಕ ನಡೆಸಲು ನಿರ್ಧರಿಸಲಾಗಿದೆ. ಹೀಗಾಗಿ ಕಲಾ ಪ್ರೇಮಿಗಳಿಗೆ ಕೊಂಚ ನಿರಾಸೆಯಾಗಿದೆ.
18ನೇ ವರ್ಷದ ಚಿತ್ರಸಂತೆ ಜನವರಿ 3 ರಿಂದ ಒಂದು ತಿಂಗಳ ಕಾಲ ನಡೆಯಲಿದೆ. ಈ ಬಾರಿಯ ಕಾರ್ಯಕ್ರಮವನ್ನು ಕೊರೊನಾ ವಾರಿಯರ್ಸ್ಗೆ ಸಮರ್ಪಿಸಲಾಗುತ್ತಿದೆ. ಶಿವಮೊಗ್ಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗುವ ಕಾರಣ ಸುಧಾಮೂರ್ತಿ ಚಾಲನೆ ನೀಡುವರು.
ಓದಿ : ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಮದುವೆಯ ಸುಂದರ ಕ್ಷಣಗಳು: ವಿಡಿಯೋ
ಚಿತ್ರಸಂತೆಗೆ ಈಗಾಗಲೇ ಸಕಲ ಸಿದ್ಧತೆಗಳು ನಡೆದಿದ್ದು 1,500ಕ್ಕು ಹೆಚ್ಚು ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಕಳೆದ ಸಲ ಆಯ್ಕೆಯಾಗದ 500ಕ್ಕೂ ಹೆಚ್ಚು ಕಲಾವಿದರಿಗೂ ಈ ಬಾರಿಯೂ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ದೇಶದ ವಿವಿಧ ರಾಜ್ಯಗಳು, ವಿದೇಶಿ ಕಲಾವಿದರೂ ಕೂಡ ಭಾಗವಹಿಸಲು ಅವಕಾಶವಿದೆ.
ಈ ಬಾರಿ ಚಿತ್ರಸಂತೆ ಉದ್ಘಾಟಿಸಲಿದ್ದಾರೆ ಇನ್ಫೋಸಿಸ್ ಸುಧಾಮೂರ್ತಿ 15 ಸಾವಿರಕ್ಕೂ ಹೆಚ್ಚು ಕಲಾಕೃತಿಗಳನ್ನು chitrasante.org ಜಾಲತಾಣದಲ್ಲಿ ಹಾಗೂ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ನೋಡಬಹುದು ಎಂದು ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ತಿಳಿಸಿದರು.