ನಾನು ಅಮೆರಿಕದಿಂದ ಚಿತ್ರರಂಗಕ್ಕೆ ಬಂದಿದ್ದು ಸಮಾಜ ಸುಧಾರಣೆಗಾಗಿ ಎಂದು ನಟ ಚೇತನ್ ಹೇಳಿದ್ದಾರೆ. ರಣಂ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಧ್ಯಮಗಳ ಮುಂದೆ ಬಂದ ಚೇತನ್, ಇತ್ತೀಚಿನ ದಿನಗಳಲ್ಲಿ ನೀವು ಸಿನಿ ಕೆರಿಯರ್ ಕಡೆ ಹೆಚ್ಚು ಗಮನ ಕೊಡ್ತಿಲ್ಲ ಎಂಬ ಪ್ರಶ್ನೆಗೆ, ನಾನು ಸಿನಿಮಾಗಳನ್ನು ಮಾಡ್ತೇನೆ. ಜೊತೆಗೆ ಸಮಾಜಕ್ಕೆ ಏನು ವಾಪಸ್ಸು ಕೊಡಬಹುದು ಎಂಬ ಉದ್ದೇಶದಿಂದಲೇ ಅಮೆರಿಕದಿಂದ ಇಲ್ಲಿಗೆ ವಾಪಸ್ಸು ಬಂದೆ ಎಂದರು.
ಅಮೆರಿಕದಿಂದ ವಾಪಸ್ಸು ಬಂದಿದ್ದಕ್ಕೆ ನಟ ಚೇತನ್ ಹೇಳಿದ ಉತ್ತರ ಇಲ್ಲಿದೆ ನೋಡಿ! - ನಟ ಚೇತನ್
ನಾನು ಸಿನಿಮಾಗಳನ್ನು ಮಾಡ್ತೇನೆ. ಜೊತೆಗೆ ಸಮಾಜಕ್ಕೆ ಏನು ವಾಪಸ್ಸು ಕೊಡಬಹುದು ಎಂಬ ಉದ್ದೇಶದಿಂದಲೇ ಅಮೆರಿಕದಿಂದ ಇಲ್ಲಿಗೆ ವಾಪಾಸ್ಸು ಬಂದೆ ಎಂದು ಚೇತನ್ ಹೇಳಿದ್ರು.
ದೇಶದಲ್ಲಿರುವ ಜಾತಿ, ಧರ್ಮ ತಾರತಮ್ಯವನ್ನು ಅಳಿಸಿ, ಸಂವಿಧಾನದಲ್ಲಿ ನಾವೆಲ್ಲರೂ ಸಮಾನರು ಎಂಬುದನ್ನು ತೋರಿಸಬೇಕಿದೆ. ಈ ಹೋರಾಟಕ್ಕೆ ಸಿನಿಮಾ ನನಗೆ ಉತ್ತಮ ವೇದಿಕೆ ಅನಿಸಿತು. ಹಾಗಾಗಿ ನಾನು ಚಿತ್ರರಂಗಕ್ಕೆ ಬಂದೆ ಎಂದರು.
ಚಿತ್ರರಂಗದಿಂದ ನನಗೆ ಉತ್ತಮ ಐಡೆಂಟಿಟಿ ಸಿಕ್ತು. ರಾಜ್ಯದ ಯಾವುದೇ ಮೂಲೆಗೆ ಹೋದರೂ ಜನರು ಪ್ರೀತಿ ಕೊಡ್ತಾರೆ. ಚಿತ್ರರಂಗದಿಂದ ಸಿಕ್ಕಿರುವ ಅಲ್ಪಸ್ವಲ್ಪ ಫೇಮ್ ಬಳಸಿಕೊಂಡು, ಸಮಾಜಕ್ಕೆ ಒಳ್ಳೆಯದಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಇದರ ಜೊತೆ ಸಿನಿಮಾವನ್ನು ನಾನು ಮಾಡ್ತೇನೆ. ಒಳ್ಳೆ ಮನರಂಜನೆಯ ಜೊತೆ ಚಿತ್ರಕ್ಕೆ ಹಾಕಿದ ಬಂಡವಾಳವನ್ನು ನಿರ್ಮಾಪಕರಿಗೆ ವಾಪಸ್ಸ್ ಬರುವಂತೆ ಮಾಡುತ್ತೇನೆ ಎಂದ್ರು.