ಕರ್ನಾಟಕ

karnataka

ETV Bharat / sitara

ನಿರ್ಮಾಪಕಿಯಾಗಿ ಬಡ್ತಿ ಪಡೆದ ಚೈತ್ರಾ ವಾಸುದೇವನ್

ಚೈತ್ರಾ ವಾಸುದೇವನ್ ಇದೀಗ ನಿರ್ಮಾಪಕಿ ಆಗಿ ಬಡ್ತಿ ಪಡೆದಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಚೈತ್ರಾ ವಾಸುದೇವನ್ ಸಾರಥ್ಯದಲ್ಲಿ ಚಂದನವನದ ಗೊಂಬೆ ಎಂಬ ಟಾಕಿಂಗ್ ಶೋ ಆರಂಭವಾಗಲಿದ್ದು, ಅದಕ್ಕೆ ಆಕೆ ಬಂಡವಾಳ ಹೂಡಿದ್ದಾರೆ.

chaitra vasudevan producer for chandanada gombe
ಚೈತ್ರಾ ವಾಸುದೇವನ್

By

Published : Oct 16, 2020, 3:16 PM IST

ಕಲರ್ಸ್ ಕನ್ನಡ ಸಿನಿಮಾ ವಾಹಿನಿಯಲ್ಲಿ ಪ್ರತಿ ವಾರಾಂತ್ಯ ಪ್ರಸಾರವಾಗುತ್ತಿದ್ದ ಒಂದು ಸಿನಿಮಾ ಕತೆಯ ನಿರೂಪಕಿಯಾಗಿ ಮೋಡಿ ಮಾಡಿದ್ದ ಚೈತ್ರಾ ವಾಸುದೇವನ್ ಜನರಿಗೆ ಹತ್ತಿರವಾಗಿದ್ದು, ಬಿಗ್ ಬಾಸ್ ಸ್ಪರ್ಧಿಯಾದ ಬಳಿಕವೇ. ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಚೈತ್ರಾ ವಾಸುದೇವನ್ ದೊಡ್ಮನೆಯೊಳಗೆ ಇದ್ದದ್ದು ಕೇವಲ 14 ದಿನಗಳು ಮಾತ್ರ. ದೊಡ್ಮನೆಯಲ್ಲಿದ್ದಷ್ಟು ದಿನ ತನ್ನ ನಡವಳಿಕೆ, ಮಾತು, ನಗುವಿನ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಚೈತ್ರಾ ಬಿಗ್ ಬಾಸ್ ನಿಂದ ಬಂದ ಬಳಿಕವೂ ನಿರೂಪಣೆ ಮುಂದುವರಿಸಿದ್ದರು.

ಚೈತ್ರಾ ವಾಸುದೇವನ್

ಇಂತಿಪ್ಪ ಚೈತ್ರಾ ವಾಸುದೇವನ್ ಇದೀಗ ನಿರ್ಮಾಪಕಿ ಆಗಿ ಬಡ್ತಿ ಪಡೆದಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಚೈತ್ರಾ ವಾಸುದೇವನ್ ಸಾರಥ್ಯದಲ್ಲಿ ಚಂದನವನದ ಗೊಂಬೆ ಎಂಬ ಟಾಕಿಂಗ್ ಶೋ ಆರಂಭವಾಗಲಿದ್ದು, ಅದಕ್ಕೆ ಆಕೆ ಬಂಡವಾಳ ಹೂಡಿದ್ದಾರೆ. ಆ ಮೂಲಕ ನಿರ್ಮಾಪಕಿಯಾಗಿಯೂ ಆಕೆ ಗುರುತಿಸಿಕೊಂಡಿದ್ದಾರೆ. ಬಿಗ್ ಬಾಸ್ ಶೋ ಮುಗಿದ ಒಂದು ವರ್ಷದ ನಂತರ ಚೈತ್ರಾ ಹೊಸ ಯೋಜನೆಗೆ ಮುಂದಾಗಿದ್ದಾರೆ.

ಚೈತ್ರಾ ವಾಸುದೇವನ್

ನಾಡಹಬ್ಬ ದಸರಾದ ನಿಮಿತ್ತ ಈ ಟಾಕಿಂಗ್ ಶೋ ಪ್ರಸಾರವಾಗಲಿದ್ದು, ಚಂದನವನದ ಚೆಂದದ ಚೆಲುವೆಯರು ಈ ಕಾರ್ಯಕ್ರಮದಲ್ಲಿ ಮಿಂಚಲಿದ್ದಾರೆ. ಜೊತೆಗೆ ಚೈತ್ರಾ ಅವರು ಕೇಳುವ ಕ್ರೇಜಿ ಪ್ರಶ್ನೆಗಳಿಗೆ ಲಲನೆಯರು ಉತ್ತರಿಸಲಿದ್ದಾರೆ. ಟಾಕಿಂಗ್ ಶೋ ನ ಪ್ರೋಮೋ ಈಗಾಗಲೇ ಹರಿದಾಡುತ್ತಿದ್ದು, ನೆಟ್ಟಿಗರ ಮನ ಸೆಳೆದಿದೆ.

ಚೈತ್ರಾ ವಾಸುದೇವನ್

ಅಂದ ಹಾಗೇ ಈ ಶೋವಿನಲ್ಲಿ ಶ್ರೀಲೀಲಾ, ಅದಿತಿ ಪ್ರಭುದೇವ, ಹರ್ಷಿಕಾ ಪೂಣಚ್ಚ, ರಾಧಿಕಾ ಚೇತನ್, ಪ್ರಿಯಾ ಮಣಿ, ಪ್ರಣೀತಾ ಸುಭಾಷ್, ಶ್ವೇತಾ ಶ್ರೀವಾತ್ಸವ್, ಮಾನ್ವಿತಾ ಹರೀಶ್, ನೇಹಾ ರಾಮಕೃಷ್ಣ ಹಾಗೂ ಸೋನು ಗೌಡ ಭಾಗವಹಿಸಲಿದ್ದಾರೆ.

ಚೈತ್ರಾ ವಾಸುದೇವನ್

ABOUT THE AUTHOR

...view details