ಕರ್ನಾಟಕ

karnataka

ETV Bharat / sitara

ಬೈಕ್​ ಓಡಿಸಿ ಅಭಿಮಾನಿಯ ಆಸೆ ಈಡೇರಿಸಿದ ಸೆಂಚುರಿ ಸ್ಟಾರ್ ಶಿವಣ್ಣ: ವಿಡಿಯೋ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬೈಕ್​ ಓಡಿಸುವ ಮೂಲಕ ಅಭಿಮಾನಿಯ ಆಸೆ ಈಡೇರಿಸಿದ್ದಾರೆ.

ಸೆಂಚುರಿ ಸ್ಟಾರ್ ಶಿವಣ್ಣ
ಸೆಂಚುರಿ ಸ್ಟಾರ್ ಶಿವಣ್ಣ

By

Published : Sep 2, 2021, 11:31 AM IST

ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರು ಹಾಗೂ ಅಭಿಮಾನಿಗಳ ಅಚ್ಚುಮೆಚ್ಚಿನ ಸ್ಟಾರ್ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಸದ್ಯ ಭಜರಂಗಿ 2, ನೀ ಸಿಗೋವರೆಗೂ, ಬೈರಾಗಿ ಚಿತ್ರಗಳ ಚಿತ್ರೀಕರಣದಲ್ಲಿ ಶಿವಣ್ಣ ಬ್ಯುಸಿಯಾಗಿದ್ದಾರೆ.

ಬೈಕ್​ ಓಡಿಸಿ ಅಭಿಮಾನಿಯ ಆಸೆ ಈಡೇರಿಸಿದ ಸೆಂಚುರಿ ಸ್ಟಾರ್ ಶಿವಣ್ಣ

ಈ ಮಧ್ಯೆಯೂ ಅವರು, ಅಭಿಮಾನಿಯ ಬೈಕ್​ ಓಡಿಸಿ ಸುದ್ದಿಯಾಗಿದ್ದಾರೆ. ಹಿತೇಶ್​, ಶಿವರಾಜ್​ಕುಮಾರ್​ ಅವರ ಅಪ್ಪಟ ಅಭಿಮಾನಿ. ಬೆಂಗಳೂರಿನ ಕಾಲೇಜೊಂದರಲ್ಲಿ ಓದುತ್ತಿರುವ ಹಿತೇಶ್​, ಇತ್ತೀಚೆಗೆ ಬೈಕ್​ವೊಂದನ್ನು ಖರೀಸಿದ್ದಾರೆ. ಹೊಸ ಬೈಕ್ ​ಅನ್ನು ನೆಚ್ಚಿನ ಹೀರೋ ಶಿವಣ್ಣ ಓಡಿಸಬೇಕೆಂಬುದು ಹಿತೇಶ್ ಆಸೆಯಾಗಿತ್ತು.

ಬೈಕ್​ ಅನ್ನು ನಾಗಾವಾರದ ಶಿವಣ್ಣ ನಿವಾಸಕ್ಕೆ ತಂದ ಹಿತೇಶ್, ನೆಚ್ಚಿನ ನಟನೊಂದಿಗೆ ಜಾಲಿರೈಡ್ ಹೋಗಿದ್ದಾನೆ. ಅಭಿಮಾನಿಯ ಆಸೆ ಈಡೇರಿಸಿದ ಶಿವಣ್ಣನ ಸರಳತೆಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ'ಅಭಿನಯ ಚಕ್ರವರ್ತಿ'... 50ನೇ ವಸಂತಕ್ಕೆ ಕಾಲಿಟ್ಟ ನಟ 'ಕಿಚ್ಚ' ಸುದೀಪ್​​

ಶಿವಣ್ಣನ 125 ನೇ ಸಿನಿಮಾ ವೇದಾ ಚಿತ್ರದ ಸಾಂಗ್​ ರೆಕಾರ್ಡಿಂಗ್ ನಡೆಯುತ್ತಿದೆ. ಶಿವರಾಜ್​ಕುಮಾರ್ ಬ್ಯಾನರ್​ನಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಹರ್ಷ ಆ್ಯಕ್ಷನ್​ ಕಟ್ ಹೇಳಿದ್ದಾರೆ.

ABOUT THE AUTHOR

...view details