ಕರ್ನಾಟಕ

karnataka

ETV Bharat / sitara

2020ಕ್ಕೆ ಸೆಟ್ಟೇರಲಿದೆಯಂತೆ ಶಿವಣ್ಣನ "ಭೈರತಿ ರಣಗಲ್ಲು" ಸಿನಿಮಾ - ಭೈರತಿ ರಣಗಕಲ್ಲು ಸಿನಿಮಾದಲ್ಲಿ ಶಿವಣ್ಣ

ನಿರ್ದೇಶಕ ನರ್ತನ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ "ಭೈರತಿ ರಣಗಲ್ಲು" ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದ್ದಾರೆ. ಅಲ್ಲದೇ ಶಿವಣ್ಣ ಕೂಡ "ಭೈರತಿರಣಗಲ್ಲು" ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆದ್ರೆ ಒಂದು ವರ್ಷದಿಂದ ನಿರ್ದೇಶಕ ನರ್ತನ್ ಆಗಲಿ ಶಿವಣ್ಣ ಆಗಲಿ ಈ ಚಿತ್ರದ ಯಾವುದೇ ಮಾಹಿತಿ ನೀಡಿರಲಿಲ್ಲ.

2020ಕ್ಕೆ ಸೆಟ್ಟೇರಲಿದೆಯಂತೆ ಶಿವಣ್ಣನ "ಭೈರತಿ ರಣಗಲ್ಲು" ಸಿನಿಮಾ

By

Published : Sep 25, 2019, 8:41 PM IST

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಶ್ರೀಮುರಳಿ ಅಭಿನಯದ ಮಫ್ತಿ ಚಿತ್ರ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವಲ್ಲಿ ಯಶಸ್ವಿಯಾಗಿತ್ತು. ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಭೈರತಿ ರಣಗಲ್ಲು ಪಾತ್ರದಲ್ಲಿ ಮಿಂಚಿದ್ದರು. ಇನ್ನು ಚಿತ್ರದಲ್ಲಿ ಶಿವಣ್ಣನ ಈ ಪಾತ್ರಕ್ಕೆ ಸಖತ್​​ ರೆಸ್ಪಾನ್ಸ್ ಸಿಕ್ಕಿತ್ತು .

ಈ ರೆಸ್ಪಾನ್ಸ್ ಅನ್ನು ಸ್ಪೂರ್ತಿಯಾಗಿ ತೆಗೆದುಕೊಂಡ ನಿರ್ದೇಶಕ ನರ್ತನ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ "ಭೈರತಿ ರಣಗಲ್ಲು" ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದ್ದಾರೆ. ಅಲ್ಲದೇ ಶಿವಣ್ಣ ಕೂಡ "ಭೈರತಿರಣಗಲ್ಲು" ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆದ್ರೆ ಒಂದು ವರ್ಷದಿಂದ್ದ ನಿರ್ದೇಶಕ ನರ್ತನ್ ಆಗಲಿ ಶಿವಣ್ಣ ಆಗಲಿ ಈ ಚಿತ್ರದ ಯಾವುದೇ ಮಾಹಿತಿ ನೀಡಿರಲಿಲ್ಲ.

2020ಕ್ಕೆ ಸೆಟ್ಟೇರಲಿದೆಯಂತೆ ಶಿವಣ್ಣನ "ಭೈರತಿ ರಣಗಲ್ಲು" ಸಿನಿಮಾ

ಈಗ ಭೈರತಿ ರಣಗಲ್ಲು ಚಿತ್ರದ ಬಗ್ಗೆ ನಿರ್ದೇಶಕ ನರ್ತನ್ ಶಿವಣ್ಣ ಫ್ಯಾನ್ಸ್ ಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ‌‌. ಸೆಂಚುರಿ ಸ್ಟಾರ್ ಶಿವಣ್ಣರ 125ನೇ ಚಿತ್ರವಾಗಿ" ಭೈರತಿ ರಣಗಲ್ಲು" ಮುಂದಿನ ವರ್ಷ ಸೆಟ್ಟೇರಲಿದೆ ಎಂದು‌ ಹೇಳಿದ್ದಾರೆ. ಸದ್ಯ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದ್ದು, 2020ಕ್ಕೆ ಚಿತ್ರದ ಶೂಟಿಂಗ್ ಸ್ಟಾರ್ಟ್ಆಗಲಿದೆ.

ಅಲ್ಲದೇ ಈ ಚಿತ್ರದಲ್ಲಿ ಶ್ರೀ ಮುರುಳಿ ಆಕ್ಟ್ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಅದು ಅಧಿಕೃತವಾಗಲಿದೆ ಎಂದು ನಿರ್ದೇಶಕ ನರ್ತನ್ ಹೇಳಿದರು.

ABOUT THE AUTHOR

...view details