ಫೇಮಸ್ ಡೈರೆಕ್ಟರ್ ಎಸ್.ಎಸ್.ರಾಜಮೌಳಿ ನಿರ್ದೇಶಿಸುತ್ತಿರುವ ಆರ್ಆರ್ಆರ್ ಚಿತ್ರದಲ್ಲಿ ಬಹುತಾರಾಗಣವಿದ್ದು, ಮಲ್ಟಿಸ್ಟಾರ್ಗಳು ಅಭಿನಯಿಸುತ್ತಿದ್ದಾರೆ. ರಾಮ್ಚರಣ್ ಹಾಗೂ ಯಂಗ್ ಟೈಗರ್ ಜ್ಯೂನಿಯರ್ ಎನ್ಟಿಆರ್ ನಟಿಸುತ್ತಿರುವುದರಿಂದ ಚಿತ್ರ ಭಾರಿ ನಿರೀಕ್ಷೆ ಹುಟ್ಟಿಹಾಕಿದೆ.
'ಆರ್ಆರ್ಆರ್' ಶೂಟಿಂಗ್ಗೆ ಬ್ರೇಕ್... ಯಾಕೆ ಗೊತ್ತಾ? - ರಾಮಚರಣ್
ಜ್ಯೂ. ಎನ್ಟಿಆರ್, ರಾಮ್ಚರಣ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ಬಹು ನಿರೀಕ್ಷಿತ 'ಆರ್ಆರ್ಆರ್' ಸಿನಿಮಾ ಶೂಟಿಂಗ್ಗೆ ತಾತ್ಕಾಲಿಕ ವಿರಾಮ ನೀಡಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗಿತ್ತು. ಆದರೆ, ಸದ್ಯಕ್ಕೆ ಶೂಟಿಂಗ್ಗೆ ವಿರಾಮ ಘೋಷಣೆ ಮಾಡಲಾಗಿದೆ. ರಾಜಮೌಳಿ ಅವರು ವೈಯಕ್ತಿಕ ಕೆಲಸದ ಮೇಲೆ ಅಮೆರಿಕಕ್ಕೆ ತೆರಳಿರುವ ಹಿನ್ನೆಲೆಯಲ್ಲಿ ಚಿತ್ರೀಕರಣಕ್ಕೆ ವಿರಾಮ ನೀಡಲಾಗಿದೆ ಎಂದು ಚಿತ್ರದ ನಿರ್ಮಾಪಕರು ಹೇಳಿದ್ದಾರೆ.
ಇನ್ನು ರಾಮ್ಚರಣ್ ತಾರಕ ಸಿನಿಮಾ ಶೂಟಿಂಗ್ ವೇಳೆ ಗಾಯಗೊಂಡಿದ್ದರು. ಇದೀಗ ಚೇತರಿಸಿಕೊಂಡಿರುವ ಅವರು ಹಾಗೂ ಜ್ಯೂನಿಯರ್ ಎನ್ಟಿಆರ್ ಯುದ್ಧ ಸನ್ನಿವೇಶದಲ್ಲಿ ಪಾಲ್ಗೊಂಡಿದ್ದರು. ಈ ಚಿತ್ರದಲ್ಲಿ ಬಾಲಿವುಡ್ನ ಫೇಮಸ್ ಹೀರೋಯಿನ್ ಆಲಿಯಾ ಭಟ್ ಹಾಗೂ ಅಜಯ್ ದೇವಗನ್ ಸಹ ಇದ್ದು, ಅವರು ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದರು. ಡಿವಿವಿ ದಾನಯ್ಯ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಎಂ.ಎಂ.ಕಿರ್ವಾನಿ ಸಂಗೀತ ಇದ್ದು, 2020 ಜುಲೈ 30ರಿಂದ ಸಿನಿಮಾ ತೆರೆಗೆ ಬರಲಿದೆ.