ಕರ್ನಾಟಕ

karnataka

ETV Bharat / sitara

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಬಿಂಬ.. ಆ 90 ನಿಮಿಷಗಳು..

ಇತ್ತೀಚಿಗಷ್ಟೆ 66ನೇ ರಾಷ್ಟ್ರಪ್ರಶಸ್ತಿ ಘೋಷಣೆಯಾಗಿದ್ದು ಕನ್ನಡ ಚಿತ್ರರಂಗದ ಎರಡು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದ ಬಿಂಬ.. ಆ 90 ನಿಮೀಷ ಚಿತ್ರ ತಂಡಕ್ಕೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಬಿಂಬ

By

Published : Sep 1, 2019, 10:01 PM IST

ಸ್ಯಾಂಡಲ್​ವುಡ್​ನಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಯೋಗಾತ್ಮಕ ಚಿತ್ರಗಳು ಮೂಡಿ ಬರುತ್ತಿದ್ದು ಸಾಕಷ್ಟು ಜನಮನ್ನಣೆ ಪಡೆದುಕೊಳ್ಳುತ್ತಿವೆ. ಹಿರಿಯ ನಿರ್ದೇಶಕ ಜಿ. ಮೂರ್ತಿ ಹಾಗೂ ಹಿರಿಯ ನಟ ಶ್ರೀನಿವಾಸ್ ಪ್ರಭು ಕಾಂಬಿನೇಷನ್​ನಲ್ಲಿ ಬಂದ ಸಂಸ ಅವರ ಜೀವನ ಆಧಾರಿತ ಚಿತ್ರ ಬಿಂಬ.. ಆ 90 ನಿಮಿಷಗಳು ಚಿತ್ರಕ್ಕೆ ಈ ಹಿಂದೆ ಯೂನಿವರ್ಸಲ್ ರೆಕಾರ್ಡ್ ಫಾರ್ಮ್ ಸಿಕ್ಕಿತ್ತು.

ಸದ್ಯ ಚಿತ್ರ ತಂಡಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಬಂದಿದೆ. ನಗರದ ರೇಣುಕಾಂಬ ಸ್ಟುಡಿಯೋದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಚಿತ್ರ ತಂಡಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನ ಸರ್ಟಿಫಿಕೇಟ್ ನೀಡಿ ಗೌರವಿಸಲಾಯಿತು.

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಬಿಂಬ

ಏಕ ಪಾತ್ರಧಾರಿಯ ಒಂದೇ ಶಾಟ್‌ನಲ್ಲಿ ಚಿತ್ರೀಕರಿಸಿರುವ ಪ್ರಪ್ರಥಮ ಚಿತ್ರ ಎಂಬ ವಿಶಿಷ್ಟ ದಾಖಲೆಗೆ ಪಾತ್ರವಾಗಿದೆ. ಚಿತ್ರಕ್ಕೆ ಹೆಸರಾಂತ ಛಾಯಾಗ್ರಾಹಕರಾದ ಪಿ ಕೆ ಹೆಚ್ ದಾಸ್ ಕ್ಯಾಮೆರಾ ವರ್ಕ್ ಇದೆ. ಸುಮಾರು ಎರಡು ಗಂಟೆಗಳ ಕಾಲ ಹೆಗಲ ಮೇಲೆ ಕ್ಯಾಮೆರಾ ಇಟ್ಟುಕೊಂಡು ಇಡೀ ಚಿತ್ರವನ್ನು ಚಿತ್ರೀಕರಿಸಿರುವುದು ಮತ್ತೊಂದು ವಿಶೇಷ. ಹಿರಿಯ ನಟ ಶ್ರೀನಿವಾಸ್ ಬಾಬು ಸುಮಾರು ಇಪ್ಪತ್ತು ಪುಟಗಳ ಡೈಲಾಗನ್ನು ರೀಟೆಕ್ ಇಲ್ಲದೆ ಕ್ಯಾಮೆರಾ ಮುಂದೆ ಹೇಳುತ್ತಾ ಅಭಿನಯಿಸಿದ್ದಾರೆ. ಚಿತ್ರಕ್ಕೆ ಪ್ರವೀಣ್ ಗೋಡ್ಕಿಂಡಿ ಸಂಗೀತ ನೀಡಿದ್ದಾರೆ.

ABOUT THE AUTHOR

...view details