ಕರ್ನಾಟಕ

karnataka

ಇದು ಬಿಗ್‌ಬಿ ಬಿಗ್‌ ಹಾರ್ಟ್‌ ! 49 ಯೋಧರ ಕುಟುಂಬಕ್ಕೆ ತಲಾ 5 ಲಕ್ಷ ರೂ. ನೆರವು

1989ರ ಬಳಿಕ ಪುಲ್ವಾಮಾ ಆತ್ಮಹತ್ಯೆ ದಾಳಿ ದೇಶಕ್ಕೆ ಅತೀ ದೊಡ್ಡ ನಷ್ಟವನ್ನುಂಟು ಮಾಡಿದೆ. 49 ಯೋಧರ ಜೈಷ್‌-ಏ ಮೊಹ್ಮದ್‌ ಉಗ್ರ ಸಂಘಟನೆಯ ಆತ್ಮಹತ್ಯೆ ದಾಳಿಯಲ್ಲಿ ಹುತಾತ್ಮರಾಗಿರೋದಕ್ಕೆ ಅಮಿತಾಬ್‌ ಬಚ್ಚನ್‌ ಕಂಬನಿ ಮಿಡಿದಿದ್ದಾರೆೆ.

By

Published : Feb 16, 2019, 7:03 PM IST

Published : Feb 16, 2019, 7:03 PM IST

ಮುಂಬೈ : ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ 49 ಕುಟುಂಬಗಳಿಗೂ ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ ನೆರವು ನೀಡಲು ಮುಂದಾಗಿದ್ದಾರೆ. ವೀರ ಸೇನಾನಿಗಳ ಕುಟುಂಬಕ್ಕೆ ತಲಾ 5 ಲಕ್ಷ ನೆರವು ನೀಡಲು ಬಿಗ್‌ಬಿ ನಿರ್ಧರಿಸಿದ್ದಾರೆ.

1989ರ ಬಳಿಕ ಪುಲ್ವಾಮಾ ಆತ್ಮಹತ್ಯೆ ದಾಳಿ ದೇಶಕ್ಕೆ ಅತೀ ದೊಡ್ಡ ನಷ್ಟವನ್ನುಂಟು ಮಾಡಿದೆ. 49 ಯೋಧರ ಜೈಷ್‌-ಏ ಮೊಹ್ಮದ್‌ ಉಗ್ರ ಸಂಘಟನೆಯ ಆತ್ಮಹತ್ಯೆ ದಾಳಿಯಲ್ಲಿ ಹುತಾತ್ಮರಾಗಿರೋದಕ್ಕೆ ಅಮಿತಾಬ್‌ ಬಚ್ಚನ್‌ ಕಂಬನಿ ಮಿಡಿದಿದ್ದಾರೆೆ. ಇಡೀ ದೇಶವೇ ಯೋಧರ ಸಾವಿನಿಂದಾಗಿ ಕಣ್ಣೀರಿಡುತ್ತಿದೆ. ಹಾಗಾಗಿ ತಮ್ಮ ಎಲ್ಲ ಕಾರ್ಯಕ್ರಮಗಳನ್ನೂ ಅಣಿತಾಬ್‌ ಬಚ್ಚನ್‌ ನಿನ್ನೆಯಿಂದಲೇ ರದ್ದುಗೊಳಿಸಿದ್ದಾರೆ. ನಿನ್ನೆ ವಿರಾಟ್‌ ಕೊಹ್ಲಿ ಫೌಂಡೇಷನ್‌ ನಡೆಸುವ ಕಾರ್ಯಕ್ರಮದಲ್ಲಿ ಅಮಿತಾಬ್‌ ಬಚ್ಚನ್‌ ವಿಶೇಷ ಅತಿಥಿಯಾಗಿದ್ದರು. ಆದ್ರೇ, ನಿನ್ನೆಯ ಕಾರ್ಯಕ್ರಮಕ್ಕೆ ಬಿಗ್‌ಬಿ ತೆರಳದೇ ಯೋಧರ ಕುಟುಂಬಗಳ ದುಃಖದಲ್ಲಿ ತಾವೂ ಭಾಗಿಯಾಗಿದ್ದಾರೆ.

ಅಷ್ಟೇ ಅಲ್ಲ, ಸರ್ಕಾರ ಸೇರಿದಂತೆ ಸಾಕಷ್ಟು ಸಂಘಸಂಸ್ಥೆಗಳು ಹುತಾತ್ಮರ ಕುಟುಂಬಗಳಿಗೆ ಆರ್ಥಿಕ ನೆರವು ನೀಡ್ತಿವೆ. ಈ ಬಗ್ಗೆ ಸರ್ಕಾರ ಸರಿಯಾದ ವ್ಯವಸ್ಥೆಯನ್ನ ಮಾಡಿದ್ರೇ ತಾವೂ ಕೂಡ ಎಲ್ಲ 49 ವೀರ ಯೋಧರ ಕುಟುಂಬಗಳಿಗೂ ತಲಾ 5 ಲಕ್ಷ ರೂ. ಸಹಾಯ ನೀಡೋದಾಗಿ ಬಿಗ್‌ ಹೇಳ್ಕೊಂಡಿದ್ದಾರೆ.

ಸ್ವತಃ ಬಿಗ್‌ಬಿ ಪಿಆರ್‌ಒ ಇದನ್ನ ಖಚಿತಪಡಿಸಿದ್ದಾರೆ. ಹೌದು ಇದು ನಿಜ. ಬಿಗ್‌ಬಿ ಹುತಾತ್ಮರಾದ ಪ್ರತಿಯೊಬ್ಬರ ಕುಟುಂಬಕ್ಕೆ 5 ಲಕ್ಷ ನೀಡೋದಾಗಿ ಹೇಳಿದ್ದಾರೆ. ಆದ್ರೇ, ಇದನ್ನ ಹೇಗೆ ನೊಂದ ಯೋಧರ ಕುಟುಂಬಗಳಿಗೆ ತಲುಪಿಸಬೇಕು ಅನ್ನೋದರ ಬಗ್ಗೆ ಯೋಚಿಸುತ್ತಿದ್ದಾರೆ. ಸರ್ಕಾರ ಇದಕ್ಕಾಗಿ ಒಂದು ವ್ಯವಸ್ಥೆ ಮಾಡಿದ್ರೇ ಹಣ ನೀಡೋದಾಗಿ ಹೇಳಿದ್ದಾರೆ.

ABOUT THE AUTHOR

...view details