ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಆರಂಭವಾಗಿದ್ದು, ಫಿನಾಲೆ ತಲುಪಿದ್ದ ಐವರಲ್ಲಿ ಭೂಮಿ ಶೆಟ್ಟಿ ಮೊದಲಿಗೆ ಎಲಿಮಿನೇಟ್ ಆಗಿದ್ದಾರೆ. ವಾಸುಕಿ ವೈಭವ್, ಪ್ರತಾಪ್, ಶೈನ್ ಶೆಟ್ಟಿ ಹಾಗೂ ದೀಪಿಕಾ ದಾಸ್ ಮಾತ್ರ ಮನೆಯಲ್ಲಿ ಉಳಿದುಕೊಂಡಿರುವ ಸ್ಪರ್ಧಿಗಳಾಗಿದ್ದಾರೆ.
ಇಂದು ಮತ್ತು ನಾಳೆ ಫಿನಾಲೆ ನಡೆಯಲಿದ್ದು, ಎಲಿಮಿನೇಷನ್ ರೌಂಡ್ನಲ್ಲಿ ಭೂಮಿ ಶೆಟ್ಟಿ ಹೊರಬಂದಿದ್ದಾರೆ. ಅಲ್ಲದೆ ಮತ್ತೋರ್ವ ಸ್ಪರ್ಧಿಯೂ ಕೂಡ ಹೊರ ಬರುವ ನಿರೀಕ್ಷೆ ಇದೆ. ಕೊನೆಯ ದಿನವಾದ ಇಂದು ಕೇವಲ ಮೂರು ಸ್ಪರ್ಧಿಗಳು ಮಾತ್ರ ಮನೆಯಲ್ಲಿ ಉಳಿದುಕೊಳ್ಳಲಿದ್ದಾರೆ.