ಕರ್ನಾಟಕ

karnataka

ETV Bharat / sitara

ಎಸ್​ಪಿಬಿ ನೋಡಿದ್ರೆ ನಮ್ಮ ಯಜಮಾನರು ನೆನಪಾಗುತ್ತಾರೆ: ಭಾರತಿ ವಿಷ್ಣುವರ್ಧನ್!

ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವ್ರನ್ನ ನೋಡಿದಾಗ ವಿಷ್ಣುವರ್ಧನ್ ನೆನಪಾಗುತ್ತಾರಂತೆ. ಇನ್ನು ವಿಷ್ಣುವರ್ಧನ್ ಹಾಗೂ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಬಾಂಧವ್ಯ ಹೇಗಿತ್ತು ಅಂದ್ರೆ, ಎರಡು ಶರೀರ ಆದ್ರೂ ಒಂದೇ ಶಾರೀರ ಅಂತಾ ಭಾರತಿ ವಿಷ್ಣುವರ್ಧನ್ ಹೇಳಿಕೊಂಡಿದ್ದಾರೆ.

Bharathi Vishnuvardhan
ಭಾರತಿ ವಿಷ್ಣುವರ್ಧನ್

By

Published : Aug 22, 2020, 4:03 PM IST

Updated : Aug 22, 2020, 9:57 PM IST

ಭಾರತೀಯ ಚಿತ್ರರಂಗ ಕಂಡ ಮಹಾನ್ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ. ಕೊರೊನಾ ಎಂಬ ಹೆಮ್ಮಾರಿ ಸೋಂಕಿಗೆ ಒಳಗಾಗಿರುವ ಅವರು ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸದ್ಯ ಕೃತಕ ಉಸಿರಾಟದಿಂದ ಉಸಿರಾಡುತ್ತಿರುವ ಸ್ವರ ಮಾಂತ್ರಿಕನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಎಸ್​ಪಿಬಿ ಗುಣಮಖರಾಗಿ ಬರಲಿ ಅಂತಾ ಕೋಟ್ಯಂತರ ಅಭಿಮಾನಿಗಳು, ತಾರೆಯರು ಪ್ರಾರ್ಥಿಸಿದ್ದಾರೆ. ಅವರು ಆರೋಗ್ಯವಾಗಿ ಬರುವುದನ್ನ ಎದುರು ನೋಡುತ್ತಿದ್ದಾರೆ. ಇದೀಗ ಕನ್ನಡ ಚಿತ್ರರಂಗದ ಸಾಹಸ ಸಿಂಹ ವಿಷ್ಣುವರ್ಧನ್ , ಸಿನಿಮಾಗಳಲ್ಲಿ ಅತೀ ಹೆಚ್ಚು ಹಾಡುಗಳನ್ನ ಹಾಡಿರುವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಬಗ್ಗೆ, ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್ ಬೇಗ ಗುಣಮುಖರಾಗಲಿ ಅಂತಾ ಹಾರೈಸಿದ್ದಾರೆ.

ಎಸ್​.ಪಿ. ಬಾಲಸುಬ್ರಹ್ಮಣ್ಯಂ ಬಗ್ಗೆ ಮಾತನಾಡಿದ ಭಾರತಿ ವಿಷ್ಣುವರ್ಧನ್

ಅಷ್ಟೇ ಅಲ್ಲ ಭಾರತಿಯವರಿಗೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವ್ರನ್ನ ನೋಡಿದಾಗ ವಿಷ್ಣುವರ್ಧನ್ ನೆನಪಾಗುತ್ತಾರಂತೆ. ಇನ್ನು ವಿಷ್ಣುವರ್ಧನ್ ಹಾಗೂ ಎಸ್​ಪಿಬಿ ಬಾಲಸುಬ್ರಹ್ಮಣ್ಯಂ ಬಾಂಧವ್ಯ ಹೇಗಿತ್ತು ಅಂದ್ರೆ, ಎರಡು ಶರೀರ ಆದ್ರೂ ಒಂದೇ ಶಾರೀರ ಅಂತಾ ಭಾರತಿ ವಿಷ್ಣುವರ್ಧನ್ , ಎಸ್.ಪಿ. ಬಾಲಸುಬ್ರಹ್ಮಣ್ಯಂ ಜೊತೆಗಿನ ಒಡನಾಟದ ಬಗ್ಗೆ ಹಂಚಿಕೊಳ್ಳುವ ಮೂಲಕ ಬೇಗ ಗುಣಮುಖರಾಗಿ ಬನ್ನಿ ನಾವೆಲ್ಲ ನಿಮಗೆ ಕಾಯುತ್ತಿದ್ದೇವೆ ಅಂತಾ ಭಾರತಿ ವಿಷ್ಣುವರ್ಧನ್ ಹಾರೈಸಿದ್ದಾರೆ.

Last Updated : Aug 22, 2020, 9:57 PM IST

For All Latest Updates

ABOUT THE AUTHOR

...view details