ಕರ್ನಾಟಕ

karnataka

ETV Bharat / sitara

ಭಲೇ ಭಲೇ ಬಲಿರಾ ಭಲೇ ಸಾಂಗ್ ಬೊಂಬಾಟ್‌.. 'ರುಸ್ತುಂ'ನಲ್ಲಿ ಲಾಠಿಯಿಲ್ಲದೇ ಶಿವಣ್ಣನ ಖದರ್‌ ಡ್ಯೂಟಿ! - Shivarajkumar

ಸ್ಯಾಂಡಲ್​ವುಡ್​ನಲ್ಲಿ ಇತ್ತೀಚೆಗೆ ಭಾರಿ ಸದ್ದು ಮಾಡಿದ್ದ ಟಗರು ಚಿತ್ರದಲ್ಲಿ ಖಾಕಿ ತೊಟ್ಟು ರೌಡಿಗಳ ಪೊಗರಿಳಿಸಿದ್ದ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಇದೀಗ ರುಸ್ತುಂ ಸಿನಿಮಾದಲ್ಲಿ ಮತ್ತೆ ಖಾಕಿ ಖದರ್​ನಲ್ಲೇ ಕಾಣಿಸಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್

By

Published : May 29, 2019, 12:15 PM IST

ಟೈಟಲ್​​ ಹಾಗೂ ಟ್ರೈಲರ್​ನಿಂದ ರುಸ್ತುಂ ಸಿನಿಮಾ ಭಾರಿ ಹೈಪ್​ ಕ್ರಿಯೇಟ್​ ಮಾಡುತ್ತಿದೆ. ಚಿತ್ರದ ಮೊದಲನೆ ಹಾಡು ಗಮನ ಸೆಳೆದಂತೆ ಇದೀಗ 2ನೇ ಹಾಡು ಸಹ ರಿವೀಲ್ ಆಗಿದೆ. ಭಲೇ ಭಲೇ ಬಲಿರಾ ಭಲೇ ಎಂಬ ಹಾಡಿನಲ್ಲಿ ಶಿವಣ್ಣ ಪೊಲೀಸ್​ ಖದರ್​ನಲ್ಲಿ ಅಬ್ಬರಿಸಿದ್ದಾರೆ.

ವಿ. ನಾಗೇಂದ್ರ ಪ್ರಸಾದ್ ​ಗೀತೆ ರಚನೆ ಮಾಡಿದ್ದು ಅನೂಪ್​​ ಸೀಳಿನ್​ ​ಈ ಹಾಡಿಗೆ ಟ್ಯೂನ್ಸ್​ ಕಂಪೋಸ್‌ ಮಾಡಿದ್ದಾರೆ. ವ್ಯಾಸರಾಜ್​​ ಸೊಸ್ಲೆ ಕಂಠ ನೀಡಿದ್ದಾರೆ. ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ರುಸ್ತುಂ ಚಿತ್ರಕ್ಕೆ ಜಯಣ್ಣ ಭೋಗೇಂದ್ರ ಆರ್ಥಿಕ ಇಂಧನ ಹೂಡಿದ್ದಾರೆ. ಸದ್ಯ ಭಲೇ ಭಲೇ ಹಾಡಿಗೆ ಶಿವರಾಜಕುಮಾರ್​ ಫ್ಯಾನ್ಸ್​ಗಳು ಫಿದಾ ಆಗಿದ್ದಾರೆ. ಯೂ ಆರ್​​ ಮೈ ಪೊಲೀಸ್​ ಬೇಬಿ ಎಂಬ ಲಿರಿಕಲ್ ಹಾಡನ್ನು ಯೂಟ್ಯೂಬ್​​ನಲ್ಲಿ ಒಂದು ಮಿಲಿಯನ್ ಜನ ನೋಡಿದ್ದಾರೆ.

ABOUT THE AUTHOR

...view details