ಇಂದು ಕೆಚ್ಚೆದೆಯ ವೀರ ಭಗತ್ ಸಿಂಗ್ ಅವರ ಹುಟ್ಟು ಹಬ್ಬ. ಈ ಹಿನ್ನೆಲೆಯಲ್ಲಿ 'ಕ್ರಾಂತಿ ವೀರ' ಸಿನಿಮಾದ ಶೀರ್ಷಿಕೆ ಅನಾವರಣ ಆಗಿದ್ದು, ಈ ಚಿತ್ರ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಕಥೆಯನ್ನು ಒಳಗೊಂಡಿದೆಯಂತೆ.
ಭಗತ್ ಸಿಂಗ್ ಪಾತ್ರದಲ್ಲಿ ಅಜಿತ್ ಜಯರಾಜ್ ಈಗಾಗಲೇ ಬೇರೆ ಭಾಷೆಯಲ್ಲಿ ಭಗತ್ ಸಿಂಗ್ ಬಗ್ಗೆ ಸಿನಿಮಾಗಳು ಬಂದಿವೆ. ಅಲೆ ಎಂಬ ಸಿನಿಮಾ ಮಾಡಿ, ಸ್ಯಾಂಡಲ್ ವುಡ್ನಲ್ಲಿ ಗಮನ ಸೆಳೆದಿದ್ದ ನಿರ್ದೇಶಕ ಆದತ್ ಕನ್ನಡ, ತೆಲುಗು ಹಾಗು ತಮಿಳಿನಲ್ಲಿ ಭಗತ್ ಸಿಂಗ್ ಬಗ್ಗೆ ಕಥೆ ಹೇಳೋದಿಕ್ಕೆ ಹೊರಟ್ಟಿದ್ದಾರೆ. ಭಗತ್ ಸಿಂಗ್ ಪಾತ್ರದಲ್ಲಿ ಅಜಿತ್ ಜಯರಾಜ್ ಕಾಣಿಸಿಕೊಳ್ಳುತ್ತಿದ್ದು, ಈ ಪಾತ್ರಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನ ಮಾಡಿಕೊಂಡಿದ್ದಾರೆ. 90 ಕೆಜಿ ದಪ್ಪ ಇದ್ದ ಅಜಿತ್ ಜಯರಾಜ್ ಈ ಭಗತ್ ಸಿಂಗ್ ಪಾತ್ರಕ್ಕಾಗಿ 20ಕೆಜಿ ತೂಕ ಇಳಿಸುವ ಮೂಲಕ ಪಾತ್ರಕ್ಕೆ ಜೀವ ತುಂಬಿದ್ದಾರಂತೆ. ಈ ಚಿತ್ರದಲ್ಲಿ ಅಜಿತ್ ಜಯರಾಜ್ ಎರಡು ಶೇಡ್ನಲ್ಲಿ ಕಾಣಿಸಿಕೊಂಡಿದ್ದು, ಸದ್ಯ ಭಗತ್ ಸಿಂಗ್ ಅವತಾರದಲ್ಲಿ ಇರುವ ಕ್ರಾಂತಿ ವೀರ ಸಿನಿಮಾದ ಪೋಸ್ಟರ್ನನ್ನ ಚಿತ್ರತಂಡ ರಿವೀಲ್ ಮಾಡಿದೆ.
ಭಗತ್ ಸಿಂಗ್ ಜೀವನಾಧಾರಿತ ಸಿನಿಮಾ ಅಜಿತ್ ಅಲ್ಲದೇ ಪ್ರಮೋದ್ ಶೆಟ್ಟಿ, ಡಾ ನಾಗೇಂದ್ರ ಪ್ರಸಾದ್ , ಭವಾನಿ ಪ್ರಕಾಶ್, ಜಾನವಿ ಜ್ಯೋತಿ, ಧರ್ಮ, ಜ್ಯೋ ಸೈಮನ್, ನಿರಂಜನ್ ಹೀಗೆ ಸಾಕಷ್ಟು ತಾರ ಬಳಗ ಈ ಚಿತ್ರದಲ್ಲಿದೆ. ಆಲ್ ಮೋಸ್ಟ್ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ನಲ್ಲಿರುವ ಕ್ರಾಂತಿ ವೀರ ಸಿನಿಮಾ, ಈ ವರ್ಷದ ಕೊನೆಯ ತಿಂಗಳಿನಲ್ಲಿ ರಿಲೀಸ್ ಆಗೋದಿಕ್ಕೆ ರೆಡಿಯಾಗುತ್ತಿದೆ. ಈ ಚಿತ್ರದಲ್ಲಿ ಒಂಬತ್ತು ಹಾಡುಗಳಿದ್ದು, ನಿರ್ದೇಶಕ ಆದಾತ್ ಸೇರಿ, ಗೌಸ್ ಪೀರ್, ಯೋಗಿ ಈ ಸಿನಿಮಾ ಸಾಹಿತ್ಯ ಬರೆದಿದ್ದು, ಪ್ರತಾಪ್ ಸಂಗೀತ ನೀಡಿದ್ದಾರೆ. ಕೆ.ಎಂ ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ.
ಭಗತ್ ಸಿಂಗ್ ಜೀವನಾಧಾರಿತ ಸಿನಿಮಾ ಚಂದ್ರಕಲಾ ರೋಥೋಡ್, ಪ್ರಶಾಂತ್ ಕಲ್ಲೂರು, ತ್ರಿವಿಕ್ರಮ್ ಸಪ್ಲೈಯಾ ಈ ಮೂರು ಜನ ನಿರ್ಮಾಪಕರು ಸೇರಿ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಆದತ್ ಹೇಳುವ ಪ್ರಕಾರ ಈ ಸಿನಿಮಾ , ಕನ್ನಡ, ತೆಲುಗು ಹಾಗು ತಮಿಳು ಭಾಷೆಯಲ್ಲಿ ಮೂಡಿ ಬರಲಿದೆಯಂತೆ. ಮೊದಲು ನವೆಂಬರ್ನಲ್ಲಿ ಹಲವು ಫಿಲ್ಮ್ ಫೆಸ್ಟಿವಲ್ಗೆ ಕಳುಹಿಸೋಕ್ಕೆ ಪ್ಲಾನ್ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಕ್ರಾಂತಿ ವೀರ ಸಿನಿಮಾ ಪೋಸ್ಟರ್ ಗಮನ ಸೆಳೆಯುತ್ತಿದ್ದು ಗೆಲ್ಲುವ ಸೂಚನೆ ಕಾಣುತ್ತಿದೆ.
ಭಗತ್ ಸಿಂಗ್ ಜೀವನಾಧಾರಿತ ಸಿನಿಮಾ