ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್ ರೇಟೆಡ್ ಧಾರಾವಾಹಿ ಎಂದೇ ಕರೆಸಿಕೊಳ್ಳುತ್ತಿರುವ 'ಜೊತೆ ಜೊತೆಯಲಿ' ವೀಕ್ಷಕರಲ್ಲಿ ಮೋಡಿ ಮಾಡಿದೆ. ಅದರಲ್ಲೂ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಅಲಿಯಾಸ್ ಆರ್ಯವರ್ಧನ್ ಪಾತ್ರಕ್ಕೆ ಯುವತಿಯರು ಹಾಗೂ ಮಹಿಳೆಯರು ಫಿದಾ ಆಗಿದ್ದಾರೆ.
ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದ ವೇದಿಕೆಯಲ್ಲಿ ಜೊತೆ ಜೊತೆಯಲಿ ಧಾರಾವಾಹಿ ತಂಡ ಯಶಸ್ಸಿನ ಬಗ್ಗೆ ಮಾತನಾಡುತ್ತಿತ್ತು. ಈ ವೇಳೆ ಆರ್ಯವರ್ಧನ್ ಪಾತ್ರದ ವಿಶೇಷ ಅಭಿಮಾನಿಯೊಬ್ಬರು ವೇದಿಕೆ ಮೇಲೆ ಬಂದು ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು. ಅದು ಅವರ ಮಾತುಗಳಿಂದಲ್ಲ, ಆ್ಯಕ್ಷನ್ ಮೂಲಕ.
ಈ ವಿಶೇಷ ಅಭಿಮಾನಿಗೆ ಕಿವಿ ಕೇಳಿಸುವುದಿಲ್ಲ, ಮಾತೂ ಬರುವುದಿಲ್ಲ. ಆದ್ರೂ ತಮ್ಮ ಮನೋಜ್ಞ ಅಭಿನಯದ ಮೂಲಕವೇ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ರು. ಆರ್ಯವರ್ಧನ್ ನಟನೆ ಬಗ್ಗೆ ವಿವರಿಸಿದ ಅವರ ಆ ಮೂಕಾಭಿನಯ ನೆರೆದಿದ್ದ ಮಂದಿಯ ಹೃದಯ ತಟ್ಟಿತು.
ಈ ಬಗ್ಗೆ ಮಾತನಾಡಿದ ಆರ್ಯವರ್ಧನ್, ಈ ಅಭಿಮಾನಕ್ಕೆ ಕೃತಜ್ಞತೆ ಹೇಳಲು ನನ್ನ ಬಳಿ ಪದಗಳಿಲ್ಲ ಎಂದು ಹೇಳಿದ್ರು. ವೇದಿಕೆಯಲ್ಲೇ ದಿವ್ಯಾಂಗ ಅಭಿಮಾನಿಯನ್ನು ತಬ್ಬಿಕೊಂಡು ಖುಷಿಪಟ್ಟರು.
ಬಳಿಕ ಅನು ಸಿರಿಮನೆಯವರನ್ನು ತೋರಿಸಿ ಇವರ ಬಗ್ಗೆ ಹೇಳಿ ಎಂದಾಗ, ಯಾವಾಗಲೂ ಅಳ್ತಾ ಇರ್ತಾರೆ. ಅವರು ಹಚ್ಚುವ ಕಾಡಿಗೆ, ಬಿಂದಿ, ಹೇರ್ ಸ್ಟೈಲ್, ಚೂಡಿದಾರ್ ಸ್ಟೈಲ್ ಎಲ್ಲವೂ ಸೂಪರ್ ಎಂದು ಆ್ಯಕ್ಷನ್ ಮೂಲಕವೇ ವಿವರಿಸಿದ್ರು.