ಕರ್ನಾಟಕ

karnataka

By

Published : Sep 12, 2020, 3:17 PM IST

ETV Bharat / sitara

'ಆದಿಪುರುಶ್'ನಾಗುವ ಪ್ರಭಾಸ್ ಜತೆ ತೆರೆ ಹಂಚಿಕೊಳ್ತಾರಾ ಅನುಷ್ಕಾ ಶರ್ಮಾ!?

ರಾಮಾಯಣದ ಮಹಾಕಾವ್ಯದ ರೂಪಾಂತರದಲ್ಲಿ, ಪ್ರಭಾಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿದ್ರೆ, ಸೈಫ್ ಅಲಿ ಖಾನ್ ಎದುರಾಳಿಯ ಪಾತ್ರ ನಿರ್ವಹಿಸಲಿದ್ದಾರೆ. ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ಚಿತ್ರೀಕರಣ ನಡೆಯಲಿದೆ. 3ಡಿ ಚಲನಚಿತ್ರವನ್ನು ನಂತರ ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಇತರ ಭಾಷೆಗಳಲ್ಲಿ ಡಬ್ ಮಾಡಲಾಗುತ್ತದೆ.. ಅನುಷ್ಕಾ ಮತ್ತು ಅವರ ಪತಿ, ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಪೋಷಕರಾಗಲಿದ್ದು, 2021 ಜನವರಿಯಲ್ಲಿ ದಂಪತಿಗಳು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

anushka-sharma-to-play-sita-in-prabhas-adipurush
ಪ್ರಭಾಸ್ ಜೊತೆ ಆದಿಪುರುಶ್ ಚಿತ್ರದಲ್ಲಿ ತೆರೆ ಹಂಚಿಕೊಳ್ಳಲಿದ್ದಾರ ಅನುಷ್ಕಾ ಶರ್ಮಾ?

ಮುಂಬೈ:ಬಾಹುಬಲಿ ಖ್ಯಾತಿಯ ಡಾರ್ಲಿಂಗ್ ಪ್ರಭಾಸ್ ಅವರ ಮುಂಬರುವ ಚಿತ್ರ ಆದಿಪುರುಶ್‌ನಲ್ಲಿ ಅನುಷ್ಕಾ ಶರ್ಮಾ ಸೀತಾ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.

ಆದಿಪುರುಶ್ ಚಿತ್ರದ ಕಥೆ ಕೇಳಿದ್ದು, ಸೀತಾ ಪಾತ್ರದಲ್ಲಿ ನಟಿಸಲು ಅನುಷ್ಕಾ ಶರ್ಮಾ ಸಮ್ಮತಿ ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ. ಅನುಷ್ಕಾ ಮತ್ತು ಅವರ ಪತಿ, ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಪೋಷಕರಾಗಲಿದ್ದು, 2021 ಜನವರಿಯಲ್ಲಿ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಅದೇ ಸಮಯದಲ್ಲಿ, ಆದಿಪುರುಶ್ ತಂಡವು ಚಿತ್ರ ಪ್ರಾರಂಭಿಸುವ ಪ್ಲಾನ್ ಮಾಡಿದ್ದು, ಅನುಷ್ಕಾ ತಾಯ್ತನದ ಎರಡು ತಿಂಗಳ ನಂತರ ಕೆಲಸ ಪುನರಾರಂಭಿಸುವ ಯೋಜನೆ ಹಾಕಿ ಕೊಂಡಿದೆ. ಅನುಷ್ಕಾಗೆ ಅವಕಾಶ ಕಲ್ಪಿಸಲು, ಚಿತ್ರತಂಡ ಸ್ಟಾರ್ ನಟರಿಲ್ಲದ ದೃಶ್ಯದೊಂದಿಗೆ ಪ್ರಾರಂಭಿಸುವ ಯೋಜನೆಯನ್ನು ರೂಪಿಸುತ್ತಿದ್ದಾರೆಂದು ವರದಿಯಾಗಿದೆ.

ರಾಮಾಯಣದ ಮಹಾಕಾವ್ಯದ ರೂಪಾಂತರದಲ್ಲಿ, ಪ್ರಭಾಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿದ್ರೆ, ಸೈಫ್ ಅಲಿ ಖಾನ್ ಎದುರಾಳಿಯ ಪಾತ್ರ ನಿರ್ವಹಿಸಲಿದ್ದಾರೆ. ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ಚಿತ್ರೀಕರಣ ನಡೆಯಲಿದೆ. 3ಡಿ ಚಲನಚಿತ್ರವನ್ನು ನಂತರ ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಇತರ ಭಾಷೆಗಳಲ್ಲಿ ಡಬ್ ಮಾಡಲಾಗುತ್ತದೆ.

ಭೂಷಣ್ ಕುಮಾರ್, ಕ್ರಿಶನ್ ಕುಮಾರ್, ಓಂರೌತ್, ಪ್ರಸಾದ್ ಸುತಾರ್ ಮತ್ತು ರಾಜೇಶ್ ನಾಯರ್ ಅವರು ತೆರೆ ಹಿಂದಿನ ಕೆಲಸ ಮಾಡಿದ್ದಾರೆ. ಪ್ರಸ್ತುತ ಪ್ರೀ-ಪ್ರೊಡಕ್ಷನ್ ಹಂತದಲ್ಲಿದ್ದು, 2021ರಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ.

ABOUT THE AUTHOR

...view details