ಜೊತೆಜೊತೆಯಲಿ ಧಾರಾವಾಹಿಯ ಮೂಲಕ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಅನಿರುದ್ಧ್ ಇಂದು ಆರ್ಯವರ್ಧನ್ ಎಂದೇ ಫೇಮಸ್ಸು. ಅಮೋಘ ನಟನೆಯ ಮೂಲಕ ಕಿರುತೆರೆ ಪ್ರಿಯರ ಮನ ಸೆಳೆದಿರುವ ಇವರ ಅಭಿನಯಕ್ಕೆ ಮನಸೋಲದವರಿಲ್ಲ. ಬ್ಯುಸಿ ಕೆಲಸಗಳ ನಡುವೆಯೂ ಕೊಂಚ ಬಿಡುವು ಮಾಡಿಕೊಂಡಿರುವ ಅನಿರುದ್ಧ್ ತಮ್ಮ ಕುಟುಂಬದೊಂದಿಗೆ ಧರ್ಮಸ್ಥಳದ ಮಂಜುನಾಥೇಶ್ವರನ ದರ್ಶನ ಪಡೆದಿದ್ದಾರೆ.
ಧರ್ಮಸ್ಥಳದ ಮಂಜುನಾಥನ ದರ್ಶನ ಪಡೆದ ಆರ್ಯವರ್ಧನ್ - ಅನಿರುದ್ಧ್
ಬ್ಯುಸಿ ಕೆಲಸಗಳ ನಡುವೆಯೂ ಸ್ವಲ್ಪ ಬಿಡುವು ಮಾಡಿಕೊಂಡಿರುವ ಅನಿರುದ್ಧ್ ತಮ್ಮ ಕುಟುಂಬದೊಂದಿಗೆ ಧರ್ಮಸ್ಥಳದ ಮಂಜುನಾಥೇಶ್ವರ ದರ್ಶನ ಪಡೆದಿದ್ದಾರೆ.
ಧರ್ಮಸ್ಥಳದ ಮಂಜುನಾಥನ ದರ್ಶನ ಪಡೆದ ಆರ್ಯವರ್ಧನ್
ಧರ್ಮಸ್ಥಳದ ನಂತ್ರ ಶೃಂಗೇರಿ ಶಾರದಾ ಮಾತೆ, ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ, ಹೊರನಾಡಿನ ಅನ್ನಪೂರ್ಣೇಶ್ವರಿ ತಾಯಿಯ ಆಶೀರ್ವಾದ ಪಡೆದಿದ್ದಾರೆ. ಈ ಸಂತೋಷವನ್ನು ಫೇಸ್ ಬುಕ್ನಲ್ಲಿ ಹಂಚಿಕೊಂಡಿರುವ ಅನಿರುದ್ಧ್, ಮಡದಿಯೊಂದಿಗೆ ದೇವರನ್ನು ಕಣ್ತುಂಬಿಕೊಂಡಾಗ ಮನಸ್ಸಿಗೆ ಆಗುವ ಆನಂದ ಸ್ವರ್ಗಕ್ಕಿಂತ ಮಿಗಿಲು. ಧರ್ಮೋ ರಕ್ಷತಿ ರಕ್ಷಿತಃ ಎಂದು ಬರೆದುಕೊಂಡಿದ್ದಾರೆ.