ನವದೆಹಲಿ:ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬರೋಬ್ಬರಿ 317ರನ್ಗಳ ಗೆಲುವು ದಾಖಲು ಮಾಡುವುದರ ಮೂಲಕ ಮೊದಲ ಟೆಸ್ಟ್ ಸೋಲಿಗೆ ತಿರುಗೇಟು ನೀಡಿದೆ. ಕೊಹ್ಲಿ ಪಡೆ ಗೆಲುವು ಸಾಧಿಸುತ್ತಿದ್ದಂತೆ ಬಾಲಿವುಡ್ ಮೆಗಾಸ್ಟಾರ್ ಬಿಗ್ ಬಿ ಸೇರಿ ಅನೇಕರು ಟ್ವೀಟ್ ಮಾಡಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
78 ವರ್ಷದ ಬಿಗ್ ಬಿ ತಮ್ಮ ಟ್ವೀಟರ್ ಅಕೌಂಟ್ನಲ್ಲಿ ಟೀಂ ಇಂಡಿಯಾ ತಂಡಕ್ಕೆ ಅಭಿನಂದನೆ ಸಲ್ಲಿಕೆ ಮಾಡಿದ್ದು, T 3816 - Yeeeeeaaaaahhhh and YEEEEAAAAAHHHHH ! ಭಾರತ 317ರನ್ಗಳ ಗೆಲುವು ದಾಖಲು ಮಾಡಿದೆ. 317ರನ್ಗಳ ಟೆಸ್ಟ್ ಗೆಲುವು ನಿಜಕ್ಕೂ ನಂಬಿಕೆಗೆ ಮೀರಿದ್ದು, ಇಂಡಿಯಾ ಇಂಡಿಯಾ ಎಂದು ಬರೆದುಕೊಂಡಿದ್ದಾರೆ.