ವಿಶ್ವವನ್ನೇ ನಡುಗಿಸಿರುವ ಕೊರೊನಾ ಬಗ್ಗೆ ಅಮಿತಾಬ್ ಬಚ್ಚನ್ ಜಾಗೃತಿ ಮೂಡಿಸುತ್ತಿದ್ದಾರೆ. ತಮ್ಮ ಟ್ವಿಟ್ಟರ್ನಲ್ಲಿ ಗ್ರಾಫಿಕ್ ವಿಡಿಯೋ ತುಣುಕು ಹಾಕಿ ಕೊರೊನಾ ಹರಡದಂತೆ ಮಾಹಿತಿ ನೀಡಿದ್ದಾರೆ.
ಕೊರೊನಾ ವೈರಸ್ ತಡೆಯಲು ಹೀಗೆ ಮಾಡಿ ಅಂದ್ರು ಅಮಿತಾಬ್ ಬಚ್ಚನ್ - corona effect
ಕೊರೊನಾ ಬಗ್ಗೆ ಒಳ್ಳೆಯ ಮಾಹಿತಿಯನ್ನೇ ಕೊಡಿ. ಯಾವುದೇ ಕಾರಣಕ್ಕೂ ವದಂತಿಗಳನ್ನು ಹರಡಬೇಡಿ ಎಂದು ಹೇಳಿರುವ ಬಾಲಿವುಡ್ ಲೋಕದ ಹಿರಿಯ ನಟ ಅಮಿತಾಬ್ ಬಚ್ಚನ್ ಜನರಿಗೆ ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ.
ವಿಡಿಯೋದಲ್ಲಿ ಹೇಳಿರುವ ಬಿಗ್ ಬಿ, ವಿಶ್ವ ಆರೋಗ್ಯ ಸಂಸ್ಥೆ ಕೊರೊನಾವನ್ನು ಮಹಾಮಾರಿ ಎಂದು ಘೋಷಿಸಿದೆ. ಯಾಕಂದ್ರೆ, ಈ ವೈರಸ್ ವಿಶ್ವದ ಜನರ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಕೊರೊನಾ ಅತಿ ವೇಗವಾಗಿ ಹರಡುತ್ತದೆ. ನೀವು ಕೆಮ್ಮುವಾಗ ಮತ್ತು ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಿ. ಉಗುಳಬೇಡಿ. ನಿಮ್ಮ ಕೈಗಳನ್ನು ಸ್ವಚ್ಛವಾಗಿಡಲು ಪದೇ ಪದೆ ಸೋಪಿನಿಂದ ತೊಳೆದುಕೊಳ್ಳಿ. ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿರುವ ವ್ಯಕ್ತಿಗಳಿಂದ ದೂರವಿರಿ ಎಂದು ಬಚ್ಚನ್ ತಿಳಿಸಿದ್ದಾರೆ.
ನಿಮಗೆ ಜ್ವರ, ಕೆಮ್ಮು, ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡರೆ ತಕ್ಷಣ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಿ. ಇನ್ನು ಕೆಮ್ಮು, ಜ್ವರ ಇರುವ ಜನರು ಯಾವುದೇ ಸಮಾರಂಭಗಳಲ್ಲೂ ಭಾಗಿಯಾಗದೆ ಮನೆಯಲ್ಲಿಯೇ ಇರಿ. ಕೊರೊನಾ ಬಗ್ಗೆ ಒಳ್ಳೆಯ ಮಾಹಿತಿಯನ್ನು ಕೊಡಿ. ಯಾವುದೇ ಕಾರಣಕ್ಕೂ ವದಂತಿಗಳನ್ನು ಹರಡಬೇಡಿ ಎಂದು ಹಿರಿಯ ನಟ ಅಮಿತಾಬ್ ಬಚ್ಚನ್ ಮನವಿ ಮಾಡಿದ್ದಾರೆ.