ರೆಬಲ್ ಸ್ಟಾರ್ ಅಂಬರೀಶ್ ಅವರು ಮೃತಪಟ್ಟು ಒಂದು ವರ್ಷ ಕಳೆದಿದೆ. ಅವರ ಮೊದಲನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಅರ್ಜುನ್ ಸರ್ಜಾ ಅವರು 1980 ರಿಂದಲೂ ಅಂಬರೀಶ್ ಜೊತೆಗಿದ್ದ ಒಡನಾಟದ ಕುರಿತು ಹಲವು ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಅರ್ಜುನ್ ಸರ್ಜಾ, ಅಂಬಿ ಜತೆಗಿನ 3 ದಶಕದ ನಂಟು ಹಂಚಿಕೊಂಡಿದ್ದು ಹೀಗೆ..! - ಅಂಬರೀಶ್ ಜೊತೆಗಿನ ನೆನಪುಗಳ ಮೆಲುಕು
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು ರೆಬಲ್ ಸ್ಟಾರ್ ಅಂಬರೀಶ್ ಅವರ ಮೊದಲನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಭಾಗವಹಿಸಿದರು. ಅಂಬಿ ಜೊತೆಗಿನ ತಮ್ಮ ಮೂರು ದಶಕಗಳ ನಂಟನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡರು.
Ambarish First Year Sacred Memory Program
ಅಂಬರೀಶ್ ಅವರು ಕನ್ನಡ ಚಿತ್ರರಂಗದ ಅಜಾತಶತ್ರು ಎಂದು ಬಣ್ಣಿಸಿದರು. ಅಂಬರೀಶ್ ಅವರಿಗಿದ್ದ ನೆನಪಿನ ಶಕ್ತಿ ಕುರಿತು ಮತ್ತು ಅವರ ಕೊನೆಯ ದಿನಗಳಲ್ಲಿ ಅರ್ಜುನ್ ಸರ್ಜಾ ಹಾಗು ಧೃವ ಸರ್ಜಾ ಒಟ್ಟಿಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದರು.