ಹೈದರಾಬಾದ್ : ಬಾಲಿವುಡ್ ನಟಿ ಆಲಿಯಾ ಭಟ್ ತಮ್ಮ ಮುಂಬರುವ ಚಿತ್ರ ಗಂಗೂಬಾಯಿ ಕಥಿಯಾವಾಡಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದು, ಬಣ್ಣ - ಬಣ್ಣದ ಸೀರೆಗಳಲ್ಲಿ ಕಂಗೊಳಿಸಿದ್ದಾರೆ. ಆಲಿಯಾ ಸಾಮಾಜಿಕ ಜಾಲತಾಣದಲ್ಲಿ ಬಿಳಿ ಸೀರೆಯುಟ್ಟಿರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಬಿಳಿ ಬಣ್ಣದ ಸೀರೆಯನ್ನು ಅಂಜುಲ್ ಭಂಡಾರಿಯವರು ಡಿಸೈನ್ ಮಾಡಿದ್ದಾರೆ.
ಒಂದು ಫೋಟೋದಲ್ಲಿ ಆಲಿಯಾ ತಮ್ಮ ಮುದ್ದಿನ ಬೆಕ್ಕು ಎಡ್ವರ್ಡ್ನೊಂದಿಗೆ ಪೋಸ್ ನೀಡಿದ್ದಾರೆ. ''ಎಡ್ವರ್ಡ್ ಭಾಯ್ ಔರ್ ಗಂಗೂಬಾಯಿ. ಫೆಬ್ರವರಿ. 25ರಂದು ಚಿತ್ರಮಂದಿರಗಳಲ್ಲಿ'' ಎಂದು ಬರೆದುಕೊಂಡಿದ್ದಾರೆ.
ಕೊರೊನಾ ಕಾರಣದಿಂದಾಗಿ ಆಲಿಯಾ ಅಭಿನಯದ ಗಂಗೂಬಾಯಿ ಕಥಿಯಾವಾಡಿ ಸಿನಿಮಾವನ್ನು ರಿಲೀಸ್ ಮಾಡುವಲ್ಲಿ ವಿಳಂಬ ಮಾಡಲಾಗಿತ್ತು. ಇದೀಗ ಫೆಬ್ರವರಿ 25ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಚಿತ್ರದಲ್ಲಿ ಅಜಯ್ ದೇವಗನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.