ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ 'ಸೂರ್ಯವಂಶಿ' ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೆ, ಅಕ್ಕಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಪೃಥ್ವಿರಾಜ್' ಟೀಸರ್ ಬಿಡುಗಡೆಯಾಗಿದ್ದು, (Prithviraj teaser out) ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ.
ಬಹುನಿರೀಕ್ಷಿತ ಅಕ್ಷಯ್ ಕುಮಾರ್ 'ಪೃಥ್ವಿರಾಜ್' ಸಿನಿಮಾ ಟೀಸರ್ ಬಿಡುಗಡೆ - ನಟಿ ಮಾನುಷಿ ಚಿಲ್ಲರ್
ಭಾರತದ ಶ್ರೇಷ್ಠ ಚಕ್ರವರ್ತಿ ಪೃಥ್ವಿರಾಜ್ ಚೌಹಾಣ್ ಅವರ ಜೀವನ ಕಥೆ ಆಧಾರಿತ ಚಿತ್ರ ಪೃಥ್ವಿರಾಜ್ ಟೀಸರ್ ಬಿಡುಗಡೆಯಾಗಿದ್ದು, ಸಿನಿಮಾದಲ್ಲಿ ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಡೈಲಾಂಗ್ ಪಂಚ್, ಅದ್ದೂರಿ ಮೇಕಿಂಗ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಭಾರತದ ಶ್ರೇಷ್ಠ ಚಕ್ರವರ್ತಿ ಪೃಥ್ವಿರಾಜ್ ಚೌಹಾಣ್ (akshay kumar prithviraj) ಅವರ ಜೀವನ ಕಥೆ ಚಿತ್ರವೇ 'ಪೃಥ್ವಿರಾಜ್'. ಚಿತ್ರದಲ್ಲಿ ಆ್ಯಕ್ಷನ್ ಕಿಂಗ್, ಪೃಥ್ವಿರಾಜ್ ಚೌಹಾಣ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರದ ಮೂಲಕ ನಟಿ ಮಾನುಷಿ ಚಿಲ್ಲರ್ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇದಲ್ಲದೇ, ಸಂಜಯ್ ದತ್, ಸೋನು ಸೂದ್ ಮತ್ತು ಅಶುತೋಷ್ ರಾಣಾ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸದ್ಯ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದ್ದು, ಅದ್ದೂರಿ ನಿರ್ಮಾಣಕ್ಕೆ ಕೈಗನ್ನಡಿಯಾಗಿದೆ. ಎನರ್ಜಿಟಿಕ್ ಡೈಲಾಗ್ಸ್ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನದ ಪೃಥ್ವಿರಾಜ್ ಮುಂದಿನ ವರ್ಷ ಜನವರಿ 21, ರಂದು ತೆರೆ ಕಾಣಲಿದೆ. ಅಲ್ಲದೇ, ಪೃಥ್ವಿರಾಜ್ ಜೊತೆಗೆ ಅಕ್ಷಯ್ ಬಚ್ಚನ್ ಪಾಂಡೆ, ಅತರಂಗಿ ರೇ, ರಾಮ್ ಸೇತು, ರಕ್ಷಾ ಬಂಧನ, ಮಿಷನ್ ಸಿಂಡ್ರೆಲಾ ಮತ್ತು ಓ ಮೈ ಗಾಡ್ ಚಿತ್ರಗಳಲ್ಲಿ ವಿವಿಧ ಪಾತ್ರಗಳ ಮೂಲಕ ಕಾಣಿಸಿಕೊಳ್ಳಲಿದ್ದಾರೆ.