ಸದ್ಯ ಮೂರ್ನಾಲ್ಕು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಕಿಲಾಡಿ ಅಕ್ಷಯ್ ಕುಮಾರ್, ಬಾಲಿವುಡ್ನ ಬಹುಬೇಡಿಕೆ ನಟರಲ್ಲಿ ಒಬ್ಬರು. ನಟನೆ ಜೊತೆಗೆ ಸಾಮಾಜಿಕ ಕಳಕಳಿಗೆ ಸ್ಪಂದಿಸೋದು ಅವರ ಮಾನವೀಯ ಗುಣ.
ಬೀದಿ ನಾಯಿ ಹಸಿವು ನೀಗಿಸಿದ ಅಕ್ಕಿ... ಅಕ್ಷಯ್ ಹೃದಯವಂತಿಕೆಗೆ ಸಾಕ್ಷಿ ಈ ವಿಡಿಯೋ! - ಸಾಮಾಜಿಕ ಜಾಲತಾಣ
ಬಾಲಿವುಡ್ ನಟ ಅಕ್ಷಯ್ ಕುಮಾರ್ ಪರರ ಸಂಕಷ್ಟಕ್ಕೆ ಉಳಿದವರಿಗಿಂತ ಬಹು ಬೇಗ ಸ್ಪಂದಿಸುವ ನಟ. ಅವರು ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲ, ನಿಜ ಜೀವನದಲ್ಲಿಯೂ ಓರ್ವ ಹೃದಯವಂತ ವ್ಯಕ್ತಿ ಅನ್ನೋದಕ್ಕೆ ಈ ವಿಡಿಯೋನೇ ಸಾಕ್ಷಿಯಾಗಿದೆ.
ಇತ್ತೀಚೆಗೆ ಚಿತ್ರವೊಂದರ ಶೂಟಿಂಗ್ಗೆ ತೆರಳಿದ್ದಾಗ ಸ್ಪಾಟ್ನಲ್ಲಿ ಬೀದಿ ನಾಯಿಯೊಂದರ ಹಸಿವು ನೀಗಿಸುವ ಮೂಲಕ ಮತ್ತೊಮ್ಮೆ ತಮ್ಮ ಹೃದಯವಂತಿಕೆ ಮತ್ತು ಮಾನವೀಯ ಗುಣವನ್ನು ಸಾಬೀತುಪಡಿಸಿದ್ದಾರೆ.
ಊಟದ ಸಮಯವಾಗಿದ್ದರಿಂದ ಅಕ್ಷಯ್ ಕುಮಾರ್, ಸ್ವಲ್ಪ ರಿಲ್ಯಾಕ್ಸ್ ಮೂಡಿನಲ್ಲಿದ್ದರು. ಈ ವೇಳೆ ತಮ್ಮ ಬಳಿ ಬಂದ ನಾಯಿಗೆ ಬಿಸ್ಕತ್ಗಳನ್ನು ಹಾಕಿ ಅದರ ಹಸಿವು ನೀಗಿಸುವ ಮೂಲಕ ಪರದೆ ಹಿಂದೆಯೂ ಪ್ರಾಣಿ ಪ್ರಿಯರೆಂದು ತಿಳಿಸಿಕೊಟ್ಟಿದ್ದಾರೆ. ಆ ದಿನದ ದೃಶ್ಯವನ್ನು ಅಕ್ಷಯ್ ಕುಮಾರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ನೆಟಿಜನ್ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.