ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 6ರ ಸ್ಪರ್ಧಿಯಾಗಿ ಕಿರುತೆರೆ ವೀಕ್ಷಕರ ಗಮನ ಸೆಳೆದಿರುವ ಅಕ್ಷತಾ ಪಾಂಡವಾಪುರ ತಾಯಿಯಾಗುವ ಸಂತಸದಲ್ಲಿದ್ದಾರೆ. ಈ ಸಂತಸದ ವಿಚಾರವನ್ನು ಸ್ವತಃ ಅಕ್ಷತಾ ಹಂಚಿಕೊಂಡಿದ್ದಾರೆ. ಅವರ ಸೀಮಂತ ಕಾರ್ಯಕ್ರಮ ಇತ್ತೀಚೆಗಷ್ಟೇ ನೆರವೇರಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಅಮ್ಮನಾಗುವ ಖುಷಿಯಲ್ಲಿ ಬಿಗ್ ಬಾಸ್ ಖ್ಯಾತಿಯ ನಟಿ
ಬಿಗ್ ಬಾಸ್ ಸೀಸನ್ 6ರ ಸ್ಪರ್ಧಿಯಾಗಿ ಕಿರುತೆರೆ ವೀಕ್ಷಕರ ಗಮನ ಸೆಳೆದಿರುವ ಅಕ್ಷತಾ ಪಾಂಡವಾಪುರ ತಾಯಿಯಾಗುವ ಸಂತಸದಲ್ಲಿದ್ದಾರೆ.
ಅಕ್ಷತಾ ವಿಭಿನ್ನ ರೀತಿಯಲ್ಲಿ ಮೆಟರ್ನಿಟಿ (ಬೇಬಿ ಬಂಪ್) ಫೋಟೋ ಶೂಟ್ ಮಾಡಿಸಿದ್ದು, ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. "ಈ ವಿಸ್ಮಯ ಜಗತ್ತಿನಲ್ಲಿ ಮತ್ತೊಂದು ವಿಸ್ಮಯ ಅಂದ್ರೆ ಮತ್ತೆಂದೂ ಬಾರದ ಈ ಘಳಿಗೆ. ಜನವರಿ 2021ಕ್ಕೆ ಮತ್ತೊಂದು ವಿಶೇಷ ಘಳಿಗೆಯ ನಿರೀಕ್ಷೆಯಲ್ಲಿ.'' ಎಂದು ಅಕ್ಷತಾ ಬರೆದುಕೊಂಡಿದ್ದು, ಮುದ್ದು ಮಗುವಿನ ಆಗಮನಕ್ಕಾಗಿ ಕಾಯುತ್ತಿದ್ದಾರೆ.
ರಂಗಭೂಮಿ ಕಲಾವಿದೆಯಾಗಿ ಗುರುತಿಸಿಕೊಂಡಿರುವ ಅಕ್ಷತಾ ಪಾಂಡವಾಪುರ ಅವರ ಪತಿ ಪ್ರಸನ್ನ ಸಾಗರ್. ಮೂಲತಃ ಸಾಗರದವರಾದ ಇವರು ರಂಗ ನಿರ್ದೇಶಕರು. ಅಕ್ಷತಾ ಹಾಗೂ ಪ್ರಸನ್ನ ಅವರದು ಪ್ರೇಮ ವಿವಾಹವಾಗಿದ್ದು, ಎಂಟು ವರ್ಷಗಳ ಹಿಂದೆ ಇವರಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.