ಕರ್ನಾಟಕ

karnataka

By

Published : Jul 19, 2019, 3:02 PM IST

ETV Bharat / sitara

ವಿಕ್ರಮ್ ಜೊತೆ ಡ್ಯೂಯೆಟ್ ಹಾಡಲು ಬಂದ್ರು ಆಕಾಂಕ್ಷಾ ಶರ್ಮ

ಆಗಸ್ಟ್ 9 ರಂದು ವಿಕ್ರಮ್ ನಟಿಸುತ್ತಿರುವ ‘ತ್ರಿವಿಕ್ರಮ’ ಚಿತ್ರ ಸೆಟ್ಟೇರುತ್ತಿದ್ದು, ಚಿತ್ರಕ್ಕೆ ನಾಯಕಿಯಾಗಿ ಮುಂಬೈ ಬೆಡಗಿ ಆಕಾಂಕ್ಷ ಶರ್ಮಾ ಆಯ್ಕೆಯಾಗಿದ್ದಾರೆ. ಚಿತ್ರದ ಹಾಡೊಂದಕ್ಕೆ ಪ್ರಭುದೇವ ನೃತ್ಯ ಸಂಯೋಜಿಸಲಿದ್ದಾರೆ ಎನ್ನಲಾಗುತ್ತಿದೆ.

ವಿಕ್ರಮ್, ಆಕಾಂಕ್ಷ ಶರ್ಮ

ಕ್ರೇಜಿಸ್ಟಾರ್ ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್ ರವಿಚಂದ್ರನ್ ಕೂಡಾ ಸ್ಯಾಂಡಲ್​​ವುಡ್​​​ಗೆ ಕಾಲಿಟ್ಟಿದ್ದು, ಈಗಾಗಲೇ ಅವರ ಚೊಚ್ಚಲ ಚಿತ್ರದ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ಚಿತ್ರಕ್ಕೆ ನಾಯಕಿ ಕೂಡಾ ಆಯ್ಕೆಯಾಗಿದ್ದಾರೆ.

ಮುಂಬೈ ಬೆಡಗಿ ಆಕಾಂಕ್ಷ ಶರ್ಮ ‘ತ್ರಿವಿಕ್ರಮ’ ಚಿತ್ರದಲ್ಲಿ ವಿಕ್ರಮ್​​ಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಮಾಡೆಲಿಂಗ್ ಹಾಗೂ ನೃತ್ಯದಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡಿರುವ ಆಕಾಂಕ್ಷ ಶರ್ಮಾ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಆಗಸ್ಟ್ 9 ರ ವರಮಹಾಲಕ್ಷ್ಮಿ ಹಬ್ಬದಂದು ಸೆಟ್ಟೇರುತ್ತಿದೆ. ದಾಂಡೇಲಿ, ಬೆಂಗಳೂರು, ರಾಜಸ್ಥಾನ, ಸಿಂಗಾಪುರದಲ್ಲಿ ಸಿನಿಮಾ ಚಿತ್ರೀಕರಣವಾಗಲಿದೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯಾ ಸಂಗೀತ ನೀಡುತ್ತಿದ್ದಾರೆ. ಭಾರತದ ಮೈಕೆಲ್ ಜಾಕ್ಸನ್​ ಪ್ರಭುದೇವ ಚಿತ್ರದ ಒಂದು ಹಾಡಿಗೆ ನೃತ್ಯ ಸಂಯೋಜನೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

For All Latest Updates

TAGGED:

ABOUT THE AUTHOR

...view details