ಸ್ಯಾಂಡಲ್ವುಡ್ನಲ್ಲಿ ಕೃಷ್ಣ ಹೆಸರಿನ ಸಿನಿಮಾಗಳು ಬಹಳಷ್ಟಿವೆ. ಅದರಲ್ಲೂ ಅಜಯ್ ರಾವ್ ಅಭಿನಯದ ಕೆಲವೊಂದು ಸಿನಿಮಾಗಳು ಕೃಷ್ಣ ಹೆಸರಿನಲ್ಲೇ ತಯಾರಾಗಿವೆ. ಇದೀಗ ಅವರ ಹೊಸ ಸಿನಿಮಾ ಕೂಡಾ 'ಕೃಷ್ಣ ಟಾಕೀಸ್' ಹೆಸರಿನಲ್ಲೇ ಮೂಡಿಬರುತ್ತಿದೆ.
ನೈಜ ಘಟನೆ ಆಧಾರಿತ 'ಕೃಷ್ಣ ಟಾಕೀಸ್' ಫಸ್ಟ್ಲುಕ್ ಬಿಡುಗಡೆ... ಅಕ್ಟೋಬರ್ನಲ್ಲಿ ಚಿತ್ರ ತೆರೆಗೆ - ಕೃಷ್ಣ ಟಾಕೀಸ್
ಅಜಯ್ ರಾವ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಕೃಷ್ಣ ಟಾಕೀಸ್' ಸಿನಿಮಾ ಫಸ್ಟ್ಲುಕ್ ನಿನ್ನೆ ಚಿತ್ರತಂಡ ಬಿಡುಗಡೆ ಮಾಡಿದೆ. ಲಖನೌ ಥಿಯೇಟರ್ ಒಂದರಲ್ಲಿ ನಡೆದ ನೈಜ ಘಟನೆ ಆಧಾರಿತ ಈ ಸಿನಿಮಾ ಅಕ್ಟೋಬರ್ನಲ್ಲಿ ತೆರೆಗೆ ಬರಲಿದೆ.
ಕೃಷ್ಣ ಟಾಕೀಸ್ ಸಿನಿಮಾಗೆ BOLCONY F 13 ಎಂಬ ಅಡಿಬರಹವಿದೆ. ನಿನ್ನೆ ಈ ಚಿತ್ರದ ಫಸ್ಟ್ಲುಕ್ ಬಿಡುಗಡೆಯಾಗಿದೆ. 1955 ರಲ್ಲಿ ಲಖನೌ ಚಿತ್ರಮಂದಿರದಲ್ಲಿ ನಡೆದ ನೈಜ ಘಟನೆಯನ್ನಾಧರಿಸಿ ಈ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ಈ ಚಿತ್ರದಲ್ಲಿ ಅಜಯ್ ರಾವ್ ಪತ್ರಕರ್ತನ ಪಾತ್ರ ಮಾಡುತ್ತಿದ್ದಾರೆ. ಸಿಂಧು ಲೋಕನಾಥ್ ಹಾಗೂ ಅಪೂರ್ವ ಇಬ್ಬರೂ ಅಜಯ್ಗೆ ಜೋಡಿಯಾಗಿದ್ದಾರೆ. ಕಿರುತೆರೆಯಲ್ಲಿ ಮಿಂಚಿದ್ದ ಶಾಂಭವಿ ವೆಂಕಟೇಶ್ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮೋದ್ ಶೆಟ್ಟಿ ಸೇರಿ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಚಿತ್ರವಾಗಿದೆ. 'ಓಳ್ ಮುನಿಸ್ವಾಮಿ' ಸಿನಿಮಾವನ್ನು ನಿರ್ದೇಶಿಸಿದ್ದ ವಿಜಯಾನಂದ 'ಕೃಷ್ಣ ಟಾಕೀಸ್' ನಿರ್ದೇಶಿಸುತ್ತಿದ್ದಾರೆ. ಗೋವಿಂದರಾಜ್ ಎಂಬುವವರು ಸಿನಿಮಾಗೆ ಹಣ ಹೂಡಿದ್ದಾರೆ. ಶ್ರೀಧರ್ ವಿ. ಸಂಭ್ರಮ್ ಚಿತ್ರದ ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಅಭಿಷೇಕ್ ಕಾಸರಗೋಡು ಕ್ಯಾಮರಾ ವರ್ಕ್ ಚಿತ್ರಕ್ಕಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ವಿಕ್ರಮ್ ಮೋರ್ ಈ ಸಿನಿಮಾಗೆ ಆ್ಯಕ್ಷನ್ ಕಂಪೋಸ್ ಮಾಡುತ್ತಿದ್ದಾರೆ. ಅಕ್ಟೋಬರ್ನಲ್ಲಿ ನೀವು 'ಕೃಷ್ಣ ಟಾಕೀಸ್'ಗೆ ತೆರಳಬಹುದು.