ಮುಂಬೈ: ನಟ ಅಜಯ್ ದೇವಗನ್ ಅಭಿನಯದ 'ಗಂಗೂಬಾಯಿ ಕಥಿಯಾವಾಡಿ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಂಡಿದ್ದು, ಫೆಬ್ರುವರಿ 4 ರಂದು ಟ್ರೈಲರ್ ಬಿಡುಗಡೆಯಾಗಲಿದೆ.
ಇಂದು ರಿಲೀಸ್ ಆಗಲಿದೆ 'ಗಂಗೂಬಾಯಿ ಕಥಿಯಾವಾಡಿ' ಸಿನಿಮಾ ಟ್ರೈಲರ್ - ನಟಿ ಆಲಿಯಾ ಭಟ್
ನಟಿ ಆಲಿಯಾ ಭಟ್ ನಟಿಸಿರುವ ಬಹುನಿರೀಕ್ಷಿತ ಚಿತ್ರ ‘ಗಂಗೂಬಾಯಿ ಕಥಿಯಾವಾಡಿ' ಬಿಡುಗಡೆಗೆ ತಯಾರಾಗಿದೆ. ಇಂದು ಸಿನಿಮಾದ ಟ್ರೈಲರ್ ಬಿಡುಗಡೆಯಾಗಲಿದ್ದು, ನಿನ್ನೆ ಅಜಯ್ ದೇವಗನ್ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಬಾಲಿವುಡ್ ನಟಿ ಆಲಿಯಾ ಭಟ್ ಅಭಿನಯದ 'ಗಂಗೂಬಾಯಿ ಕಥಿಯಾವಾಡಿ' ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುವ ಅಜಯ್ ದೇವಗನ್, ತಮ್ಮ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿ ಇನ್‌ಸ್ಟಾಗ್ರಾಮ್ ಹಾಗೂ ಟ್ವಿಟರ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿದ್ದಾರೆ. ಪಿಸ್ತಾ ಕಲರ್ ವಿಂಟೇಜ್ ಕಾರಿನ ಮುಂದೆ ಬಿಳಿ ಬಣ್ಣದ ಪ್ಯಾಂಟ್, ಶರ್ಟ್, ಬೂದು ಬಣ್ಣದ ಬ್ಲೇಜರ್, ಕಂದು ಬಣ್ಣದ ಕ್ಯಾಪ್ ಧರಿಸಿ ಅಜಯ್ ಪೋಸ್ ನೀಡುತ್ತಿರುವ ಪೋಸ್ಟರ್ ಇದಾಗಿದೆ. ಈ ಕುರಿತಾದ ವಿಡಿಯೋ ಝಲಕ್ ಇಲ್ಲಿದೆ ನೋಡಿ.
ಹುಸೇನ್ ಜೈದಿ ಅವರ ಪುಸ್ತಕ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ ಆಧಾರಿತವಾಗಿ ಸಂಜಯ್ ಲೀಲಾ ಬನ್ಸಾಲಿ ಅವರು ‘ಗಂಗೂಬಾಯಿ ಕಥಿಯಾವಾಡಿ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಜಯಂತಿಲಾಲ್ ಗಡ ನಿರ್ಮಿಸಿದ್ದಾರೆ. ಅಲಿಯಾ ಭಟ್ ಜೊತೆಗೆ, ಅಜಯ್ ದೇವಗನ್ ಮತ್ತು ಶಾಂತನು ಮಹೇಶ್ವರಿ ಕೂಡ ನಟಿಸಿದ್ದಾರೆ.