ಮುಂಬೈ: ಕೋವಿಡ್ ಪ್ರಕರಣಗಳಲ್ಲಿ ಕೊಂಚ ಇಳಿಕೆ ಕಂಡು ಬಂದ ಹಿನ್ನೆಲೆ ಚಿತ್ರಮಂದಿರಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ. ಈ ಬೆನ್ನಲ್ಲೇ ಇದೀಗ ಸಿನಿ ವೀಕ್ಷಕರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದ್ದು, ಖ್ಯಾತ ನಟ ಅಜಯ್ ದೇವಗನ್ ಅಭಿನಯದ ಬಹುನಿರೀಕ್ಷಿತ ‘ಮೈದಾನ್’ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಲಾಗಿದೆ.
ಅಜಯ್ ದೇವಗನ್ ಅಭಿನಯದ 'ಮೈದಾನ್' ಚಿತ್ರದ ಬಿಡುಗಡೆ ದಿನಾಂಕ ಘೋಷಣೆ
ಬಾಲಿವುಡ್ ನಟ ಅಜಯ್ ದೇವಗನ್ ಅವರ ಮುಂಬರುವ ಬಹು ನಿರೀಕ್ಷಿತ 'ಮೈದಾನ್' ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದ್ದು, 2022 ರ ಜೂನ್ 3 ರಂದು ಸಿನಿಮಾ ಬಿಡುಗಡೆಯಾಗಲಿದೆ.
ಅಮಿತ್ ಶರ್ಮಾ ನಿರ್ದೇಶನದ ‘ಮೈದಾನ್’ ಚಿತ್ರವನ್ನು ಜೀ ಸ್ಟುಡಿಯೋಸ್, ಬೋನಿ ಕಪೂರ್, ಅರುಣವ್ ಜಾಯ್ ಸೇನ್ಗುಪ್ತ ಮತ್ತು ಆಕಾಶ್ ಚಾವ್ಲಾ ನಿರ್ಮಿಸುತ್ತಿದ್ದಾರೆ. ಪ್ರಸ್ತುತ ಚಿತ್ರತಂಡವು ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದು, 2022ರ ಜೂನ್ 3ರಂದು ಬಿಡುಗಡೆಯಾಗಲಿದೆ.
ಈ ಸಿನಿಮಾ ಸೈಯದ್ ಅಬ್ದುಲ್ ರಹೀಂ ಅವರ ನೈಜ ಜೀವನ ಆಧಾರಿತ ಕಥೆಯಾಗಿದೆ. ಸಿನಿಮಾದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಅಬ್ದುಲ್ ರಹೀಂ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 1950 ರಿಂದ 1963 ರವರೆಗೆ ಭಾರತೀಯ ಫುಟ್ಬಾಲ್ ತಂಡಕ್ಕೆ ಅಬ್ದುಲ್ ರಹೀಂ ನೀಡಿರುವ ತರಬೇತಿ ಮತ್ತು ಭಾರತದಲ್ಲಿ ಅವರು ಫುಟ್ಬಾಲ್ ಅನ್ನು ಜನಪ್ರಿಯಗೊಳಿಸಿದ ಕುರಿತು ಮಾಹಿತಿ ನೀಡಲಿದೆ.