ಕರ್ನಾಟಕ

karnataka

ETV Bharat / sitara

ವಿಶ್ರಾಂತಿ ಬಳಿಕ ಭಜರಂಗಿ-2 ಚಿತ್ರದ ಶೂಟಿಂಗ್​​​ಗೆ ಹಾಜರಾಗಲಿದ್ದಾರೆ ಸೆಂಚುರಿ ಸ್ಟಾರ್ - ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ

ಸೆಂಚುರಿ ಸ್ಟಾರ್ ಶಿವರಾಜ್​​​​ಕುಮಾರ್ ಅಭಿನಯದ ‘ಆಯುಷ್ಮಾನ್ ಭವ’ ನವೆಂಬರ್​​ 1 ರಂದು ಬಿಡುಗಡೆ ಆಗಲಿದೆ ಎನ್ನಲಾಗಿದೆ. ಇನ್ನು ಭುಜದ ಶಸ್ತ್ರಚಿಕಿತ್ಸೆ ನಂತರ ವಿಶ್ರಾಂತಿ ಪಡೆಯುತ್ತಿದ್ದ ಶಿವಣ್ಣ ‘ಭಜರಂಗಿ-2‘ ಚಿತ್ರದ ಮೂಲಕ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ.

ಶಿವರಾಜ್​​ಕುಮಾರ್​​

By

Published : Sep 13, 2019, 7:17 PM IST

ಬಲಭುಜದ ಶಸ್ತ್ರಚಿಕಿತ್ಸೆ ನಂತರ ಕೆಲವು ದಿನಗಳ ಕಾಲ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ನಟ ಶಿವರಾಜ್​ಕುಮಾರ್ ಇದೀಗ ಚಿತ್ರೀಕರಣಕ್ಕೆ ಹಾಜರಾಗುತ್ತಿದ್ದಾರೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿರುವುದಕ್ಕೆ ಶಿವಣ್ಣ ಸಂತೋಷದಿಂದ ಇದ್ದಾರೆ.

‘ಆಯುಷ್ಮಾನ್ ಭವ’

ಇತ್ತೀಚೆಗೆ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಉದ್ಘಾಟನೆ ಮಾಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಶಿವಣ್ಣ, ಅವರ ಮುಂದಿನ ಸಿನಿಮಾ ‘ಆಯುಷ್ಮಾನ್ ಭವ’ ನವೆಂಬರ್ 1 ರಂದು ಬಿಡುಗಡೆ ಆಗಲಿದೆ ಎಂಬ ಮಾಹಿತಿ ನೀಡಿದರು. ‘ಶಿವಲಿಂಗ’ ಚಿತ್ರದ ನಂತರ ಪಿ.ವಾಸು ನಿರ್ದೇಶನದಲ್ಲಿ ಮತ್ತೊಮ್ಮೆ ಶಿವಣ್ಣ ಅಭಿನಯಿಸಿರುವ ಈ ಚಿತ್ರವನ್ನು ದ್ವಾರಕೀಶ್ ಚಿತ್ರ ನಿರ್ಮಾಣ ಸಂಸ್ತೆ ನಿರ್ಮಾಣ ಮಾಡಿದೆ. ಮೊದಲು ಈ ಸಿನಿಮಾಗೆ ‘ಆನಂದ್​‘ ಎಂದು ಹೆಸರಿಟ್ಟಿದ್ದು ಆ ಹೆಸರು ಸೂಕ್ತ ಅಲ್ಲ ಎಂದು ಅನ್ನಿಸಿದ್ದರಿಂದ ಚಿತ್ರಕ್ಕೆ ‘ಆಯುಷ್ಮಾನ್​ ಭವ‘ ಎಂದು ಹೆಸರಿಡಲಾಗಿದೆ ಎಂದು ಶಿವಣ್ಣ ಹೇಳಿದರು.

ಸದ್ಯಕ್ಕೆ ಶಿವರಾಜ್​​​​ಕುಮಾರ್​​​​ ಎ.ಹರ್ಷ ಅವರ ‘ಭಜರಂಗಿ-2‘ ಸಿನಿಮಾ ಮೂಲಕ ಚಿತ್ರೀಕರಣಕ್ಕೆ ಹಾಜರಾಗುತ್ತಿದ್ದಾರೆ. ಚಿತ್ರದ ಮಾತಿನ ಭಾಗದ ಚಿತ್ರೀಕರಣ ಆರಂಭವಾಗಿದ್ದು ನೆಲಮಂಗಲದ ಬಳಿ ಚಿತ್ರೀಕರಣ ಜರುಗುತ್ತಿದೆ. ಮತ್ತೊಮ್ಮೆ ವೈದ್ಯರ ಸಲಹೆ ಪಡೆದು ನವೆಂಬರ್​​​​ನಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣದಲ್ಲಿ ಶಿವಣ್ಣ ಪಾಲ್ಗೊಳ್ಳಲಿದ್ದಾರೆ. ಜಯಣ್ಣ ಕಂಬೈನ್ಸ್​ ಸಂಸ್ಥೆ ಅಡಿ ತಯಾರಾಗುತ್ತಿರುವ ಶಿವಣ್ಣನ ಮೂರನೇ ಸಿನಿಮಾ ಈ ‘ಭಜರಂಗಿ-2'. ಇದು ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಭಾಷೆಗಳಲ್ಲಿ ಸಿನಿಮಾ ತಯಾರಾಗುತ್ತಿದೆ ಎನ್ನಲಾಗಿದೆ.

ABOUT THE AUTHOR

...view details