2006ರಲ್ಲಿ ಹನಿಮೂನ್ ಎಕ್ಸ್ಪ್ರೆಸ್ ಮತ್ತು ತೆನಾಲಿ ರಾಮ ಸಿನಿಮಾ ಮೂಲಕ ನಟ ಜಗ್ಗೇಶ್ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದ ನಟಿ ಸಂತೋಷಿ ಶ್ರೀಕರ್ ಇದೀಗ ಬಿಸಿನೆಸ್ ವುಮೆನ್ ಆಗಿ ಯಶಸ್ಸು ಕಂಡಿದ್ದಾರೆ.
ಬೆಂಗಳೂರಿನಲ್ಲಿ ತಮ್ಮ ಕಂಪನಿಯ ಶಾಖೆ ತೆರೆಯಲು ಸಜ್ಜಾದ ನಟಿ ಸಂತೋಷಿ ಶ್ರೀಕರ್ - Bangalore latest news
ನಟ ಜಗ್ಗೇಶ್ ಅವರೊಂದಿಗೆ ಎರಡು ಸಿನಿಮಾಗಳಲ್ಲಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದ ನಟಿ ಸಂತೋಷಿ ಶ್ರೀಕರ್ ಇದೀಗ ಬಿಸಿನೆಸ್ ವುಮೆನ್ ಆಗಿ ಯಶಸ್ಸು ಕಂಡಿದ್ದು, ಇದೀಗ ಬೆಂಗಳೂರಿನಲ್ಲಿ ತಮ್ಮ ಕಂಪನಿಯ ಶಾಖೆ ಆರಂಭಿಸಲು ಸಜ್ಜಾಗಿದ್ದಾರೆ.
ಕನ್ನಡ, ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿರುವ ಸಂತೋಷಿ ಶ್ರೀಕರ್, 2015ರಲ್ಲಿ ತಮಿಳುನಾಡಿನ ಮಧುರೈನಲ್ಲಿ ಪ್ಲೆಶ್ ಎಂಬ ಕಂಪನಿ ತೆರೆದು ಅದರಲ್ಲಿ ಯಶಸ್ಸು ಕಂಡಿದ್ದಾರೆ. ಇದೀಗ ತಮ್ಮ ಕಂಪನಿಯ ಶಾಖೆಯನ್ನು ಬೆಂಗಳೂರಿನಲ್ಲಿಯೂ ಆರಂಭಿಸಲು ಸಜ್ಜಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಕಲಾವಿದರಿಗೆ ನಟನೆಯೊಂದೇ ಶಾಶ್ವತವಲ್ಲ. ನಟನೆ ಜೊತೆಗೆ ಬೇರೆ ಕ್ಷೇತ್ರದಲ್ಲಿ ನಾವು ಗುರುತಿಸಿಕೊಂಡಿರಬೇಕು.
ಹಾಗಾಗಿ ಸೌಂದರ್ಯ ಕ್ಷೇತ್ರವನ್ನು ಆಯ್ದುಕೊಂಡು ಪ್ಲೆಶ್ ಎಂಬ ಕಂಪನಿಯನ್ನು ಆರಂಭಿಸಿದೆ. ಈ ಕಂಪನಿಯಲ್ಲಿ ವೆಡ್ಡಿಂಗ್ ಮೇಕಪ್, ಡ್ರೆಸ್ ಡಿಸೈನಿಂಗ್, ವೆಡ್ಡಿಂಗ್ ಫೋಟೋಗ್ರಫಿ, ಜ್ಯುವೆಲ್ಲರಿ, ಹೇರ್ ಅಕಾಡೆಮಿ ಸೇರಿದಂತೆ ವಿವಿಧ ಮಾದರಿಗಳಿವೆ. ಸದ್ಯ ಬೆಂಗಳೂರಿನ ಎಂ.ಜಿ. ರೋಡ್ನಲ್ಲಿ ತಮ್ಮ ಕಂಪನಿಯ ಶಾಖೆ ತೆರೆಯಲಾಗುತ್ತಿದೆ ಎಂದರು.