ಕರ್ನಾಟಕ

karnataka

ETV Bharat / sitara

'ನನಸಾದ ಕನಸು...' ಸಿನಿ ಜರ್ನಿ ಬಗ್ಗೆ ಧನ್ಯಾ ರಾಮ್​ಕುಮಾರ್​ ಮನದ ಮಾತು - Etv Bharat Interview

ಚೊಚ್ಚಲ ಸಿನಿಮಾ ಬಿಡುಗಡೆಯಾದ ಖುಷಿಯಲ್ಲಿರುವ ಧನ್ಯಾರಾಮ್ ಕುಮಾರ್ ತಮ್ಮ ಸಿನಿ ಜರ್ನಿಯ ಕುರಿತು ಈಟಿವಿ ಭಾರತದ ‌ಜೊತೆ ಮಾತನಾಡಿದರು.

Actress Dhanya Ramkumar
ಧನ್ಯಾ ರಾಮ್​ಕುಮಾರ್​ ಸಂದರ್ಶನ

By

Published : Oct 5, 2021, 8:13 AM IST

ಡಾ. ರಾಜ್ ಕುಮಾರ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ 'ನಿನ್ನ ಸನಿಹಕೆ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಪೂರ್ಣಿಮಾ ಹಾಗೂ ರಾಮ್‌ ಕುಮಾರ್ ದಂಪತಿಯ ಪುತ್ರಿ ಇದೀಗ ಹೀರೋಯಿನ್ ಆಗಿ ಬೆಳ್ಳಿತೆರೆ ಮೇಲೆ ಮಿಂಚಲಿದ್ದಾರೆ.

ಧನ್ಯಾ ರಾಮ್‌ ಕುಮಾರ್ ಸಿಲ್ವರ್ ಸ್ಕ್ರೀನ್​ನಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ? ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಇದಕ್ಕೆ 'ನಿನ್ನ ಸನಿಹಕೆ' ಚಿತ್ರದ ಹಾಡುಗಳು ಮತ್ತು ಟ್ರೈಲರ್​ನಲ್ಲಿ ಉತ್ತರ ಸಿಕ್ಕಿದೆ.

ತಂದೆ, ತಾಯಿ ಆಸೆಯಂತೆ ಪತ್ರಿಕೋದ್ಯಮದಲ್ಲಿ ಪದವಿ ಪಡೆದು, ಒಂದು ವರ್ಷಗಳ‌ ಕಾಲ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಧನ್ಯಾ, ಬಳಿಕ ಕಾಲಿಟ್ಟಿದ್ದು ಚಿತ್ರರಂಗಕ್ಕೆ. ಮಾಡಲಿಂಗ್ ಮಾಡುತ್ತಿದ್ದ ಅವರಿಗೆ 'ನಿನ್ನ ಸನಿಹಕೆ' ಸಿನಿಮಾ ತುಂಬಾನೇ ಸ್ಪೆಷಲ್. ಏಕೆಂದರೆ ಧನ್ಯಾ ಹೇಳುವ ಹಾಗೇ, ಈ ಸಿನಿಮಾದಲ್ಲಿ ಹೀರೋಯಿನ್ ಆಗಿ ತನ್ನ‌ ಟ್ಯಾಲೆಂಟ್​ ಪ್ರೂವ್ ಮಾಡಿಕೊಳ್ಳಲು ಅವಕಾಶ ಸಿಕ್ಕಿದೆಯಂತೆ.

ಧನ್ಯಾ ರಾಮ್​ಕುಮಾರ್​ ಸಂದರ್ಶನ

ಚೊಚ್ಚಲ ಸಿನಿಮಾದಲ್ಲಿ ನಟನೆಗೆ ಅವಕಾಶ ಸಿಕ್ಕಿದ್ದು ಅವರ ಗೆಳೆಯರಿಂದ. ಈ ಸಿನಿಮಾ ಕಥೆಯನ್ನ‌ು ಸೂರಜ್ ಗೌಡ ಬಂದು ಹೇಳಿದಾಗ ಷೋಷಕರು ಒಪ್ಪಿಗೆ ನೀಡಿದ್ದಾರೆ. ಮಗಳು ಬೆಳ್ಳಿತೆರೆಯಲ್ಲಿ ಹೀರೋಯಿನ್ ಆಗಿ ನಟಿಸುತ್ತಾರೆ ಎಂದು ತಿಳಿದಾಗ ತಂದೆ-ತಾಯಿ ಪ್ರೋತ್ಸಾಹ ನೀಡಿದ್ದಾರೆ. ಆದರೆ ಇದಕ್ಕೂ ಮೊದಲು ತಾಯಿಯ ಜೊತೆ ಹೀರೋಯಿನ್ ಆಗ್ತೀನಿ ಅಂದಾಗಲೂ ಸಪೋರ್ಟ್ ಸಿಕ್ಕಿದೆಯಂತೆ.

ಆದರೆ ಇದೇ ಮಾತನ್ನ‌ು ತಂದೆ ರಾಮ್ ಕುಮಾರ್ ಹತ್ತಿರ ಹೇಳಿದಾಗ, "ನೀನು ಸಿನಿಮಾ ಮಾಡಬೇಕಾ, ಯಾಕೆ ಮಾಡಬೇಕು" ಎಂದು ಪ್ರಶ್ನಿಸಿದ್ದಾರೆ. ಆಗ ಧನ್ಯಾ, "ನಾನು ಹೀರೋಯಿನ್ ಆಗೋದಿಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡ್ತೀನಿ" ಎಂದರಂತೆ. ಆ ಬಳಿಕ ರಾಮ್​ಕುಮಾರ್​ ಒಪ್ಪಿಗೆ ಸೂಚಿಸಿದ್ದಾರೆ.

ಧನ್ಯಾ ರಾಮ್​ಕುಮಾರ್​ ಸಂದರ್ಶನ

ತಾನು ರಾಜ್ ಕುಮಾರ್ ಮೊಮ್ಮಗಳು, ರಾಮ್ ಕುಮಾರ್ ಮಗಳು ಎಂಬ ಬ್ರಾಂಡ್​ ಪಕ್ಕಕ್ಕಿಟ್ಟು ಅಭಿನಯ ತರಂಗದಲ್ಲಿ ಆರು ತಿಂಗಳ‌ ಕಾಲ ಧನ್ಯಾ ಆಕ್ಟಿಂಗ್ ಅಭ್ಯಾಸ ಮಾಡಿದ್ದಾರೆ. ಗೌರಿದತ್ತು ನಟನಾ ಕಲಿಕೆಯಿಂದ ನಟನೆ ಬಗ್ಗೆ ಕಲಿತುಕೊಂಡಿದ್ದಾರೆ.

ಧನ್ಯಾ ರಾಮ್​ಕುಮಾರ್​ ಸಂದರ್ಶನ

ಸ್ಟಾರ್ ಕುಟುಂಬದಲ್ಲಿ ಹುಟ್ಟಿದ ಈ ಯುವತಿ ನಟಿಯಾಗಬೇಕು ಅಂತಾ ಬಾಲ್ಯದಲ್ಲೇ ಕನಸು ಕಂಡವರು. ಅಪ್ಪ ಮತ್ತು ತಾತನ ಜೊತೆ ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಸಿನಿಮಾ ಶೂಟಿಂಗ್ ಸ್ಪಾಟ್​ಗೆ ಹೋಗುತ್ತಿದ್ದ ಅವರು ತಮ್ಮ ಕನಸನ್ನು ಮತ್ತಷ್ಟು ಬಿಗಿಗೊಳಿಸಿಕೊಂಡವರು. ಈಗ ಆ ಕನಸು ನನಸಾಗುತ್ತಿದೆ ಎನ್ನುತ್ತಾರೆ ಧನ್ಯಾರಾಮ್ ಕುಮಾರ್.

ABOUT THE AUTHOR

...view details