ಚೆನ್ನೈ, ತಮಿಳುನಾಡು : ಕಾಲಿವುಡ್ ನಟ ವಿಶಾಲ್ಗೆ ಮದ್ರಾಸ್ ಹೈಕೋರ್ಟ್ನಲ್ಲಿ ಪ್ರಕರಣವೊಂದರ ವಿರುದ್ಧ ಜಯ ಸಿಕ್ಕಿದೆ. ಲೈಕಾ ಪ್ರೊಡಕ್ಷನ್ಸ್ (LYCA Productions ) ನಟ ವಿಶಾಲ್ ವಿರುದ್ಧ ದಾಖಲಿಸಿದ್ದ ದೂರನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಪ್ರಕರಣವನ್ನು ವಜಾಗೊಳಿಸಿ, ಲೈಕಾ ಪ್ರೊಡಕ್ಷನ್ಸ್ ಕಂಪನಿಗೆ ಐದು ಲಕ್ಷ ರೂಪಾಯಿ ದಂಡ ವಿಧಿಸಿದೆ.
ನಟ ವಿಶಾಲ್ ಮತ್ತು ವಿಶಾಲ್ ಅಭಿನಯದ ಸಿನಿಮಾ ಚಕ್ರ ವಿರುದ್ಧ ಲೈಕಾ ಪ್ರೊಡಕ್ಷನ್ ದೂರು ದಾಖಲಿಸಿತ್ತು. ನಾವು ವಿಶಾಲ್ಗೆ 21.29 ಕೋಟಿ ರೂಪಾಯಿಗಳನ್ನು ನೀಡಿದ್ದು, ವಿಶಾಲ್ ಬಡ್ಡಿ ಮೊತ್ತವನ್ನು ಸೇರಿಸಿ ಸುಮಾರು 30 ಕೋಟಿ ರೂಪಾಯಿಯನ್ನು ನೀಡಲು ಆದೇಶಿಸಬೇಕು ಎಂದು ದೂರಿನಲ್ಲಿ ಲೈಕಾ ಪ್ರೊಡಕ್ಷನ್ ಉಲ್ಲೇಖಿಸಿತ್ತು.
ಈ ದೂರಿನ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಪ್ರಕರಣವನ್ನು ವಜಾ ಮಾಡಿದೆ. ಈ ಕುರಿತು ಟ್ವಿಟರ್ನಲ್ಲಿ ಬರೆದುಕೊಂಡಿರುವ ವಿಶಾಲ್ ' ನ್ಯಾಯ ರಕ್ಷಿಸಲ್ಪಡುತ್ತದೆ. ಸತ್ಯಕ್ಕೆ ಜಯ ಸಿಗುತ್ತದೆ. ನನ್ನ ಮತ್ತು ನನ್ನ ಸಿನಿಮಾ ವಿರುದ್ಧ ಲೈಕಾ ದಾಖಲಿಸಿದ್ದ ಸುಳ್ಳು ದೂರನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ಮತ್ತು ಐದು ಲಕ್ಷ ರೂಪಾಯಿ ದಂಡ ವಿಧಿಸಿದೆ ಎಂದಿದ್ದಾರೆ.
ಇನ್ನು ಚಕ್ರ ಸಿನಿಮಾವನ್ನು ಎಂ.ಎಸ್.ಆನಂದನ್ ನಿರ್ದೇಶಿಸಿದ್ದು, ವಿಶಾಲ್, ಶ್ರದ್ಧಾ ಶ್ರೀನಾಥ್ ಮತ್ತು ರೆಜಿನಾ ಕ್ಯಾಸ್ಸಂದ್ರ ನಟಿಸಿದ್ದಾರೆ. ವಿಶಾಲ್ ಮಿಲಿಟರಿ ಅಧಿಕಾರಿಯಾಗಿ ಮತ್ತು ಶ್ರದ್ಧಾ ಶ್ರೀನಾಥ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:'ಲಾಲ್ ಸಿಂಗ್ ಚಡ್ಡಾ' : ಮಗ 'ಜೇ' ಅನ್ನು ಹೊತ್ತು ರೊಮ್ಯಾಂಟಿಕ್ ಸಾಂಗ್ ಮುಗಿಸಿದ್ದ ಕರೀನಾ..!